ನವ ದೆಹಲಿ – ಸೌತಾಂಪ್ಟನ್ (ಇಂಗ್ಲೆಂಡ್) ನಿಂದ ನ್ಯೂಯಾರ್ಕ್ (ಅಮೇರಿಕಾ) ಈ ಸಮುದ್ರ ಮಾರ್ಗದಲ್ಲಿ ಏಪ್ರಿಲ್ ೧೫, ೧೯೧೨ ರಂದು, ನಿರ್ಗಮಿಸಿದ್ದ ‘ಟೈಟಾನಿಕ್’ ಈ ವಿಶಾಲ ಪ್ರಯಾಣಿಕ ಹಡಗು ಕೆನಡಾದ ನ್ಯೂಫೌಂಡ್‌ಲ್ಯಾಂಡ್ ನಗರದ ಬಳಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಮಂಜುಗಡ್ಡೆಗೆ ಅಪ್ಪಳಿಸಿದ್ದರಿಂದ ಮುಳುಗಿತ್ತು. ಅದರ ಅವಶೇಷಗಳನ್ನು ೧೯೮೫ ರಲ್ಲಿ ಅದೇ ಜಾಗದಲ್ಲಿ ಆಳ ಸಮುದ್ರದಲ್ಲಿ ಇರುವುದಾಗಿ ಕಂಡುಹಿಡಿಯಲಾಯಿತು. ಈ ಅವಶೇಷಗಳನ್ನು ನೋಡಲು ಜನರನ್ನು ಸಾಗಿಸುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕಣ್ಮರೆಯಾಗಿದೆ.
Desperate search for missing submarine viewing Titanic with five onboard | 9 News Australia #MissingPerson #BreakingNews #MissingPersonAlert https://t.co/Qnv6xwy1Dy pic.twitter.com/f9PoQrGAqW
— Brett Murphy (@bmurphypointman) June 20, 2023
ಜಲಾಂತರ್ಗಾಮಿಯನ್ನು ಪತ್ತೆಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಜಲಾಂತರ್ಗಾಮಿಯಲ್ಲಿ ಎಷ್ಟು ಜನರಿದ್ದರು ? ಇದು ಸ್ಪಷ್ಟವಾಗಲಿಲ್ಲ. ಸಣ್ಣ ಜಲಾಂತರ್ಗಾಮಿನೌಕೆಗಳು ಕೆಲವೊಮ್ಮೆ ಪ್ರವಾಸಿಗರು ಮತ್ತು ತಜ್ಞರನ್ನು ಟೈಟಾನಿಕ್ ಮುಳುಗಿದ ಸ್ಥಳವನ್ನು ನೋಡಲು ಕರೆದೊಯ್ಯುತ್ತವೆ. ಅದಕ್ಕಾಗಿ ಹಣ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯ ತನಕ ಪ್ರಯಾಣಿಸಲು ಸಾವಿರಾರು ಡಾಲರ್ ವೆಚ್ಚವಾಗುತ್ತದೆ. ಟೈಟಾನಿಕ ನೌಕೆಯ ಅವಶೇಷಗಳಿರುವಲ್ಲಿ ತಲುಪಲು ಮತ್ತು ಅಲ್ಲಿಂದ ಹಿಂತಿರುಗಲು ೮ ಗಂಟೆಗಳು ಬೇಕಾಗುತ್ತದೆ. ಟೈಟಾನಿಕ್‌ನ ಅವಶೇಷಗಳು ಅಟ್ಲಾಂಟಿಕ್ ಮಹಾಸಾಗರದಲ್ಲಿ ೩ ಸಾವಿರದ ೮೦೦ ಮೀಟರ್ (೧೨ಸಾವಿರದ ೫೦೦ ಅಡಿ) ಕೆಳಗಿದೆ.