ಮುಂಬಯಿಯಲ್ಲಿ ‘ಆದಿಪುರುಷ’ ಸಿನಿಮಾವನ್ನು ಸ್ಥಗಿತಗೊಳಿಸಿದ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು !

ಮುಂಬಯಿ – ಜೂನ್ ೧೮ ರ ಸಂಜೆ ನಾಲಾಸೋಪಾರಾದಲ್ಲಿ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು ಒಂದು ಚಿತ್ರಮಂದಿರದಲ್ಲಿ ‘ಆದಿಪುರುಷ’ ಚಲನಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿದರು. ಹಿಂದೂ ಸಂಘಟನೆಯ ಕಾರ್ಯಕರ್ತರು ಚಿತ್ರಮಂದಿರದಲ್ಲಿ ಘೋಷಣೆಯನ್ನು ಕೂಗುತ್ತಾ ಪ್ರೇಕ್ಷಕರಿಗೆ ಹೊರಗೆ ಹಾಕಿದ್ದಾರೆ. ಈ ವೇಳೆ ಹಿಂದುತ್ವನಿಷ್ಠರು ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ತದನಂತರ ಈ ಚಲನಚಿತ್ರವನ್ನು ರದ್ದುಗೊಳಿಸಲಾಯಿತು.

ನಮ್ಮ ದೇವರ ಅವಮಾನವನ್ನು ನಾವು ಸಹಿಸುವುದಿಲ್ಲ !

ಚಲನಚಿತ್ರದಲ್ಲಿ “ರಾಮಾಯಣ”ವನ್ನು ತಪ್ಪಾದ ಬಿಂಬಿಸಲಾಗಿರುವುದರಿಂದ ಈ ಪೌರಾಣಿಕ ಕಥೆಯ ಘನತೆ ಕುಸಿಯುತ್ತಿದೆ. ನಮ್ಮ ದೇವರ ಅವಮಾನವಾಗುವುದನ್ನು ನಾವು ಸಹಿಸುವುದಿಲ್ಲ. ನೀವು ನಿಮ್ಮ ಮಕ್ಕಳಿಗೆ ಈ ವಿಷಯವನ್ನು ಕಲಿಸುವಿರಾ? ನಮ್ಮ ದೇವರನ್ನು ಅವಮಾನಿಸುವವರನ್ನು ನಾವು ವಿರೋಧಿಸುತ್ತೇವೆ. ನಮಗೆ ಗಲ್ಲಿಗೇರಿಸಿದರು ತೊಂದರೆಯಿಲ್ಲ; ಆದರೆ ಅವಹೇಳನವನ್ನು ಸಹಿಸುವುದಿಲ್ಲವೆಂದು ಕಾರ್ಯಕರ್ತರು ಹೇಳಿದ್ದಾರೆ. ಈ ವೇಳೆ ಹಿಂದಿ ಚಿತ್ರರಂಗದ ವಿರುದ್ಧ ಘೋಷಣೆಗಳನ್ನು ಕೂಗಿದರು