12 ವರ್ಷಗಳ ಹಿಂದೆ ಮಹಾರಾಷ್ಟ್ರದ ವಿದರ್ಭ ಜಿಲ್ಲಾ ಮಟ್ಟದಲ್ಲಿ ‘ದೇವಸ್ಥಾನ ಸಮಿತಿ’ಯನ್ನು ಸ್ಥಾಪಿಸಲಾಯಿತು. ಆ ಮೂಲಕ ನಾವು ವಿದರ್ಭದಲ್ಲಿರುವ ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ದೇವಸ್ಥಾನದ ವ್ಯವಸ್ಥೆಯ ಕಾರ್ಯನಿರ್ವಹಣೆಗಾಗಿ ದಾನಶೂರರು ದೇವಸ್ಥಾನಗಳಿಗೆ ಭೂಮಿಯನ್ನು ದಾನ ಮಾಡಿದ್ದರು. ದೇವಸ್ಥಾನದ ಬಳಿ ಸಾವಿರಾರು ಎಕರೆ ಭೂಮಿಯಿದೆ. ಇಂತಹ ಭೂಮಿಯನ್ನು ಕೆಲವರು ವಶಪಡಿಸಿಕೊಂಡಿದ್ದಾರೆ ಮತ್ತು ಇನ್ನು ಕೆಲವೆಡೆ ಭೂಮಿಯನ್ನು ಅತಿಕ್ರಮಿಸಲಾಗಿದೆ. ಅತ್ಯಲ್ಪ ಖರ್ಚು ಮತ್ತು ಸಮಯಮಿತಿಯೊಳಗೆ ಅಂತಹ ಭೂಮಿಯನ್ನು ದೇವಸ್ಥಾನಗಳಿಗೆ ಹಿಂದಿರುಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಕೆಲವೆಡೆ ವಿಶ್ವಸ್ಥರಲ್ಲಿಯೇ ಪರಸ್ಪರ ಸಂಘರ್ಷವಿರುವುದರಿಂದ ‘ಈ ಭೂಮಿಯನ್ನು ಮರಳಿ ಪಡೆಯಲು ಮಂದಿರಗಳ ವಿಶ್ವಸ್ಥರಿಂದ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿಲ್ಲ. ಅಂತಹ ವಿಶ್ವಸ್ಥರನ್ನು ಪದಚ್ಯುತಗೊಳಿಸಿ ಆ ಜಾಗದಲ್ಲಿ ಮತ್ತೊಬ್ಬ ವಿಶ್ವಸ್ಥರನ್ನು ನೇಮಿಸಿ ಆ ಭೂಮಿಯನ್ನು ದೇವಸ್ಥಾನಗಳಿಗೆ ಒಪ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಕೆಲವು ದೇವಸ್ಥಾನಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅವರ ಭೂಮಿಯನ್ನು ಅನ್ಯ ಪಂಥೀಯರು ಅತಿಕ್ರಮಿಸಿದ್ದಾರೆ. ಆದ್ದರಿಂದ ದೇವಸ್ಥಾನಗಳು ಅವರ ವಶವಾಗದಂತೆ ತಡೆಯಲು ಪ್ರಯತ್ನಿಸುವುದು ಅತ್ಯವಶ್ಯಕವಾಗಿದೆ. ವಿದರ್ಭ ಸಮಿತಿಯ ಅಂತರ್ಗತ ಅಂತಹ ದೇವಸ್ಥಾನಗಳ ರಕ್ಷಣೆಗಾಗಿ ಹಣವನ್ನು ಸಂಗ್ರಹಿಸಲು ಮತ್ತು ಅವುಗಳ ಜೀರ್ಣೋದ್ದಾರವಾಗಲು ಅಥವಾ ರಕ್ಷಣಾ ಗೋಡೆಯನ್ನು ನಿರ್ಮಿಸುವ ಮೂಲಕ ಇತರ ಧರ್ಮಿಯರ ಅತಿಕ್ರಮಣಗಳಿಂದ ರಕ್ಷಿಸಲು ಪ್ರಯತ್ನಿಸುವುದೂ ಅವಶ್ಯಕವಾಗಿದೆ. ಪ್ರಸ್ತುತ ದೇವಸ್ಥಾನಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ತಿದ್ದುಪಡಿ ತರಬೇಕು. ಹಿಂದೂಗಳ ದೇವಸ್ಥಾನಗಳು ಕೇವಲ ಪ್ರಾರ್ಥನಾ ಸ್ಥಳಗಳಲ್ಲ, ಅವು ಚೈತನ್ಯದ ಸ್ರೋತಗಳಾಗಿವೆ. ಎಲ್ಲಾ ಹಿಂದೂ ಭಕ್ತರಿಗೆ ಇದರ ಲಾಭ ಸಿಗಬೇಕು. ಇದಕ್ಕಾಗಿ ದೇವಸ್ಥಾನಗಳ ಆಡಳಿತ ಮಂಡಳಿಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.
(ಸೌಜನ್ಯ – Hindu Janajagruti Samiti)