ಜೂನ್ ೧೮, ೨೦೨೩ ರಂದು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೊದಲ ಸೆಶನ್ಸ್ ನಲ್ಲಿ ‘ಕರ್ನಾಟಕದಲ್ಲಿನ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರನ್ನು ನೋಡಿದರೆ ಏನು ಅನಿಸುತ್ತದೆ ?’ ಎಂದು ಸೂಕ್ಷ್ಮ ಪ್ರಯೋಗ ಮಾಡಲಾಯಿತು. ಆ ಸಮಯದಲ್ಲಿ ಸಭಾಗೃಹದಲ್ಲಿನ ಹೆಚ್ಚಿನ ಹಿಂದುತ್ವನಿಷ್ಠರಿಗೆ ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರನ್ನು ನೋಡಿದರೆ ಆನಂದ ಅನಿಸಿತು ಎಂದು ಹೇಳಿದರು. ಗಾಝಿಯಾಬಾದ (ಉತ್ತರಪ್ರದೇಶ) ಇಲ್ಲಿಯ ಡಾಸನಾ ಪೀಠದ ಯತಿ ಮಾ ಚೇತನಾನಂದ ಸರಸ್ವತಿ ಇವರು ‘ಪಿ. ಕೃಷ್ಣಮೂರ್ತಿ ಇವರ ಮುಖದ ಮೇಲೆ ಸಾಧನೆಯ ತೇಜವಿದೆ. ಅವರು ಧರ್ಮನಿಷ್ಠರಾಗಿದ್ದಾರೆ. ಅವರು ನಿಷ್ಠೆಯಿಂದ ಧರ್ಮಕಾರ್ಯ ಮಾಡುತ್ತಾರೆ’, ಎಂದು ಅವರನ್ನು ನೋಡಿ ಅನಿಸುತ್ತದೆ ಎಂದು ಹೇಳಿದರು. ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರ ಆಧ್ಯಾತ್ಮಿಕ ಮಟ್ಟ ಶೇಕಡ ೬೪ ರಷ್ಟು ಇದೆ.
ಈ ಸಮಯದಲ್ಲಿ ಸನಾತನದ ಧರ್ಮಪ್ರಚಾರಕ ಪೂ. ರಮಾನಂದ ಗೌಡ ಇವರು ಪಿ. ಕೃಷ್ಣಮೂರ್ತಿ ಇವರ ಆಧ್ಯಾತ್ಮಿಕ ಗುಣವೈಶಿಷ್ಟಗಳನ್ನು ತಿಳಿಸಿದರು. ಅವರು, ”ನ್ಯಾಯವಾದಿ ಕೃಷ್ಣಮೂರ್ತಿ ಭಗವಂತನ ಅನುಸಂಧಾನದಲ್ಲಿ ಇರುತ್ತಾರೆ. ಅವರ ನಾಮಜಪ ನಿರಂತರ ನಡೆಯುತ್ತದೆ. ಪ್ರಯಾಣದ ಸಮಯದಲ್ಲಿ ಅವರು ವಾಹನದಲ್ಲಿ ಇಂದೌರದ (ಮಧ್ಯ ಪ್ರದೇಶ) ಶ್ರೇಷ್ಠ ಸಂತರು ಮತ್ತು ಸನಾತನದ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಭಜನೆ ಹಾಕಿರುತ್ತಾರೆ. ಭಜನೆ ಕೇಳುವಾಗ ಅವರ ಕಣ್ಣುಗಳು ಭಾವಾಶ್ರು ಬರುತ್ತದೆ. ಧರ್ಮಕಾರ್ಯಕ್ಕಾಗಿ ಅವರು ಸ್ವತಃ ಖರ್ಚು ಮಾಡಿಕೊಂಡು ವಿವಿಧ ಗ್ರಾಮಗಳಿಗೆ ಹೋಗಿ ಹಿಂದುತ್ವನಿಷ್ಠರಿಗೆ ಕಾನೂನು ರೀತಿಯಲ್ಲಿ ಸಹಾಯ ಮಾಡುತ್ತಾರೆ. ಅವರ ಕಾರ್ಯ ನಿರಪೇಕ್ಷವಾಗಿರುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಹಿಂದುತ್ವದ ಕಾರ್ಯಕ್ಕಾಗಿ ಅವರು ನ್ಯಾಯವಾದಿಗಳ ಸಂಘಟನೆ ಮಾಡುತ್ತಿದ್ದಾರೆ. ವ್ಯಷ್ಠಿ ಸಾಧನೆ ಮತ್ತು ಧರ್ಮಪ್ರಸಾರದ ಸಮಷ್ಟಿ ಕಾರ್ಯ ಮಾಡುವುದರ ಒಂದು ಉತ್ತಮ ಉದಾಹರಣೆಯಾಗಿದೆ.
ಒಮ್ಮೆ ೩ – ೪ ಗಂಟೆ ಪ್ರಯಾಣ ಮಾಡಿ ಅವರು ಒಂದು ಮೊಕದ್ದಮೆಗಾಗಿ ನ್ಯಾಯಾಲಯಕ್ಕೆ ತಲುಪಿದರು; ಆದರೆ ಅಲ್ಲಿ ಹೋದ ನಂತರ ನ್ಯಾಯಾಧೀಶರು ರಜೆಯಲ್ಲಿರುವುದು ತಿಳಿಯಿತು. ಬೇರೆ ನ್ಯಾಯವಾದಿಗಳು ಅವರಿಗೆ ಇದರ ಬಗ್ಗೆ ಕೇಳಿದಾಗ ಅವರು ‘ಈಶ್ವರೇಚ್ಚೆ’, ಎಂದು ಹೇಳಿದರು. ಅವರ ಮನಸ್ಸಿನಲ್ಲಿ ಇದರ ಬಗ್ಗೆ ಯಾವುದೇ ವಿಚಾರ ಅಥವಾ ಪ್ರತಿಕ್ರಿಯೆ ಬರಲಿಲ್ಲ.
ಕೆಲವು ತಿಂಗಳ ಹಿಂದೆ ನ್ಯಾಯವಾದಿ ಕೃಷ್ಣಮೂರ್ತಿ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ಆ ಸಮಯದಲ್ಲಿ ‘ಭಗವಾನ್ ಶ್ರೀ ಕೃಷ್ಣ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ’ ಇವರು ಅವರ ರಕ್ಷಣೆ ಮಾಡಿದರು. ನನಗೆ ಇನ್ನೂ ಬಹಳಷ್ಟು ಕಾರ್ಯ ಮಾಡಬೇಕಿದೆ’ ಈ ರೀತಿ ಅವರು ಭಾವ ವ್ಯಕ್ತಪಡಿಸಿದರು. ಅವರು ಒಬ್ಬ ಧರ್ಮವೀರರಾಗಿದ್ದಾರೆ.” ಎಂದು ಹೇಳಿದರು.