ಹಿಂದೂಗಳ ಹಿತದ ‘ಥಿಂಕ್ ಟ್ಯಾಂಕ್’ ನಿರ್ಮಿಸಿ ಗ್ರಾಮ ಗ್ರಾಮದಲ್ಲಿ ತಲುಪಿಸಬೇಕು ! – ಡಾ. ನೀಲ ಮಾಧವ ದಾಸ, ಸಂಸ್ಥಾಪಕ, ತರುಣ ಹಿಂದೂ, ಜಾರ್ಖಂಡ್

ಡಾ. ನೀಲ ಮಾಧವ ದಾಸ

ಭಾರತದಲ್ಲಿ ಹಿಂದೂ ವಿರೋಧಿ ಕಾಲ್ಪನಿಕ ವಿಚಾರಧಾರೆ ನಿರ್ಮಾಣ ಮಾಡಲಾಗುತ್ತಿದೆ. ಭಾರತದಲ್ಲಿ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದರೆ ಮುಸಲ್ಮಾನರಿಗೆ ಬಂಧಿಸುವಾಗ ಪರಿಸ್ಥಿತಿ ಹದಗೆಡಬಾರದೆಂದು, ಹಿಂದೂಗಳನ್ನು ಕೂಡ ಬಂಧಿಸಲಾಗುತ್ತದೆ. ಖಲಿಸ್ತಾನವಾದಿ, ನಕ್ಸಲರ ಜೊತೆಗೆ ‘ಬಿಬಿಸಿ’ನಂತಹ ವಾರ್ತಾ ಸಂಸ್ಥೆಯು ಹಿಂದೂ ವಿರೋಧಿ ಚಟುವಟಿಕೆ ಮಾಡುತ್ತಿದೆ. ಹಿಂದೂಗಳಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಶಕ್ತಿ ಇಲ್ಲ. ಆದ್ದರಿಂದ ರಾಜ್ಯ ರಾಜ್ಯಗಳಲ್ಲಿ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಿವೆ. ಅದನ್ನು ತಡೆಯುವುದಕ್ಕಾಗಿ ಹಿಂದೂಗಳ ಒತ್ತಡ ಹೇರುವ ಗುಂಪು ನಿರ್ಮಾಣ ಮಾಡುವುದು ಅವಶ್ಯವಾಗಿದೆ. ಹಿಂದೂಗಳಿಂದ ಒತ್ತಡ ನಿರ್ಮಾಣವಾದನಂತರವೇ ಸರಕಾರ ಅವರ ಕಡೆಗೆ ಗಮನ ನೀಡಲೇಬೇಕಾಗುತ್ತದೆ. ಮುಸಲ್ಮಾನರ ಹಿಂದೆ ಅವರ ಧರ್ಮಬಾಂಧವರು ಯಾವಾಗಲೂ ಬೆಂಬಲಕ್ಕೆ ನಿಲ್ಲುತ್ತಾರೆ; ಆದರೆ ಧರ್ಮಕ್ಕಾಗಿ ಕಾರ್ಯ ಮಾಡುವ ಹಿಂದೂಗಳ ಹಿಂದೆ ಹಿಂದೂಗಳು ಬೆಂಬಲಕ್ಕೆ ನಿಲ್ಲುವುದಿಲ್ಲ. ಅದಕ್ಕಾಗಿ ಹಿಂದೂಗಳ ಹಿತದ ದೃಷ್ಟಿಯಿಂದ ವಿಚಾರಧಾರೆ ನಿರ್ಮಾಣಗೊಳಿಸುವುದು ಅವಶ್ಯಕವಾಗಿದೆ. ಅದಕ್ಕಾಗಿ ಗ್ರಾಮಗಳಲ್ಲಿ ದೇವಸ್ಥಾನಗಳಲ್ಲಿ ಸಾಕ್ತಾಹಿಕ ಸಭೆ ನಡೆಯುವುದು ಅವಶ್ಯಕವಾಗಿದೆ. ಇದರಲ್ಲಿ ಹಿಂದೂಗಳ ಹಿತದ ವಿಚಾರ ಮಂಡಿಸಬೇಕು. ಹಿಂದೂಗಳ ವಿರೋಧಕರು ಹಿಂದೂ ವಿರೋಧಿ ವಿಚಾರಧಾರೆ ಪಸರಿಸುತ್ತಿದ್ದರೆ, ಆಗ ಹಿಂದೂಗಳಿಗೆ ಸ್ವಂತ ಹಿತದ ವಿಚಾರಧಾರೆ ನಿರ್ಮಾಣಗೊಳಿಸಿ ಗ್ರಾಮ ಗ್ರಾಮದಲ್ಲಿ ತಲುಪಿಸಬೇಕು. ಇದರ ಸಮನ್ವಯಕ್ಕಾಗಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸ್ಥಾಪನೆ ಮಾಡುವುದು ಅವಶ್ಯಕ ಎಂದು ಹೇಳಿದರು.

(ಸೌಜನ್ಯ – Hindu Janajagruti Samiti)