ಚಲನಚಿತ್ರದ ಸಂವಾದಗಳನ್ನು ಈಗಿನ ಪೀಳಿಗೆಗೆ ಅರ್ಥವಾಗಬೇಕೆಂದು ಉದ್ದೇಶಪೂರ್ವಕವಾಗಿ ಬರೆಯಲಾಗಿದೆ ! (ಅಂತೆ) – ಲೇಖಕ ಮನೋಜ ಮುಂತಶಿರ ಶುಕ್ಲಾ

ಆದಿಪುರುಷ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ಸಂವಾದದ ಲೇಖಕ ಮನೋಜ ಮುಂತಶಿರ ಶುಕ್ಲಾ ಇವರಿಂದ ಸಮರ್ಥನೆ !

ಲೇಖಕ ಮನೋಜ ಮುಂತಶಿರ ಶುಕ್ಲಾ (ಬಲಬದಿಗೆ)

ನವದೆಹಲಿ – ಆದಿಪುರುಷ ಚಲನಚಿತ್ರದ ಸಂವಾದದಿಂದ ವಿಶೇಷವಾಗಿ ಹನುಮಂತನ ಸಂವಾದದಿಂದ ನಡೆದಿರುವ ಟೀಕೆಗಳ ಬಗ್ಗೆ ಸಂವಾದ ಲೇಖಕ ಮನೋಜ್ ಮುಂತಶಿರ ಶುಕ್ಲಾ ಇವರು ಸ್ಪಷ್ಟೀಕರಣ ನೀಡಿದ್ದಾರೆ . ರಿಪಬ್ಲಿಕ್ ಟಿವಿ , ಈ ವಾರ್ತಾವಾಹಿನಿಯ ಸಂದರ್ಶನದಲ್ಲಿ ಅವರು, ಇಂದಿನ ಪೀಳಿಗೆಗೆ ಸಂವಾದ ಅರ್ಥವಾಗಬೇಕು ; ಎಂದು ಅಂತಹ ಭಾಷೆಯಲ್ಲಿ ಬರೆಯಲಾಗಿದೆ . ಕೇವಲ ಹನುಮಂತನ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಭಗವಾನ್ ಶ್ರೀ ರಾಮನ ಸಂವಾದದ ಬಗ್ಗೆ ಕೂಡ ಮಾತನಾಡಬೇಕು. ಮಾತಾ ಸೀತೆಯ ಸಂವಾದದಲ್ಲಿ ಎಲ್ಲಿ ಆಕೆ ಸವಾಲು ನೀಡುತ್ತಾಳೆ, ಅದರ ಬಗ್ಗೆ ಮಾತನಾಡಬೇಕು , ಎಂದು ಹೇಳುತ್ತಾ ಅವರು ಸಂವಾದದ ಸಮರ್ಥನೆ ಮಾಡಿದರು.

ಸಂವಾದವನ್ನು ಉದ್ದೇಶಪೂರ್ವಕವಾಗಿ ಬರೆಯಲಾಗಿದೆಯೇನು ? ಎಂದು ಕೇಳಿದಾಗ ಮನೋಜ ಮುಂತಶಿರ ಶುಕ್ಲಾ ಇವರು , ಖಂಡಿತವಾಗಿಯೂ ಈ ಸಂವಾದವನ್ನು ಉದ್ದೇಶಪೂರ್ವಕವಾಗಿ ಬರೆಯಲಾಗಿದೆ. ಹನುಮಂತನ ಸಂವಾದ ಪೂರ್ಣ ವಿಚಾರ ಮಾಡಿ ಬರೆಯಲಾಗಿದೆ ನಾವು ಅದನ್ನು ಸುಲಭವಾಗಿ ಮಂಡಿಸಿದ್ದೇವೆ. ಇಲ್ಲಿ ತಿಳಿದುಕೊಳ್ಳಬೇಕಾದ ಒಂದು ವಿಷಯವೇನೆಂದರೆ, ಚಲನಚಿತ್ರದಲ್ಲಿ ಅನೇಕ ಪಾತ್ರಗಳು ಇದ್ದರೆ, ಆಗ ಪ್ರತಿಯೊಬ್ಬರಿಗೆ ಒಂದೇ ಭಾಷೆ ಮಾತನಾಡಲು ಬರುವುದಿಲ್ಲ. ಅದರಲ್ಲಿ ವೈವಿಧ್ಯಗಳಿರುತ್ತದೆ. ನಾವು ಬಾಲ್ಯದಿಂದ ರಾಮಾಯಣ ಕೇಳುತ್ತಿದ್ದೇವೆ. ನಾನು ಒಂದು ಚಿಕ್ಕ ಗ್ರಾಮದಿಂದ ಬಂದಿದ್ದೇನೆ. ನಮ್ಮ ಗ್ರಾಮದಲ್ಲಿ ನಮ್ಮ ಅಜ್ಜಿ ಕಥೆಗಳನ್ನು ಹೇಳುವಾಗ ಅವರು ಇದೇ ಭಾಷೆಯಲ್ಲಿ ಹೇಳುತ್ತಿದ್ದರು. ಈ ದೇಶದ ಮಹಾನ ಸಂತರು, ಈ ದೇಶದ ಮಹಾನ ಕೀರ್ತನಕಾರರು ನಡೆಸುವ ಸಂವಾದವು ಸಹ ನಾನು ಬರೆದ ಪದ್ಧತಿಯಂತೆ ಇರುತ್ತದೆ, ಹೀಗೆ ಸಂವಾದ ಬರೆದವರಲ್ಲಿ ನಾನು ಮೊದಲಿಗನಲ್ಲ, ಅದು ಹಿಂದಿನಿಂದಲೂ ಹೇಳಲಾಗುತ್ತಿದೆ, ಎಂದು ಉತ್ತರಿಸಿದರು.

ಏನು ಈ ಆಕ್ಷೇಪಾರ್ಹ ಸಂವಾದ ?

ಹನುಮಂತನ ಲಂಕಾದಹನದ ಪ್ರಸಂಗ ತೋರಿಸುವಾಗ ಕಪಡಾ ತೆರೆ ಬಾಪ ಕಾ, ತೆಲ ತೆರೆ ಬಾಪ ಕಾ , ತೋ ಜಲೆಗಿ ತೆರೆ ಬಾಪ ಕಿ, ಎಂಬ ಸಂವಾದ ಹನುಮಂತನು ಹೇಳುತ್ತಾನೆ. ಈ ಸಂವಾದ ಕೇಳಿ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ಪೀಳಿಗೆಗೆ ಈಗ ಏನು ತಿಳಿಯುತ್ತದೆ ಮತ್ತು ಏನು ತಿಳಿಯುವುದಿಲ್ಲ ಎಂಬುದಕ್ಕಿಂತ ರಾಮಾಯಣದ ಧಾರ್ಮಿಕ ಮಹತ್ವ ತಿಳಿದುಕೊಂಡು ಸಂವಾದ ಬರೆಯುವ ಅವಶ್ಯಕತೆ ಇತ್ತು ; ಆದರೆ ನಮಗೆ ಎಲ್ಲಾ ಗೊತ್ತಿದೆ , ಎಂಬ ವಿಚಾರದಿಂದ ಈ ರೀತಿಯ ಕೃತಿ ಮಾಡಲಾಗಿದೆ ಎಂಬುದೇ ಇಲ್ಲಿ ಸ್ಪಷ್ಟವಾಗುತ್ತದೆ !