2024 ರ ಲೋಕಸಭೆ ಚುನಾವಣೆಯಲ್ಲಿ ‘ಹಿಂದೂ ರಾಷ್ಟ್ರ’ ಸಹಿತ ಹಿಂದುಹಿತದ ಬೇಡಿಕೆಗಳನ್ನು ಪೂರೈಸುವವರಿಗೆ ಹಿಂದೂಗಳ ಬೆಂಬಲ ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಲಾಲ್ ಸರ್ಟಿಫಿಕೆಶನ : ವೈಶ್ವಿಕ ಆರ್ಥಿಕತೆಯ ಮೇಲೆ ದಾಳಿ’ ಈ ಇ-ಬುಕ್ ಲೋಕಾರ್ಪಣೆ

ಗೋವಾದಲ್ಲಿ ನಡೆದ ಅಧಿವೇಶನದಿಂದ ಆರಂಭವಾದ ಹಿಂದೂ ರಾಷ್ಟ್ರದ ಬೇಡಿಕೆ ಈಗ ಜನರ ಬೇಡಿಕೆಯಾಗುತ್ತಿದ್ದು, ಸಾಧು-ಸಂತರು, ರಾಜಕೀಯ ಮುಖಂಡರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಹಾಗಾಗಿ, ಈಗ ನಮಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ದೃಢ ಘೋಷಣೆಯ ಅಗತ್ಯವಿದೆ. ಸಂಪೂರ್ಣ ಭಾರತದಲ್ಲಿ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾನೂನು ರೂಪಿಸುವುದು, ಹಿಂದೂಗಳ ದೇವತೆಗಳ ಅವಮಾನ ಮಾಡುವವರ ಮೇಲೆ ಕಠೀಣ ಕ್ರಮ ಕೈಗೊಳ್ಳುವ ಕಾನೂನು ತರುವುದು. ‘ವಕ್ಫ್’ ಮತ್ತು ‘ಪ್ಲೆಸಸ್ ಆಫ್ ವರ್ಶಿಪ್’ ನಂತಹ ಅನ್ಯಾಯದ ಕಾನೂನುಗಳನ್ನು ರದ್ದುಪಡಿಸಬೇಕು ಇತ್ಯಾದಿ ಹಿಂದುಹಿತದ ಬೇಡಿಕೆಗಳನ್ನು ಘೋಷಣಾಪತ್ರದಲ್ಲಿ ಸೇರಿಸಿ ಅದನ್ನು ಪೂರ್ಣಗೊಳಿಸುವ ಜನಪ್ರತಿನಿಧಿಗಳಿಗೆ 2024ರಲ್ಲಿ ನಡೆಯಲಿರುವ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಬಹಿರಂಗ ಬೆಂಬಲವಿರಲಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಪ್ರತಿಪಾದಿಸಿದರು.
ಸದ್ಗುರು (ಡಾ.) ಪಿಂಗಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ”ಹಿಂದೂಗಳ ರಾಜಕೀಯ ದೃಷ್ಟಿಯಿಂದ ಜಾಗೃತರಾಗದಿರುವುದು ಹಿಂದೂಗಳ ಸೋಲಿಗೆ ಕಾರಣವಾಗಿದೆ. ಜಾಗೃತ, ಸಕ್ರಿಯ ಮತ್ತು ಸಂಘಟಿತ ನಾಗರಿಕರೇ ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಆದ್ದರಿಂದ ಸ್ವದೇಶ, ಸ್ವಾತಂತ್ರ್ಯ, ಸಾಮಾಜಿಕವ್ಯವಸ್ಥೆ ಕುರಿತು ಹಿಂದೂಗಳ ಅಜ್ಞಾನ, ಸ್ವಾರ್ಥ, ಅಸಂಘಟಿತ ಇವುಗಳ ಕುರಿತು ಕಾರ್ಯ ಮಾಡುವುದು ಅಗತ್ಯವಿದೆ. ರಾಜಕೀಯ ಪಕ್ಷಗಳು ತಮ್ಮ ಘೋಷಣಾಪತ್ರಗಳನ್ನು ಪ್ರಕಟಿಸುತ್ತವೆ, ಈಗ ಹಿಂದೂಗಳು ಸಂಘಟಿತರಾಗಿ ಹಿಂದುಹಿತದ ಘೋಷಣಾಪತ್ರವನ್ನು ಮಾಡಿ ಮತ ಕೇಳಲು ಮನೆಗೆ ಬರುವ ಜನಪ್ರತಿನಿಧಿಗಳಿಗೆ ಆ ಬೇಡಿಕೆಗಳನ್ನು ಮಂಡಿಸಬೇಕು” ಎಂದು ಹೇಳಿದರು.

`ಹಲಾಲ್ ಸರ್ಟಿಫಿಕೇಶನ್‌ : ವೈಶ್ವಿಕ ಅರ್ಥವ್ಯವಸ್ಥೆ ಮೇಲೆ ದಾಳಿ’ ಎಂಬ ಇ-ಪುಸ್ತಕದ ಪ್ರಕಾಶನ ಮಾಡುತ್ತಿರುವ ಎಡದಿಂದ ಶ್ರೀ. ಸತೀಶ ಕುಮಾರ, ರ್ಶರೀ. ಅರ್ಜುನ ಸಂಪಥ, ಕರ್ನಲ್‌ ಕರತಾರ ಸಿಂಹ ಮತ್ತು ಶ್ರೀ. ರಮೇಶ ಶಿಂದೆ