ರಾಮನಾಥ ದೇವಸ್ಥಾನ – ಕೇರಳದ ಸ್ಥಿತಿ ಅತ್ಯಂತ ಭಯಾನಕವಾಗಿದೆ. ಅಲ್ಲಿ ಮುಸಲ್ಮಾನ ಪಂಥದವರ ಜನಸಂಖ್ಯೆ ಶೇ. 30 ರಷ್ಟು ಆಗಿದೆ. ಇದರಿಂದ ಕಾಶ್ಮೀರದಂತಹ ಪರಿಸ್ಥಿತಿಯುಂಟಾಗುತ್ತಿದೆ. ಹಿಂದುತ್ವನಿಷ್ಠರು ಕಮ್ಯುನಿಸ್ಟ ಮತ್ತು ಮತಾಂಧರೊಂದಿಗೆ ಜಾತ್ಯತೀತ ಹಿಂದೂಗಳ ವಿರೋಧದಲ್ಲಿಯೂ ಹೋರಾಡಬೇಕಾಗುತ್ತಿದೆ. ಅಲ್ಲಿ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ನಡೆಯುತ್ತಿತ್ತು. ಅದಕ್ಕೆ ವಿರೋಧ ವ್ಯಕ್ತವಾಯಿತು. ಇದರಿಂದ ಅವರು ಆ ದೇವಸ್ಥಾನದಲ್ಲಿ ನಡೆಸಲು ಪ್ರಾರಂಭಿಸಿದರು. ಒಂದು ದಿನ ಕೇರಳ ಸರಕಾರವು `ಯಾವುದೇ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ನಡೆಸಲು ಬಿಡುವುದಿಲ್ಲ’ ಎಂದು ಆದೇಶಿಸಿದರು. ಇದರಿಂದ ಅಲ್ಲಿ ಸಂಘದ ಶಾಖೆಯನ್ನು ನಡೆಸುವುದು ಕೂಡ ಕಠಿಣವಾಗಿದೆಯೆಂದು ಕೇರಳದ ಹಿಂದುತ್ವನಿಷ್ಠ ಶ್ರೀ. ರಾಕೇಶ ನೆಲ್ಲಿಥಯಾ ಇವರು ಆಕ್ರೋಶ ವ್ಯಕ್ತಪಡಿಸಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಚತುರ್ಥ ದಿನ (19.6.2023 ದಿನದಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಹರಿಯಾಣಾದ `ಬಜರಂಗ ದಳ’ದ ವಿಭಾಗೀಯ ಭದ್ರತಾ ಮುಖಂಡ ಶ್ರೀ. ಕೃಷ್ಣ ಗುರ್ಜರ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ, ಹಿಂದೂ ಜನಜಾಗೃತಿ ಸಮಿತಿಯ ಸಂಭಾಜಿನಗರದ ಸಮನ್ವಯಕ ಕು. ಪ್ರಿಯಾಂಕಾ ಲೋಣೆ ಈ ಗೌರವಾನ್ವಿತರು ಉಪಸ್ಥಿತರಿದ್ದರು.
(ಸೌಜನ್ಯ – Hindu Janajagruti Samiti)
ಶ್ರೀ ರಾಕೇಶ ನೆಲ್ಲಿಥಯಾ ಈ ಸಂದರ್ಭದಲ್ಲಿ ಮಾತನಾಡುತ್ತಾ, `ಕೇರಳದಲ್ಲಿ ಮತಾಂಧರು ದೊಡ್ಡ ಪ್ರಮಾಣದಲ್ಲಿ `ಡ್ರಗ್ಸ ಜಿಹಾದ’ (ಮಾದಕ ಪದಾರ್ಥಗಳ ಜಿಹಾದ) ನಡೆಸುತ್ತಿದೆ. ಈ ಮೂಲಕ ಅವರು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಗುರಿ ಮಾಡುತ್ತಿದ್ದಾರೆ. ಹಿಂದೆ ಕೇರಳದಲ್ಲಿ 1 ಲಕ್ಷ ಕೋಟಿ ರೂಪಾಯಿಗಳ ಮಾದಕ ಪದಾರ್ಥಗಳ ಕಳ್ಳಸಾಗಣಿಯನ್ನು ವಶಪಡಿಸಿಕೊಳ್ಳಲಾಯಿತು. `ದಿ ಕೇರಳ ಸ್ಟೋರಿ’ ಚಲನಚಿತ್ರ ಮತಾಂಧರ ಕೃತ್ಯಗಳ ಒಂದು ಸಣ್ಣ ಭಾಗವಾಗಿದೆ. ಅದಕ್ಕಿಂತ ಅಧಿಕ ಭಯಾನಕ ಪರಿಸ್ಥಿತಿ ಇಲ್ಲಿ ಇದೆ. ಕೇರಳದಲ್ಲಿ ದೇವಸ್ಥಾನಗಳಿಗೆ ಧಾರ್ಮಿಕವಲ್ಲ, ಬದಲಾಗಿ ಸಾರ್ವಜನಿಕ ಸ್ಥಳಗಳ ಸ್ಥಾನಮಾನವನ್ನು ನೀಡಲಾಗಿದೆ. ಈ ಮೂಲಕ ಜಾತ್ಯತೀತ ಸರಕಾರದಿಂದ ಹಿಂದೂ ಧರ್ಮ ಮತ್ತು ಸಂಸ್ಕೃತಿ ನಷ್ಟಗೊಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದು ಕೇವಲ ಕೇರಳದ ವಿಷಯವಲ್ಲ, ಸಂಪೂರ್ಣ ಭಾರತದ ಪ್ರಶ್ನೆಯಾಗಿದೆ. ಆದ್ದರಿಂದ ಕೇವಲ ಹಿಂದೂಗಳ ವಿರುದ್ಧದ ಕೃತ್ಯಗಳಿಗೆ ಸಂಪೂರ್ಣ ದೇಶದಲ್ಲಿ ಚರ್ಚೆಯಾಗುವುದು ಆವಶ್ಯಕವಿದೆ. ಹಾಗೆಯೇ ಇದರೆಡೆಗೆ ಸಮಸ್ತ ಭಾರತೀಯರು ಅಧಿಕ ಗಮನ ನೀಡುವುದು ಆವಶ್ಯಕವಾಗಿದೆ’’ಎಂದು ಹೇಳಿದರು.