ರಾಮನಾಥಿ (ಫೋಂಡಾ), ಜೂನ್ 15 (ವಾರ್ತೆ) – ಇಲ್ಲಿನ ಶ್ರೀ ರಾಮನಾಥ ದೇವಸ್ಥಾನದಲ್ಲಿ ಜೂನ್ 16 ರಿಂದ 22 ರವರೆಗೆ ನಡೆಯಲಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಅಂದರೆ ಹನ್ನೊಂದನೇಯ ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನದ ಸಿದ್ಧತೆ ಪೂರ್ಣಗೊಂಡಿದೆ. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿರುವ ಈ ಉತ್ಸವದಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರು ಈ ಪವಿತ್ರ ಪರಶುರಾಮ ಭೂಮಿಗೆ ಆಗಮಿಸಿದ್ದು, ಜೂನ್ 16 ರಂದು ಅಂದರೆ ಇಂದು ಈ ಮಹೋತ್ಸದಲ್ಲಿ ಉತ್ಸಾಹದಿಂದ ಆರಂಭವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ಮಾಡುತ್ತಿರುವ ಹಿಂದುತ್ವನಿಷ್ಠರು ಈ ಅಧಿವೇಶನದ ವೇದಿಕೆಯಿಂದ ಹಿಂದೂ ರಾಷ್ಟ್ರದ ಸ್ಥಾಪನೆಗೆ ತಮ್ಮ ಪರಿಣಾಮಕಾರಿ ಅಂಶವನ್ನು ಪ್ರಸ್ತುತಪಡಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ಮುಂದಿನ ದಿಕ್ಕನ್ನು ನಿರ್ಧರಿಸಲಾಗುತ್ತದೆ.
Less than 24 hours away!#Vaishvik_HinduRashtra_Mahotsav
⛳ To mobilise & unite diverse Hindu & patriotic organisations
⛳ To initiate socio-political programs to safeguard Hindus throughout the world
⛳ To ignite spark of Hindu Rashtra in the hearts of peopleCommences 16… pic.twitter.com/MrYzoQWXxm
— HinduJagrutiOrg (@HinduJagrutiOrg) June 15, 2023
ಈ ಅಧಿವೇಶನಕ್ಕೆ ಭಾರತದ 28 ರಾಜ್ಯಗಳು ಮತ್ತು 9 ವಿವಿಧ ದೇಶಗಳಿಂದ 1 ಸಾವಿರದ 600 ಹಿಂದುತ್ವನಿಷ್ಠರನ್ನು ಆಹ್ವಾನಿಸಲಾಗಿದೆ. ವೈಶಿಷ್ಟ್ಯವೆಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಹಿಂದುತ್ವನಿಷ್ಠರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ವಿವಿಧ ಪ್ರಾಂತ್ಯಗಳ, ವಿವಿಧ ಭಾಷೆಯ, ವಕೀಲರು, ವೈದ್ಯರು, ಉದ್ಯಮಿಗಳು, ಪತ್ರಕರ್ತರು, ಎಂಜಿನಿಯರ್‌ಗಳು ಮುಂತಾದ ಕ್ಷೇತ್ರಗಳಲ್ಲಿನ ಹಿಂದುತ್ವನಿಷ್ಠರು ಈ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ.
ಈ ಅಧಿವೇಶನದ ನೇರಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ HinduJagruti.org ನಲ್ಲಿ ಹಾಗೆಯೇ ಯೂಟ್ಯೂಬ್ ಚಾನೆಲ್ ‘HinduJagruti’ ಮತ್ತು facebook.com/hjshindi1 ಈ ಫೇಸ್ ಬುಕ್ ನಲ್ಲಿಯೂ ಪ್ರಸಾರವಾಗಲಿದೆ. ಜಗತ್ತಿನಾದ್ಯಂತ ಹಿಂದುತ್ವನಿಷ್ಠರು ಈ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
(ಸೌಜನ್ಯ – Hindu Janajagruti Samiti)