ಬಾಂಗ್ಲಾದೇಶದ ಹಿಂದೂಗಳ ಸ್ಥಿತಿ ಅತ್ಯಂತ ದಯನೀಯವಾಗಿದೆ. ಅಲ್ಲಿ ಹಿಂದು ಹುಡುಗಿಯರ ಮೇಲೆ ಪ್ರತಿದಿನ ಬಲಾತ್ಕಾರವಾಗುತ್ತಿದೆ. ದೇವಸ್ಥಾನಗಳನ್ನು ಧ್ವಂಸಮಾಡಲಾಗುತ್ತಿದೆ ಹಾಗೆಯೇ ಹಿಂದೂಗಳ ಭೂಮಿಯನ್ನು ಕಬಳಿಸಲಾಗುತ್ತಿದೆ. ಹಿಂದುಗಳು ಅಕ್ಷರಶಃ ಗುಲಾಮಗಿರಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಅವರು ದುರ್ಬಲ ಮತ್ತು ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಕಡೆಗೆ ಗಮನ ಕೊಡಲು ಯಾರಿಗೂ ಸಮಯವೇ ಇಲ್ಲ. ಸದ್ಯ ಮುಗ್ಧ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ನಿರ್ಲಕ್ಷಿಸುತ್ತಿದೆ. ಅವರಲ್ಲಿ ಬಾಂಗ್ಲಾದೇಶದ ಮತಾಂಧರನ್ನು ಹೊಡೆದುರುಳಿಸುವ ಧೈರ್ಯ ಇಲ್ಲ. ಇಂದು ಈ ಪೀಡಿತ ಹಿಂದೂಗಳಿಗೆ ಮಾನಸಿಕ ಮತ್ತು ಶಾರೀರಿಕ ಬಲ ನೀಡುವುದರೊಂದಿಗೆ ರಾಜಕೀಯ ಬಲದ ಆವಶ್ಯಕತೆಯೂ ಇದೆ; ಆದರೆ ಭಾರತ ಸರಕಾರ ಅವರಿಗಾಗಿ ಏನೂ ಮಾಡುತ್ತಿಲ್ಲ. ಅಲ್ಪಸಂಖ್ಯಾತ ಹಿಂದೂಗಳ ಸಮಸ್ಯೆಯನ್ನು ನಿವಾರಿಸುವುದು ದೂರದ ಮಾತು, ಅಲ್ಲಿ ಇಂದಿಗೂ ಅಲ್ಪಸಂಖ್ಯಾತರ ಸಚಿವಾಲಯದ ನಿರ್ಮಿತಿಯೂ ಆಗಿಲ್ಲ. ಇನ್ನೊಂದೆಡೆ ಭಾರತದಲ್ಲಿ ಮ್ಯಾನಮಾರ್‌ನಿಂದ ಬಂದ ಕೋಟಿಗಟ್ಟಲೇ ರೋಹಿಂಗ್ಯಾರ ಪುನರ್ವಸತಿಗಾಗಿ ಭಾರತ ಸರಕಾರವು ಅಲ್ಲಿನ ಸರಕಾರದೊಂದಿಗೆ ಚರ್ಚೆ ಮಾಡಿ ಅವರಿಗೆ ನಿವಾಸ ಮುಂತಾದ ವ್ಯವಸ್ಥೆ ಪೂರೈಸಲು ಪ್ರಯತ್ನಿಸಿತು. ಅದಕ್ಕಾಗಿ ಆಗಿನ ವಿದೇಶಾಂಗ ಸಚಿವ ಮತ್ತು ಈಗಿನ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರು ಪ್ರಯತ್ನಿಸಿದರು. ಇದೇ ರೀತಿಯ ಪ್ರಯತ್ನವನ್ನು ನಾವು ಬಾಂಗ್ಲಾದೇಶದ ಹಿಂದೂಗಳಿಗಾಗಿ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಭಾರತವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು, ಎಂದು ‘ವರ್ಲ್ಡ್ ಹಿಂದು ಫೆಡರೇಶನ್’ನ ಅಂತರರಾಷ್ಟ್ರೀಯ ಅಧ್ಯಕ್ಷ ಶ್ರೀ. ಅಜಯ ಸಿಂಹ ಇವರು ಹೇಳಿದರು. ಅವರು ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದ ಐದನೇ ದಿನ (೨೦.೬.೨೦೨೩ ಈ ದಿನ) ಉಪಸ್ಥಿತರನ್ನು ಸಂಬೋಧಿಸುತ್ತಿದ್ದರು.
(ಸೌಜನ್ಯ – Hindu Janajagruti Samiti)
ಯುರೋಪ್‌ನಲ್ಲಿನ ಜನರು ಬೃಹತ್ ಪ್ರಮಾಣದಲ್ಲಿ ಕ್ರೈಸ್ತ ಧರ್ಮದಿಂದ ದೂರವಾಗಿ ಹಿಂದು ಮತ್ತು ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಅಲ್ಲಿ ಹಿಂದು ಧರ್ಮದ ಪ್ರಸಾರವನ್ನು ಹೆಚ್ಚು ಮಾಡಬೇಕು. – ಶ್ರೀ. ಅಜಯ ಸಿಂಹ |
ಹಿಂದು ಜನಜಾಗೃತಿ ಸಮಿತಿಯ ಅಲೌಕಿಕತೆ !
‘ಪ.ಪೂ. ಡಾ. ಜಯಂತ ಆಠವಲೆಯವರ ಕೃಪಾಶೀರ್ವಾದದಿಂದ ಗೋವಾದಲ್ಲಿ ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಆಯೋಜನೆಯನ್ನು ಮಾಡಲಾಯಿತು. ಅದಕ್ಕಾಗಿ ದೇಶ-ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರು ಉಪಸ್ಥಿತರಿದ್ದಾರೆ. ಅವರ ನಿವಾಸ, ಭೋಜನ ಇತ್ಯಾದಿ ಎಲ್ಲ ವ್ಯವಸ್ಥೆಯನ್ನು ಮಾಡಲು ಹಿಂದು ಜನಜಾಗೃತಿ ಸಮಿತಿಯ ಎಲ್ಲ ಕಾರ್ಯಕರ್ತರು ಮೈಮರೆತು ಮಾಡಿದ್ದಾರೆ. ಹಲವು ಸಂಘಟನೆಗಳನ್ನು ಒಟ್ಟುಗೂಡಿಸಿ ಅವರ ಅಧಿವೇಶನವನ್ನು ನಡೆಸುವುದು ಸುಲಭದ ಮಾತಲ್ಲ.’ – ಶ್ರೀ. ಅಜಯ ಸಿಂಹ