ಕಾಂದಿವಲಿ(ಮುಂಬಯಿ) ಇಲ್ಲಿಯ `ಕಪೋಲ ವಿದ್ಯಾರ್ಥಿನಿ’ ಈ ಶಾಲೆಯಲ್ಲಿ ಅಜಾನ ಹಾಕಿದ ಶಿಕ್ಷಕಿ

ಮುಂಬಯಿ- ಕಾಂದಿವಲಿಯ `ಕಪೋಲ ವಿದ್ಯಾರ್ಥಿನಿ’ ಶಾಲೆಯಲ್ಲಿ ಓರ್ವ ಶಿಕ್ಷಕಿಯು ಧ್ವನಿವರ್ಧಕದಲ್ಲಿ ಪ್ರಾರ್ಥನೆಯ ಬಳಿಕ ಅಜಾನ ಹಾಕಿಸಿದ ಪ್ರಕರಣ ಜೂನ 16 ರಂದು ಘಟಿಸಿದೆ. ಈ ಸಂದರ್ಭದಲ್ಲಿ ಮಾಹಿತಿ ಸಿಗುತ್ತಲೇ ಶಿವಸೇನೆಯ ವತಿಯಿಂದ ಪೊಲೀಸ ಠಾಣೆಯಲ್ಲಿ ದೂರು ನೀಡಿ, ಅಪರಾಧವನ್ನು ದಾಖಲಿಸುವಂತೆ ಬೇಡಿಕೆ ನೀಡಲಾಗಿದೆ. ಪುನಃ ಈ ರೀತಿ ಧ್ವನಿವರ್ಧಕದಲ್ಲಿ ಶಾಲೆಯಲ್ಲಿ ಅಜಾನ ಅನ್ನು ಹಾಕಬಾರದು ಎಂಬ ಆಶಯದ ಪತ್ರವನ್ನು ಶಿವಸೇನೆಯಿಂದ ಶಾಲೆಗೆ ನೀಡಲಾಗಿದೆಯೆಂದು ತಿಳಿದು ಬಂದಿದೆ. `ಶಾಲೆಯಲ್ಲಿ ಉದ್ದೇಶಪೂರ್ವಕವಾಗಿ ಅಜಾನನ್ನು ಹಾಕಲಾಗಿತ್ತು. ಶಿಕ್ಷಕಿ ಮುಸ್ಲಿಂ ಆಗಿದ್ದು ಅವಳ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲ’ ಎಂದು ಶಿವಸೇನೆ ಮತ್ತು ಪೋಷಕರು ಆರೋಪಿಸಿದ್ದಾರೆ.

ಶಿವಸೇನೆಯು ಅಜಾನ ಅನ್ನು ಹಾಕುವುದರ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಸಂಬಂಧಪಟ್ಟ ಶಿಕ್ಷಕಿಯನ್ನು ವಜಾಗೊಳಿಸಲಾಗಿದೆಯೆಂದು ಶಾಲೆಯ ಆಡಳಿತ ಮಂಡಳಿಯು ಹೇಳಿದೆ. ಹಾಗೆಯೇ ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡುತ್ತಾ, “ವಿದ್ಯಾರ್ಥಿಗಳಿಗೆ ಎಲ್ಲ ಧರ್ಮಗಳ ಪ್ರಾರ್ಥನೆ ತಿಳಿಯಬೇಕೆಂದು ನಾವು ಎಲ್ಲ ಧರ್ಮದ ಪ್ರಾರ್ಥನೆಯನ್ನು ಹಚ್ಚುತ್ತೇವೆ. ಇಂದು ಅಜಾನ ಕೂಗು ಹಚ್ಚಲಾಗಿತ್ತು” ಎಂದು ಶಾಲೆಯು ತಿಳಿಸಿದೆ. ( ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿರುವಾಗ ಇತರ ಪಂಥದ ಪ್ರಾರ್ಥನೆಯನ್ನು ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವ ಆವಶ್ಯಕತೆಯೇನಿದೆ ?- ಸಂಪಾದಕರು)

ಸಂಪಾದಕೀಯ ನಿಲುವು

ಶಾಲೆಯ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಕಲಿಸುವುದರಿಂದ ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆಯೆಂದು ಕಂಠಶೋಷಣೆ ಮಾಡುವ ಜಾತ್ಯಾತೀತವಾದಿಗಳು ಈಗೇಕೆ ಸುಮ್ಮನಿದ್ದಾರೆ? ಅಥವಾ ಅಜಾನನ್ನು ಕೇಳುವುದು ಜಾತ್ಯಾತೀತತೆಯ ದ್ಯೋತಕವಾಗಿದೆ? ಎಂದು ಅವರಿಗೆ ಹೇಳಲಿಕ್ಕಿದೆಯೇನು ?