ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ವೀರ ಸಾವರ್ಕರ್ ಅವರ ವಿಚಾರದಂತೆ ಕಾರ್ಯ ಮಾಡಬೇಕು ! – ರಣಜಿತ ಸಾವರಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯ ವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ರಣಜಿತ ಸಾವರಕರ, ಕಾರ್ಯಾಧ್ಯಕ್ಷ, ಸ್ವಾತಂತ್ರ್ಯ ವೀರ ಸಾವರಕರ ರಾಷ್ಟ್ರೀಯ ಸ್ಮಾರಕ

ಮುಸಲ್ಮಾನರು ದಿನಕ್ಕೆ 5 ಬಾರಿ ನಮಾಜು ಪಠಣ ಮಾಡುತ್ತಾರೆ. ಅದೇ ರೀತಿ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗೆ ಸಮಯ ನೀಡಬೇಕು. ವೀರ ಸಾವರಕರ ಅವರ ವಿಚಾರಗಳಿಂದ ಜಾಗೃತರಾಗಿ ‘ಹಿಂದೂ ರಾಷ್ಟ್ರಕ್ಕಾಗಿ ನಾನೇನು ಮಾಡಬಲ್ಲೆ’, ಎಂದು ಹಿಂದೂಗಳು ವಿಚಾರ ಮಾಡಬೇಕು. ಹಿಂದೂ ರಾಷ್ಟ್ರ ಸ್ಥಾಪನೆಗೆ ಹಿಂದೂಗಳು ಸಮಯ ನೀಡಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯ ಮಾಡಬೇಕಾದರೆ, ನಾವು ಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಹಿಂದೂ ರಾಷ್ಟ್ರ ಸ್ಥಾಪಿಸಬೇಕಿದ್ದರೆ, ನಾವು ವೀರ ಸಾವರಕರ ಅವರ ಚಿಂತನೆಗಳೊಂದಿಗೆ ಕಾರ್ಯ ಮಾಡಬೇಕು. ಮೊಹಮ್ಮದ್ ಬಿನ್ ಖಾಸಿಂ ಇವನು ಭಾರತದ ಮೇಲೆ ದಾಳಿ ಮಾಡಿದಾಗ ಹಿಂದೂಗಳಲ್ಲಿ ಒಡಕನ್ನುಂಟು ಮಾಡಿ ದಾಹಿರ ರಾಜನನ್ನು ಸೋಲಿಸಿದನು. ಪ್ರದೇಶ, ಭಾಷೆ, ಪಂಥದ ಭಿನ್ನಾಭಿಪ್ರಾಯಗಳಿಂದ ಹಿಂದೂಗಳು ಸೋತಿದ್ದಾರೆ, ಇದು ಇಂದಿನವರೆಗಿನ ಇತಿಹಾಸವಾಗಿದೆ. ಸಿಖ್ಕರ ಧರ್ಮಗುರು ಗುರುಗೋವಿಂದ ಸಿಂಗ್ ತಮ್ಮ ಸ್ವಂತ ಪಂಥವನ್ನು ‘ಖಾಲ್ಸಾ’ ಎಂದು ಕರೆದರು; ಆದರೆ ಧರ್ಮವನ್ನು ‘ಹಿಂದೂ’ ಎಂದು ಹೇಳಿದರು. ಸನಾತನ ಹಿಂದೂ ಧರ್ಮವೇ ನಮ್ಮ ಧರ್ಮವಾಗಿದೆ. ‘ಹಿಂದುತ್ವವೇ ನಮ್ಮ ರಾಷ್ಟ್ರೀಯತೆ’ ಎಂಬ ಸ್ವಾತಂತ್ರ್ಯವೀರ ಸಾವರಕರ ಅವರ ಚಿಂತನೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶದ ಶೇ. 80 ರಷ್ಟು ಹಿಂದೂಗಳಿದ್ದೇವೆ; ಆದರೆ ನಾವು ಜಾತಿಗಳಾಗಿ ವಿಭಜಿಸಲ್ಪಟ್ಟಿದ್ದೇವೆ ! ಮುಸ್ಲಿಮರು ನಮ್ಮ ಮೇಲೆ ಅತ್ಯಾಚಾರ ಮಾಡುತ್ತಾರೆ’, ಏಕೆಂದರೆ ಹಿಂದೂಗಳಲ್ಲಿ ಒಗ್ಗಟ್ಟಿಲ್ಲ. ಇದು ಹಿಂದೂಗಳ ತಪ್ಪಾಗಿದೆ. ಈಗಿನ ಯುದ್ಧವು ಕತ್ತಿಯ ಬಲದಿಂದಲ್ಲ, ಬದಲಾಗಿ ಆರ್ಥಿಕ ಹೋರಾಟ ಆರಂಭವಾಗಿದೆ. ‘ಹಲಾಲ್ ಜಿಹಾದ್’ ಇದು ಮುಸ್ಲಿಮರ ಆರ್ಥಿಕ ಯುದ್ಧವಾಗಿದೆ. ಹಿಂದುತ್ವವು ಕೇವಲ ಉಪಾಸನೆಯ ಪದ್ದತಿ ಅಲ್ಲ, ಬದಲಾಗಿ ಹಿಂದುತ್ವವು ಒಂದು ರಾಷ್ಟ್ರೀಯತೆಯಾಗಿದೆ.