ಉತ್ತರಪ್ರದೇಶದಲ್ಲಿನ ಶಾಲೆಯಲ್ಲಿ ಮತ್ತು ಮಹಾವಿದ್ಯಾಲಯಗಳಲ್ಲಿನ ಪಠ್ಯಕ್ರಮದಲ್ಲಿ ಬದಲಾವಣೆ
ಪ್ರಯಾಗರಾಜ (ಉತ್ತರ ಪ್ರದೇಶ) – ಉತ್ತರಪ್ರದೇಶ ಶಿಕ್ಷಣ ಇಲಾಖೆಯಿಂದ ರಾಜ್ಯದ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದೆ. ಈಗ ಪಠ್ಯಪುಸ್ತಕದ ಮೂಲಕ ಸ್ವಾತಂತ್ರ್ಯ ವೀರ ಸಾವರ್ಕರ ಸಹಿತ ೫೦ ಮಹಾಪುರುಷರ ಜೀವನ ಚರಿತ್ರೆ ಕಲಿಸಲಾಗುವುದು. ಇದರಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ, ಮಹಾವೀರ ಜೈನ್, ಪಂಡಿತ ಮದನ ಮೋಹನ ಮಾಲವಿಯ, ಅರವಿಂದ ಘೋಷ, ನಾನಾ ಸಾಹೇಬ ಪೇಶವೆ, ಮುಂತಾದರ ಸಮಾವೇಶವಿದೆ.
ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ ಈ ಮಾಹಿತಿ ನೀಡಲಾಗಿದೆ. ಶಿಕ್ಷಣ ಇಲಾಖೆವು ಪಠ್ಯಕ್ರಮವನ್ನು ರಾಜ್ಯದಲ್ಲಿನ ೨೭ ಸಾವಿರಕ್ಕಿಂತಲೂ ಹೆಚ್ಚಿನ ಶಾಲೆಗಳಲ್ಲಿ ೯ ನೇ ತರಗತಿಯಿಂದ ೧೨ ನೇ ತರಗತಿಯವರೆಗೆ ೧ ಕೋಟಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿಕಲಿಸುವವರಿದ್ದಾರೆ.
Veer Savarkar’s biography added to UP board syllabus, passing this subject compulsory#UttarPradesh https://t.co/fPjvttqzmH
— IndiaToday (@IndiaToday) June 23, 2023
೧. ೯ನೇ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ ಚಂದ್ರಶೇಖರ ಆಜಾದ, ಬಿರಸಾ ಮುಂಡಾ, ವೀರ ಕುಂವರ ಸಿಂಹ, ಈಶ್ವರಚಂದ್ರ ವಿದ್ಯಾಸಾಗರ, ಗೌತಮ ಬುದ್ಧ, ಛತ್ರಪತಿ ಶಿವಾಜಿ ಮಹಾರಾಜ, ಸ್ವಾತಂತ್ರ್ಯ ವೀರ ಸಾವರ್ಕರ, ವಿನೋಬಾ ಭಾವೆ, ಶ್ರೀನಿವಾಸ ರಾಮಾನುಜನ, ಜಗದೀಶ ಚಂದ್ರ ಬೋಸ ಮುಂತಾದವರ ಜೀವನ ಚರಿತ್ರೆ ಕಲಿಸಲಾಗುವುದು.
೨. ೧೦ ನೇ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ ಮಂಗಲ ಪಾಂಡೆ, ಸುಖದೇವ, ಲೋಕಮಾನ್ಯ ತಿಲಕ, ಗೋಪಾಲಕೃಷ್ಣ ಗೋಖಲೆ, ಖುದಿರಾಮ ಬೋಸ, ಸ್ವಾಮಿ ವಿವೇಕಾನಂದ ಮುಂತಾದವರ ಜೀವನ ಚರಿತ್ರೆ ಕಲಿಯುವರು.
೩. ೧೧ ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಮ ಪ್ರಸಾದ ಬಿಸ್ಮಿಲ, ಭಗತಸಿಂಹ, ಸರದಾರ ವಲ್ಲಭಾಯಿ ಪಟೇಲ, ಮಹರ್ಷಿ ಪತಂಜಲಿ, ಶಲ್ಯ ಚಿಕಿತ್ಸಕ ಸುಶ್ರುತ, ಡಾ. ಹೋಮಿ ಜಹಾಂಗೀರ ಬಾಬಾ ಮುಂತಾದ ವಿಷಯಗಳು ಪಾಠ ಕಲಿಯುವರು.೪ . ೧೨ ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಮಕೃಷ್ಣ ಪರಮಹಂಸ, ಗಣೇಶ ಶಂಕರ ವಿದ್ಯಾರ್ಥಿ, ರಾಜಗುರು, ರವೀಂದ್ರನಾಥ ಟಾಗೋರ, ಲಾಲ ಬಹದ್ದೂರ ಶಾಸ್ತ್ರಿ, ರಾಣಿ ಲಕ್ಷ್ಮೀಬಾಯಿ, ಮಹಾರಾಣಾ ಪ್ರತಾಪ, ಬಂಕಿಮ ಚಂದ್ರ ಚಟರ್ಜಿ, ಆದಿ ಶಂಕರಾಚಾರ್ಯ, ಗುರು ನಾನಕ ದೇವ, ಡಾ. ಎಪಿಜೆ ಅಬ್ದುಲ್ ಕಲಾಂ, ರಾಮಾನುಜಾಚಾರ್ಯ, ಪಾಣಿನಿ, ಆರ್ಯಭಟ್ಟ ಮತ್ತು ಸಿ ವಿ ರಾಮನ ಇವರ ಪಾಠ ಕಲಿಸಲಾಗುವುದು.