ರಾಷ್ಟ್ರದ ಉತ್ಥಾನಕ್ಕಾಗಿ ಯೋಗ ಮತ್ತು ಆಧ್ಯಾತ್ಮದ ಅವಶ್ಯಕತೆ ! – ಡಾ. ಸತ್ಯಮೇವ ಜಯತೆ ಲೋಕ ಮಂಗಲ, ಅಧ್ಯಕ್ಷರು, ಸತ್ಯಮೇವ ಜಯತೆ

ಡಾ. ಸತ್ಯಮೇವ ಜಯತೆ ಲೋಕ ಮಂಗಲ

ಭಾರತ ಸ್ವತಂತ್ರ ಆದ ನಂತರ ಸರಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ನಿಂತಿಲ್ಲ. ಸರಕಾರಿ ಕಚೇರಿಗಳು, ಶಾಲೆಗಳು ಇವುಗಳಲ್ಲಿ ಯೋಗ ಮತ್ತು ಅಧ್ಯಾತ್ಮದ ಶಿಕ್ಷಣ ನೀಡಿದರೆ ಭ್ರಷ್ಟಾಚಾರ ತಡೆಯಬಹುದು. ಆಧ್ಯಾತ್ಮ ಇದು ಭಾರತದ ಶಕ್ತಿಯಾಗಿದೆ. ಸರಕಾರ ಇದರ ಕಡೆಗೆ ಗಮನ ನೀಡುವುದು ಅವಶ್ಯಕ ಇದೆ. ಆಧ್ಯಾತ್ಮ ಇಲ್ಲದೆ ಭಾರತ ದುರ್ಬಲವಾಗಿದೆ. ಸಮಾಜದಲ್ಲಿ ಆಧ್ಯಾತ್ಮದ ಪ್ರಸಾರ ಮಾಡಿದರೆ ರಾಷ್ಟ್ರ ನಿರ್ಮಾಣದ ಕಾರ್ಯ ಸುಲಭವಾಗುವುದು. ಸರಕಾರಿ ಕಚೇರಿಗಳಲ್ಲಿ ಆಧ್ಯಾತ್ಮ, ಧ್ಯಾನಧಾರಣೆ ಮತ್ತು ಯೋಗದ ಶಿಕ್ಷಣ ನೀಡಿದ್ದರೆ ಆಗ ಸುರಾಜ್ಯದ ಪರಿಕಲ್ಪನೆ ಸಾಧ್ಯವಾಗುತ್ತಿತ್ತು. ‘ಆಧ್ಯಾತ್ಮ’ ಇದು ಭಾರತದ ಶ್ರೇಷ್ಠತೆಯಾಗಿದೆ. ಎಲ್ಲಾ ಹಿಂದೂ ಸಮಾಜ ಆಧ್ಯಾತ್ಮವನ್ನು ಅಂಗೀಕರಿಸುವರೋ, ಆಗ ಭಾರತ ಸೂರ್ಯನಂತೆ ತೇಜಸ್ವಿಯಾಗುವುದು. ‘ವಸುದೈವ ಕುಟುಂಬಕಂ’ ಇದು ನಮ್ಮ ಧ್ಯೇಯವಾಗಿದೆ. ಹಿಂದುಗಳು ಸಾಧನೆ ಮಾಡಿದರೆ ಮಾತ್ರ ಅದರ ಪರಿಕಲ್ಪನೆ ಸಾಧ್ಯವಾಗಬಹುದು. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವಾಗ ಮುಂದಿನ ಒಂದು ಸಾವಿರ ವರ್ಷದ ಯೋಜನೆ ನಿಶ್ಚಿತಗೊಳಿಸಬೇಕು, ಎಂದು ಸತ್ಯಮೇವ ಜಯತೆ ಸಂಘಟನೆಯ ಅಧ್ಯಕ್ಷ ಡಾ. ಸತ್ಯಮೇವ ಜಯತೆ ಲೋಕಮಂಗಲ ಇವರು ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೆಯ ದಿನ (೨೦.೬.೨೦೨೩ ರಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.