ಹಿಂದೂ ಯುವತಿಯರಿಗೆ ಗೌರವಶಾಲಿ ಸಾಂಸ್ಕೃತಿಕ ಇತಿಹಾಸವನ್ನು ಹೇಳಿದರೆ, `ಲವ್ ಜಿಹಾದ’ ಗೆ ವಿರೋಧವಷ್ಟೇ ಅಲ್ಲ, ಪ್ರತಿಕಾರವೂ ನಡೆಯಬಹುದು ! – ಆನಂದ ಜಾಖೋಟಿಯಾ, ರಾಜ್ಯ ಸಮನ್ವಯಕರು, ಮಧ್ಯಪ್ರದೇಶ ಮತ್ತು ರಾಜಸ್ಥಾನ, ಹಿಂದೂ ಜನಜಾಗೃತಿ ಸಮಿತಿ

ಆನಂದ ಜಾಖೋಟಿಯಾ, ರಾಜ್ಯ ಸಮನ್ವಯಕರು, ಮಧ್ಯಪ್ರದೇಶ ಮತ್ತು ರಾಜಸ್ಥಾನ, ಹಿಂದೂ ಜನಜಾಗೃತಿ ಸಮಿತಿ

ರಾಮನಾಥಿ, ಜೂನ 21(ಸುದ್ದಿ)- `ದಿ ಕೇರಳಾ ಸ್ಟೋರಿ’ ಚಲನಚಿತ್ರವು ಭಾರತದ `ಲವ್ ಜಿಹಾದ’ ಷಡ್ಯಂತ್ರ ಮತ್ತು ಅದು `ಇಸ್ಲಾಮಿಕ್ ಸ್ಟೇಟ’ನ ಜಾಗತಿಕ ಭಯೋತ್ಪಾದನೆಯೊಂದಿಗೆ ನಂಟಿರುವುದನ್ನು ಸಿದ್ಧಗೊಳಿಸಿ ತೋರಿಸಿದೆ; ಆದರೆ ತಥಾಕಥಿತ ಸೆಕ್ಯುಲರವಾದಿಗಳು ಈ ಚಲನಚಿತ್ರವನ್ನು ಹಲವೆಡೆ ವಿರೋಧಿಸಿದರು. ಕೆಲವೆಡೆ ನಿಷೇಧಿಸಿದರು. ಕೆಲವೊಂದು ಸ್ಥಳಗಳಲ್ಲಿ ಚಿತ್ರಮಂದಿರಗಳಲ್ಲಿ ತೋರಿಸಲು ನಿರಾಕರಿಸಿದವು. ಭಾರತದ ಹೆಣ್ಣುಮಕ್ಕಳನ್ನು ಯಾರಾದರೂ ಪ್ರೇಮದ ಜಾಲದಲ್ಲಿ ಸಿಲುಕಿಸಿ, ಅವರ ಧರ್ಮ, ತಂದೆ-ತಾಯಿ, ಸಂಸ್ಕೃತಿ, ಅಸ್ತಿತ್ವ ಎಲ್ಲವನ್ನೂ ಕಸಿದುಕೊಂಡು ಅವರನ್ನು ತಮ್ಮದೇ ದೇಶದ-ಧರ್ಮದ –ಕುಟುಂಬದ ವಿರುದ್ಧ `ಜಿಹಾದ’ ಮಾಡಲು ಸಿದ್ಧಗೊಳಿಸಿದರು. ಇದು ಸಾಮಾನ್ಯ ವಿಷಯವಲ್ಲ. ಆದರೆ ಮುಸಲ್ಮಾನರ ಮತಗಳನ್ನು ಗಳಿಸಲು ಚಲನಚಿತ್ರವನ್ನು ವಿರೋಧಿಸಲಾಯಿತು. ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಯಾವ ಸೆಕ್ಯುಲರವಾದಿಗಳು ಈ ಚಲನಚಿತ್ರವನ್ನು ಸ್ವೀಕರಿಸಲು ಸಿದ್ಧರಿಲ್ಲವೋ, ಅವರು ಪ್ರತ್ಯಕ್ಷವಾಗಿ ಲವ್ ಜಿಹಾದನ ಭಯಾನಕತೆಯನ್ನು ಹೇಗೆ ತಾನೇ ಸ್ವೀಕರಿಸುವರು? ಇವರು ಹಿಂದೂ ಹುಡುಗಿಯರ ರಕ್ಷಣೆಗಾಗಿ ಪ್ರಯತ್ನಿಸುವರೇ? ಇದರ ಪರಿಣಾಮದಿಂದ ದೇಶಾದ್ಯಂತ ಲವ್ ಜಿಹಾದ ಘಟನೆಗಳು ಹೆಚ್ಚಾಗುತ್ತಿದೆ. ಈ ಸಂಕಟವನ್ನು ತಡೆಯಲು ನಮ್ಮ ಹೆಣ್ಣು ಹುಡುಗಿಯರಿಗೆ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಮಹಾರಾಣಾ ಪ್ರತಾಪರ ಜೀವನ, ಹಾಗೆಯೇ ಛತ್ರಪತಿ ಸಂಭಾಜಿ ಮಹಾರಾಜ, ರಾಣಿ ಲಕ್ಷ್ಮೀಬಾಯಿ, ರಾಣಿ ಪದ್ಮಾವತಿಯವರು ಧರ್ಮಕ್ಕಾಗಿ ಮಾಡಿರುವ ಗೌರವಪೂರ್ಣ ತ್ಯಾಗವನ್ನು ಹೇಳಬೇಕಾಗುವುದು. ಹಿಂದೂ ಯುವತಿಯರ ವರೆಗೆ ಪರಾಕ್ರಮದ ಇತಿಹಾಸ ತಲುಪಿಸಿದರೆ, ಲವ್ ಜಿಹಾದ್ ಗೆ ಕೇವಲ ವಿರೋಧವಷ್ಟೇ ಅಲ್ಲ, ಬದಲಾಗಿ ಪ್ರತಿಕಾರವೂ ಆಗುವುದು. ಇದರೊಂದಿಗೆ ಹಿಂದೂ ಯುವತಿಯರಲ್ಲಿ ಲವ್ ಜಿಹಾದ ಸಂದರ್ಭದಲ್ಲಿ ಜಾಗೃತಿಗೊಳಿಸುವುದು, ಅವರಿಗೆ ಹಿಂದೂ ಧರ್ಮಶಾಸ್ತ್ರದ ಸಂದರ್ಭದಲ್ಲಿ ಶಿಕ್ಷಣ ನೀಡುವುದು, ವಿವಿಧ ಸಮಾಜಘಟಕಗಳತ್ತ ಹೋಗಿ ಪ್ರವಚನ ಮತ್ತು ಸಂಘಟನೆ ಮಾಡುವುದು, ಅವರಿಗೆ ಸ್ವರಕ್ಷಣೆ ತರಬೇತಿಯನ್ನು ನೀಡುವುದು, ಯಾವ ಹಿಂದೂ ಹುಡುಗಿಯರು ಪುನಃ ಹಿಂದೂ ಧರ್ಮದಲ್ಲಿ ಪ್ರವೇಶ ಪಡೆಯಲು ಇಚ್ಛಿಸುತ್ತಾರೆಯೋ, ಅಂತಹವರಿಗಾಗಿ ಘರವಾಪಸಿಯ ಯೋಜನೆಯನ್ನು ರೂಪಿಸುವುದು, ಲವ್ ಜಿಹಾದ ವಿರುದ್ಧ ರಚಿಸಿರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಪ್ರಯತ್ನಿಸುವುದು ಮತ್ತು ಆಂದೋಲನ ಮಾಡುವುದು ಇಂತಹ ವಿವಿಧ ಉಪಾಯಯೋಜನೆಗಳನ್ನು ಮಾಡಬೇಕಾಗಲಿದೆಯೆಂದು ಹಿಂದೂ ಜನಜಾಗೃತಿ ಸಮಿತಿಯ ಮಧ್ಯಪ್ರದೇಶ ಮತ್ತು ರಾಜಸ್ಥಾನದ ರಾಜ್ಯ ಸಮನ್ವಯಕರಾದ ಶ್ರೀ. ಆನಂದ ಜಾಖೋಟಿಯಾ ಇವರು ಉದ್ಗರಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 6ನೇಯ ದಿನದಂದು (21.6.2023 ರಂದು) ಉಪಸ್ಥಿತರನ್ನು ಸಂಬೋಧಿಸಿ ಮಾತನಾಡುತ್ತಿದ್ದರು.