ಸಾಮಾಜಿಕ ದುಷ್ಪವೃತ್ತಿಯ ವಿರುದ್ಧ ಕಾನೂನು ರೀತ್ಯಾ ಹೋರಾಡಲು ಹಿಂದೂ ಜನಜಾಗೃತಿ ಸಮಿತಿಯಿಂದ ಸುರಾಜ್ಯ ಅಭಿಯಾನ ! – ವಿಶ್ವನಾಥ ಕುಲಕರ್ಣಿ, ರಾಜ್ಯ ಸಮನ್ವಯಕರು, ಪೂರ್ವ ಉತ್ತರಪ್ರದೇಶ ಮತ್ತು ಬಿಹಾರ

ವಿಶ್ವನಾಥ ಕುಲಕರ್ಣಿ, ರಾಜ್ಯ ಸಮನ್ವಯಕರು, ಪೂರ್ವ ಉತ್ತರಪ್ರದೇಶ ಮತ್ತು ಬಿಹಾರ

ರಾಮನಾಥಿ,ಜೂನ್ ೨೧ (ವಾರ್ತೆ) – ಇಂದು ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಬೀಡು ಬಿಟ್ಟಿದೆ. ಇದರ ಬಗ್ಗೆ ಎಲ್ಲರೂ ಅಸಮಾಧಾನದಿಂದಿದ್ದಾರೆ, ಆದರೆ ಅದರ ಬಗ್ಗೆ ಏನು ಮಾಡಬಹುದು ಎಂದು, ತಿಳಿಯದ ಕಾರಣ ಅವರು ಭ್ರಷ್ಟ ವ್ಯವಸ್ಥೆಯಲ್ಲಿ ಸಿಲುಕಿ ಅದರ ಒಂದು ಭಾಗವಾಗುತ್ತಾರೆ. ಇಂತಹ ಸಾಮಾಜಿಕ ದುಷ್ಪವೃತ್ತಿಯ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಡುವುದಕ್ಕಾಗಿ ೨೦೧೭ ರಲ್ಲಿ ಅಕ್ಷಯ ತದಿಗೆಯ ಶುಭ ಮುಹೂರ್ತದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಸುರಾಜ್ಯ ಅಭಿಯಾನ ಆರಂಭವಾಯಿತು. ಸರಕಾರಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಅವ್ಯವಹಾರಗಳ ವಿರುದ್ಧ ಸಂವಿದಾನತ್ಮಕವಾಗಿ ಹೋರಾಡುವುದು ಮತ್ತು ಜನಜಾಗೃತಿ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಸುರಾಜ್ಯ ಅಭಿಯಾನ ಇದು ನಮ್ಮ ದಿನನಿತ್ಯದ ಜೀವನದಲ್ಲಿ ಪ್ರತಿಯೊಂದು ವಿಷಯದಲ್ಲಿ ಸಂಬಂಧಿತ ಸಮಸ್ಯೆಗಳಿಗಾಗಿ ಇದೆ. ಆದ್ದರಿಂದ ನಾವು ನಿಮ್ಮೆಲ್ಲರಿಗೂ ಕರೆ ನೀಡುತ್ತೇವೆ ಏನೆಂದರೆ, ನಿಮ್ಮ ಪರಿಸರದಲ್ಲಿ ನಡೆಯುವ ಅವ್ಯವಹಾರದ ವಿರುದ್ಧ ಕಾನೂನುಸಮ್ಮತ ರೀತಿಯಲ್ಲಿ ಹೋರಾಡಲು ಆರಂಭಿಸಿರಿ. ಇದು ಕೂಡ ಹಿಂದೂ ರಾಷ್ಟ್ರದ ಸ್ಥಾಪನೆಯ ಒಂದು ಕಾರ್ಯದ ಮುಖ್ಯ ಭಾಗವಾಗಿದೆ , ಎಂದು ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದ ಸಮನ್ವಯಕರಾದ ಶ್ರೀ ವಿಶ್ವನಾಥ ಕುಲಕರ್ಣಿ ಇವರು ಹೇಳಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೆಯ ದಿನದಂದು (೨೧.೬.೨೦೨೩ ರಂದು) ಉಪಸ್ಥಿತರನ್ನು ಸಂಭೋಧಿಸುತ್ತಿದ್ದರು.