‘ನಾವು (ಮುಸಲ್ಮಾನರು) ಕೈಗೆ ಬಳೆ ತೊಟ್ಟಿಲ್ಲಂತೆ !’ – ಮೌಲಾನ ತೋಫಿರ್ ರಝಾನ

ಉತ್ತರಾಖಂಡದಲ್ಲಿನ ಮುಸಲ್ಮಾನರ ತಥಾಕಥಿತ ಪಲಾಯನದ ಕುರಿತು ‘ಇತ್ತೆಹಾದ-ಎ-ಮಿಲ್ಲತ ಕೌನ್ಸಿಲ್’ ನ ಅಧ್ಯಕ್ಷ ಮೌಲಾನ ತೋಫಿರ್ ರಝಾನ ಬೆದರಿಕೆ !

ಮೌಲಾನ ತೋಫಿರ್ ರಝಾನ

ಬರೆಲಿ (ಉತ್ತರಪ್ರದೇಶ) – ಉತ್ತರಾಖಂಡದಲ್ಲಿನ ‘ಲವ್ ಜಿಹಾದ್’ನ ಘಟನೆಯ ನಂತರ ಅಲ್ಲಿಯ ಉತ್ತರ ಕಾಶಿಯಲ್ಲಿನ ಮುಸಲ್ಮಾನ ವ್ಯಾಪಾರಿಗಳಿಗೆ ಅವರ ಅಂಗಡಿಗಳನ್ನು ಮುಚ್ಚಿ ಅಲ್ಲಿಂದ ಹೊರಟು ಹೋಗುವ ಪೋಸ್ಟರ್ ಗಳನ್ನು ಅಂಟಿಸಿದ ನಂತರ ಕೆಲವು ಅಂಗಡಿಕಾರರು ಅಲ್ಲಿಂದ ಹೊರಟು ಹೋದರು ಮತ್ತು ಹೋಗುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ, ಇತ್ತೇಹಾದ-ಎ-ಮಿಲ್ಲತ ಕೌನ್ಸಿಲ್ ನ ಅಧ್ಯಕ್ಷ ಮೌಲಾನಾ (ಇಸ್ಲಾಮಿ ಅಭ್ಯಾಸಕ) ತೋಫಿರ್ ರಝಾ ಇವರು ಉತ್ತರಾಖಂಡದ ಭಾಜಪ ಸರಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಅವರು, ನಾವು ಕೈಯಲ್ಲಿ ಬಳೆ ತೊಟ್ಟಿಲ್ಲ. ಸರಕಾರ ಏನಾದರೂ ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ನಾವು ಉತ್ತರ ಖಂಡಕ್ಕೆ ಹೋಗಿ ಸರಕಾರಕ್ಕೆ ಮುತ್ತಿಗೆ ಹಾಕುವೆವು. ನಾವು ನಮ್ಮ ಮಸೀದಿ, ಮಜಾರ (ಮುಸಲ್ಮಾನರ ಗೋರಿ) ಮತ್ತು ಮದರಸಗಳ ಮೇಲೆ ಬುಲ್ಡೋಜರ್ ನಡೆಸಲು ಬಿಡುವುದಿಲ್ಲ ಎಂದು ಹೇಳಿದರು.

೧. ಮೌಲಾನಾ ರಝಾ ಮಾತು ಮುಂದುವರೆಸುತ್ತಾ, ಉತ್ತರಖಂಡದಲ್ಲಿ ಏನೆಲ್ಲ ನಡೆಯುತ್ತಿದೆಯೋ, ಅದು ಸಂಪೂರ್ಣ ದೇಶದಲ್ಲಿ ಮಾಡುವ ವಿಚಾರ ನಡೆಯುತ್ತಿದೆ. ಅಲ್ಲಿ ಹಿಂದೂ ಮಹಾಪಂಚಾಯತ್ ಕರೆಯಲಾಗಿತ್ತು; ಆದರೆ ಅದನ್ನು ಸ್ಥಗಿತಗೊಳಿಸಲಾಗಿದೆ. ಒಂದುವೇಳೆ ಮುಸಲ್ಮಾನರು ಮಹಾಪಂಚಾಯತಿಯ ಘೋಷಣೆ ಮಾಡದೆ ಇದ್ದಿದ್ದರೆ ಆಡಳಿತವು ಹಿಂದು ಮಹಾಪಂಚಾಯತ ಸ್ಥಗಿತ ಮಾಡುತ್ತಿರಲಿಲ್ಲ. ನಮ್ಮನ್ನು ಕೃತಿಯ ಮೇಲೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಅನಿವಾರ್ಯಗೊಳಿಸಬಾರದು. ಸರಕಾರಕ್ಕೆ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಬರಬೇಕು, ಇಲ್ಲವಾದರೆ ದೇಶದಲ್ಲಿನ ವಾತಾವರಣ ಹದಗೆಡಬಹುದು. ಹಿಂದುತ್ವನಿಷ್ಠ ಸಂಘಟನೆಗಳು ಇದನ್ನೇ ಮಾಡುತ್ತಿವೆ. ಅವರು ದೇಶದ್ರೋಹಿಗಳಾಗಿದ್ದಾರೆ. (ಹಿಂದುತ್ವನಿಷ್ಠರಿಗೆ ದೇಶದ್ರೋಹಿ ಎನ್ನುವವರು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ಉಗುಳು ಜಿಹಾದ್ ನಡೆಸುವ ಜನರು ಯಾರು ? ಇದನ್ನು ಕೂಡ ರಝಾ ಇವರು ಹೇಳಬೇಕು ! – ಸಂಪಾದಕರು)

೨. ಹಿಂದೂ ರಾಷ್ಟ್ರದ ಬಗ್ಗೆ ಮೌಲಾನ ರಝಾ ಇವರು, ಯಾವ ಸಂಘಟನೆ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಿವೆ, ಅವರು ದೇಶದ್ರೋಹಿಗಳಾಗಿದ್ದಾರೆ. ಅವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಇದಕ್ಕೆ ಹೇಳೋದು, ಕಳ್ಳನಿಗೊಂದು ಪಿಳ್ಳೆ ನೆವ ಅಂತ. ಮೊದಲು ಲವ್ ಜಿಹಾದ್ ಮಾಡುವುದು ಮತ್ತು ಅದಕ್ಕೆ ವಿರೋಧ ಆದನಂತರ ಈ ರೀತಿ ಬೆದರಿಕೆ ನೀಡುವುದು, ಇಂತಹ ಮಾನಸಿಕತೆಯವರ ಮೇಲೆ ಕೂಡ ಪೊಲೀಸರಿಂದ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !