ರಾಮನಾಥಿ,ಜೂನ್22(ಸುದ್ದಿ)- ಹೊಸ ಸಂಘಟನೆಯನ್ನು ಸ್ಥಾಪಿಸುವಾಗ ಧ್ಯೇಯವನ್ನು ನಿರ್ಧರಿಸುವುದು ಆವಶ್ಯಕತೆ ಇದೆ. ಧ್ಯೇಯವನ್ನು ಇಟ್ಟು ಕೊಳ್ಳುವುದರಿಂದ ಸಂಘಟನೆಯ ಕಾರ್ಯಕ್ಕೆ ದಿಕ್ಕು ಮತ್ತು ವೇಗ .ಸಿಗುತ್ತದೆ. ಅದರಂತೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಯೊಂದು ಹಿಂದುತ್ವನಿಷ್ಠ ಸಂಘಟನೆಗಳು ಧ್ಯೇಯವನ್ನು ನಿರ್ಧರಿಸಿ ಕಾರ್ಯವನ್ನು ಮಾಡುವ ಆವಶ್ಯಕತೆಯಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಪಂಡಿತ ಮತ್ತು ಮಹಾತ್ಮ ಇವರು ಸರ್ವಧರ್ಮ ಸಮಭಾವದ ಕಥೆಯನ್ನು ಭಾರತೀಯರ ಮೇಲೆ ಹೇರಿದರು. ಅದು ಸಂಪೂರ್ಣ ಹಿಂದೂ ಧರ್ಮವನ್ನು ಸುತ್ತುವರಿದಿದೆ. ಸನಾತನ ಧರ್ಮದ ಜ್ಞಾನ ಪರಂಪರೆ (ಬ್ರಾಹ್ಮ ತೇಜ)ಮತ್ತು ಶೌರ್ಯ ಪರಂಪರೆ(ಕ್ಷಾತ್ರ ತೇಜ)ಗಳ ಪಾಲನೆಯಾಗಬೇಕು. ಭಾರತದಲ್ಲಿ ಇರುವ ಜ್ಞಾನ ಪರಂಪರೆಯನ್ನು ನೋಡಿ ಸಂಪೂರ್ಣ ಜಗತ್ತು ಭಾರತದೆಡೆಗೆ ಆಕರ್ಷಿಸಲ್ಪಡುತ್ತಿವೆ. ಹಿಂದೂಗಳ ಶಾಸ್ತ್ರ ಮತ್ತು ವಿಜ್ಞಾನ ಪರಿಪೂರ್ಣವಾಗಿದೆ. ಇದರಿಂದ ಹಿಂದೂ ಧರ್ಮ ಸಿದ್ಧಾಂತ ಕೇವಲ ಭಾರತಕ್ಕೆ ಮಾತ್ರವಲ್ಲ ಸಂಪೂರ್ಣ ಜಗತ್ತಿಗೆ ಮಾರ್ಗದರ್ಶಕ ವಾಗಿದೆಯೆಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳರು ಉದ್ಗರಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ 7ನೇ ದಿನದಂದು ಉಪಸ್ಥಿತರನ್ನು ಸಂಬೋಧಿಸಿ ಮಾತನಾಡುತ್ತಿದ್ದರು.