ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾನೂನು ರದ್ದುಪಡಿಸಲಾಗುವುದು !

ಕಾಂಗ್ರೆಸ್ ಸರಕಾರದ ನಿರ್ಣಯ !

ಬೆಂಗಳೂರು – ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರವು ಹಿಂದಿನ ಭಾಜಪ ಸರಕಾರದಿಂದ ರೂಪಿಸಿರುವ ಮತಾಂತರ ನಿಷೇಧ ಕಾನೂನು ರದ್ದು ಪಡಿಸುವ ನಿರ್ಣಯ ತೆಗೆದುಕೊಂಡಿದೆ. ಜುಲೈ ೩ ರಿಂದ ಆರಂಭವಾಗುವ ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಲಿದೆ. ಸೆಪ್ಟೆಂಬರ್ ೨೦೨೨ ರಲ್ಲಿ ಭಾಜಪ ಸರಕಾರದಿಂದ ಈ ಕಾನೂನು ರೂಪಿಸಲಾಗಿತ್ತು, ಈ ಕಾನೂನಿನಲ್ಲಿ ಬಲವಂತವಾಗಿ, ಆಮಿಷಯೊಡ್ಡಿ, ಅಧಿಕಾರದ ದುರುಪಯೋಗಪಡಿಸಿ ಅಥವಾ ಮೋಸ ಮಾಡಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ ೩ ರಿಂದ ೫ ವರ್ಷದವರೆಗೆ ಜೈಲು ಶಿಕ್ಷೆ ಮತ್ತು ೨೫ ಸಾವಿರ ರೂಪಾಯಿ ದಂಡ ವಿಧಿಸುವ ಶಿಕ್ಷೆ ಇತ್ತು.

ಹೆಡಗೆವಾರ ಮತ್ತು ಸ್ವಾತಂತ್ರ್ಯವೀರ ಸಾವರ್ಕರ ಇವರ ಕುರಿತು ಇರುವ ಪಾಠಗಳು ಪಠ್ಯಕ್ರಮದಿಂದ ಹೊರಗೆ !

೬ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಕನ್ನಡ ಮತ್ತು ಸಮಾಜಶಾಸ್ತ್ರದ ಪುಸ್ತಕಗಳನ್ನು ಬದಲಾಯಿಸುವುದಾಗಿ ಸಂಪುಟ ಸಭೆಯಲ್ಲಿ ಮಾನ್ಯತೆ ನೀಡಲಾಗಿದೆ. ಇದರ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ ಬಳಿರಾಮ ಹೇಡಗೇವಾರ ಮತ್ತು ಸ್ವಾತಂತ್ರ್ಯವೀರ ಸಾವರ್ಕರ್ ಇವರ ಕುರಿತಾದ ಪಠ್ಯಗಳನ್ನು ತೆಗೆಯಲಾಗುವುದು. ಆ ಜಾಗದಲ್ಲಿ ಸಾವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ ಇವರಿಗೆ ನೆಹರೂರಿಂದ ಪತ್ರ ಹಾಗೂ ಡಾ. ಅಂಬೇಡ್ಕರ್ ಇವರ ಕುರಿತಾದ ಕವಿತೆಗಳ ಸಮಾವೇಶ ಮಾಡಲಾಗುವುದು ಹಾಗೂ ರಾಜ್ಯದಲ್ಲಿನ ಸರಕಾರಿ ಮತ್ತು ಖಾಸಗಿ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯದಲ್ಲಿ ಸಂವಿಧಾನದ ಪ್ರಸ್ತಾವನೆ ಕಲಿಸುವುದು ಕಡ್ಡಾಯಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಇಂತಹ ಕಾನೂನು ರದ್ದುಪಡಿಸಿದರೂ ಕೇಂದ್ರ ಮಟ್ಟದಲ್ಲಿ ಮತಾಂತರ ನಿಷೇಧ ಕಾನೂನು ರೂಪಿಸುವುದು ಅವಶ್ಯಕವಾಗಿದೆ. ಕೇಂದ್ರ ಸರಕಾರ ಇಂತಹ ಕಾನೂನನ್ನು ತಕ್ಷಣವೇ ರೂಪಿಸಿ ಹಿಂದೂಗಳ ರಕ್ಷಣೆ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !