‘ ಆದಿಪುರುಷ ‘ ಚಲನಚಿತ್ರದ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮನವಿ !

ಚಲನಚಿತ್ರದಿಂದ ಭಗವಾನ ಶ್ರೀರಾಮ, ಸೀತಾಮಾತೆ, ಶ್ರೀ ಹನುಮಂತ ಮುಂತಾದವರ ಅನುಚಿತ ಚಿತ್ರಣ

ನವದೆಹಲಿ – ಜೂನ್ ೧೬ ರಂದು ಪ್ರದರ್ಶನಗೊಂಡಿರುವ ‘ಆದಿಪುರುಷ’ ಎಂಬ ರಾಮಾಯಣದ ಮೇಲಾಧಾರಿತ ಚಲನಚಿತ್ರದ ವಿರುದ್ಧ ಹಿಂದೂ ಸೇನೆ ಎಂಬ ಹಿಂದುತ್ವನಿಷ್ಠ ಸಂಘಟನೆಯಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದೆ. ಹಿಂದೂ ಸೇನೆಯ ಅಧ್ಯಕ್ಷ ಮತ್ತು ಮನವಿಕರ್ತರಾದ ವಿಷ್ಣುಗುಪ್ತ ಇವರು, ಈ ಚಲನಚಿತ್ರದಲ್ಲಿ ರಾಮಾಯಣ, ಭಗವಾನ್ ಶ್ರೀರಾಮ ಮತ್ತು ನಮ್ಮ ಸಂಸ್ಕೃತಿಯನ್ನು ಅವಹೇಳನ ಮಾಡಲಾಗಿದೆ. ಈ ಚಲನಚಿತ್ರದಲ್ಲಿ ಭಗವಾನ್ ಶ್ರೀರಾಮ, ಸೀತಾ ಮಾತೆ, ಶ್ರೀ ಹನುಮಂತ ಮತ್ತು ರಾವಣ ಇವರನ್ನು ಆಕ್ಷೇಪಾರ್ಹವಾಗಿ ಚಿತ್ರೀಕರಿಸಿದ್ದು ಅಂತಹ ಪ್ರಸಂಗಗಳನ್ನು ತೆಗೆದು ಹಾಕಬೇಕು. ಈ ಪ್ರಸಂಗದಿಂದ ರಾಮಾಯಣದಲ್ಲಿನ ಚರಿತ್ರೆಯನ್ನು ಅನುಚಿತವಾಗಿ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.

ತೀಕ್ಷ್ಣವಾಗಿ ಟೀಕಿಸುತ್ತಿರುವ ಪ್ರೇಕ್ಷಕರು !

ಜೂನ್ ೧೬ ರಂದು ಆದಿಪುರುಷ ಚಲನಚಿತ್ರ ಪ್ರದರ್ಶಿತವಾದ ನಂತರ ಚಲನಚಿತ್ರ ವನ್ನು ವೀಕ್ಷಿಸಿದವರು ತಕ್ಷಣ ಇದರ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಅವರು ಈ ಚಲನಚಿತ್ರದಲ್ಲಿನ ಪ್ರಸಂಗ, ಸಂವಾದ, ಪಾತ್ರಧಾರಿಗಳ ಉಡುಗೆ ತೊಡುಗೆ ಮುಂತಾದವುಗಳೆಲ್ಲ ಮೂಲ ರಾಮಾಯಣಕ್ಕೆ ವಿರುದ್ಧವಾಗಿದೆ ಎಂದು ಹೇಳುತ್ತಾ ಚಲನಚಿತ್ರವನ್ನು ವಿರೋಧಿಸಿದ್ದಾರೆ . ಸಾಮಾಜಿಕ ಮಾಧ್ಯಮದಲ್ಲಿ ಈ ಚಲನಚಿತ್ರದ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಕೆಲವು ಜನರು ಚಲನಚಿತ್ರ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ .

ಸಂಪಾದಕೀಯ ನಿಲುವು

  • ಹಿಂದೂಗಳ ದೇವತೆಗಳನ್ನುಅನುಚಿತವಾಗಿ ಚಿತ್ರೀಕರಿಸಲಾಗುತ್ತದೆ ಮತ್ತು ಚಲನಚಿತ್ರ ನಿರೀಕ್ಷಣಾ ಮಂಡಳಿ ಯು ಅಂತಹ ಚಲನಚಿತ್ರಕ್ಕೆ ಪ್ರಮಾಣ ಪತ್ರ ನೀಡುತ್ತದೆ ಎಂಬುದು ಲಜ್ಜಾಸ್ಪದವಾಗಿದೆ ! ಕೆಲಸಕ್ಕೆ ಬಾರದ ಇಂತಹ ಚಲನಚಿತ್ರ ಮಂಡಳಿಗಳು ಯಾತಕ್ಕಾಗಿ ಬೇಕು? ಈ ಮಂಡಳಿಯಲ್ಲಿ ಈಗ ಹಿಂದೂ ಧರ್ಮದ ಜ್ಞಾನ ಇರುವವರನ್ನು ನೇಮಿಸುವ ಸಮಯ ಬಂದಿದೆ. ಹಿಂದೂಗಳು ಕೇಂದ್ರ ಸರಕಾರಕ್ಕೆ ಇದರ ಬಗ್ಗೆ ಒತ್ತಾಯಿಸಬೇಕು !
  • ಹಿಂದೂಗಳು ನಿದ್ದೆಯಲ್ಲಿರುವುದರಿಂದಲೇ ಯಾರು ಬೇಕಾದರೂ ಬಂದು ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅಪಮಾನಿಸುತ್ತಾರೆ, ಇದು ಹಿಂದುಗಳಿಗೆ ಲಜ್ಜಾಸ್ಪದ !