ಪಾಕಿಸ್ತಾನದ ಕರಾಚಿ ಬಂದರನ್ನು ಮುಂದಿನ ೫೦ ವರ್ಷಕ್ಕಾಗಿ ಸಂಯುಕ್ತ ಆರಾಬ್ ಅಮೀರಾತಗೆ ನೀಡುವ ಸಾಧ್ಯತೆ

ಇಸ್ಲಾಮಬಾದ (ಪಾಕಿಸ್ತಾನ) – ದಿವಾಳಿಯ ಹೊಸ್ತಿಲಿನಲ್ಲಿರುವ ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿ ನಗರದಲ್ಲಿನ ಬಂದರಿನ ಮೇಲೆ ಮುಂದಿನ ೫೦ ವರ್ಷ ಸಂಯುಕ್ತ ಅರಾಬ್ ಅಮೀರಾತದ ನಿಯಂತ್ರಣ ಇರುವುದು. ಪಾಕಿಸ್ತಾನಕ್ಕೆ ಸಾಲ ನೀಡುವುದರ ಬದಲು ಈ ಬಂದರ ಸಂಯುಕ್ತ ಅರಬ್ ಅಮಿರಾತಗೆ ನೀಡಲಾಗುವುದು. ಶೀಘ್ರದಲ್ಲಿಯೇ ಇದರ ನಿರ್ಣಯ ತೆಗೆದುಕೊಳ್ಳಲಾಗುವುದು. ಅಂತಾರಾಷ್ಟ್ರೀಯ ನಾಣ್ಯ ನಿಧಿಯ ಸಾಲ ತೀರಿಸುವುದಕ್ಕಾಗಿ ಪಾಕಿಸ್ತಾನ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.