ಶಿಮ್ಲಾ (ಹಿಮಾಚಲ ಪ್ರದೇಶ) ಇಲ್ಲಿನ ಜೈನ ಮಂದಿರದಲ್ಲಿ ವಸ್ತ್ರಸಂಹಿತೆ ಜಾರಿ

(ವಸ್ತ್ರಸಂಹಿತೆಯೆಂದರೆ ದೇವಸ್ಥಾನದಲ್ಲಿ ಪ್ರವೇಶಿಸುವಾಗ ಧರಿಸುವ ಬಟ್ಟೆಗಳ ಸಂದರ್ಭದಲ್ಲಿನ ನಿಯಮಾವಳಿ)

ಶಿಮ್ಲಾ(ಹಿಮಾಚಲ ಪ್ರದೇಶ)- ಇಲ್ಲಿನ ಜೈನ ಮಂದಿರದಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕನುಸಾರವಾಗಿ ಮಹಿಳೆಯರು ಮತ್ತು ಪುರುಷರು ತುಂಡುಡುಗೆ(ಅರೆಬರೆ ಬಟ್ಟೆಗಳನ್ನು) ಧರಿಸಿ ದೇವಸ್ಥಾನದಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಎದುರು ಫಲಕವನ್ನು ಹಚ್ಚಲಾಗಿದ್ದು, ಇದು ಸಂಸ್ಕೃತಿಯನ್ನು ರಕ್ಷಿಸಲು ಇಟ್ಟ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸಂಜಯ ಜೈನ ಇವರು ಮಾತನಾಡುತ್ತಾ, ನಮ್ಮ ಜನರು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇದರಿಂದಲೇ ಮಹಿಳೆಯರು ತಲೆಯ ಮೇಲೆ ಸೆರಗು ಹಾಕಿಕೊಳ್ಳುವುದಿಲ್ಲ. ತುಂಡುಡುಗೆಗಳನ್ನು ಧರಿಸಿ ದೇವಸ್ಥಾನಗಳಿಗೆ ಹೋಗುವ ಸಮಸ್ಯೆ ದೇಶಾದ್ಯಂತ ಇದೆ. ಯಾವ ಸ್ಥಳದಲ್ಲಿ ವಿಶ್ವಕಲ್ಯಾಣ ಮತ್ತು ಶಾಂತಿಗಾಗಿ ಪ್ರಾರ್ಥಿಸಲಾಗುತ್ತದೆಯೋ, ಅಲ್ಲಿ ಮರ್ಯಾದೆಯ ಪಾಲನೆಯನ್ನು ಮಾಡಬೇಕು ಎಂದು ಹೇಳಿದರು

ಸಂಪಾದಕೀಯ ನಿಲುವು

ದೇಶಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸುವುದು ಆವಶ್ಯಕವಾಗಿದೆ. ದೇವಸ್ಥಾನ ಸಮಿತಿ, ಆಡಳಿತಾಧಿಕಾರಿಗಳು ಮತ್ತು ಭಕ್ತರು ಇದಕ್ಕಾಗಿ ಪ್ರಯತ್ನಿಸಬೇಕು.