ಹರದೋಯಿ (ಉತ್ತರಪ್ರದೇಶ) – ಇಲ್ಲಿ ಒಂದು ಕುಟುಂಬವನ್ನು ಬಲವಂತವಾಗಿ ಮತಾಂತರಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನರ ಮೇಲೆ ದೂರನ್ನು ದಾಖಲಿಸಲಾಗಿದೆ. ಇದರಲ್ಲಿ 2 ಪಾದ್ರಿಗಳು ಸೇರಿದ್ದಾರೆ. ಮೈಕೂ, ಸುಮಿತ, ಅಧಿರಾಜ ಮತ್ತು ಶಿವನಂದನ ಎಂದು ಅವರ ಹೆಸರಾಗಿವೆ. ಇದರಲ್ಲಿ ಅಧಿರಾಜ ಮತ್ತು ಶಿವನಂದನ ಇವರಿಬ್ಬರು ಪಾದ್ರಿಗಳಾಗಿದ್ದಾರೆ. (ಮತಾಂತರಗೊಂಡವರು ಹೆಚ್ಚು ಅಪಾಯಕಾರಿಯಾಗಿರುತ್ತಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! ಹಣ ಗಳಿಸಲೆಂದೇ ಈ ಮತಾಂತರದ ಪ್ರಯತ್ನ ನಡೆಸಲಾಗುತ್ತದೆಯೆನ್ನುವುದು ಗಮನಕ್ಕೆ ಬರುತ್ತದೆ ! -ಸಂಪಾದಕರು) ಅವರ ವಿರುದ್ಧ ಅನಧಿಕೃತವಾಗಿ ಕ್ರೈಸ್ತ ಶಾಲೆ ನಡೆಸುತ್ತಿರುವ ಆರೋಪವೂ ಇದೆ.
Hardoi, UP: Sumit, Adhiraj and others force Hindu man to convert to Christianity and threaten him when he refused, threw his Murthis out, FIR filedhttps://t.co/nQN7BRLna9
— OpIndia.com (@OpIndia_com) June 15, 2023
ದೂರುದಾರ ವಿಜಯ ಇವರ ಪುತ್ರ ಸೌರಭನಿಗೆ ಬ್ರೈನ್ ಟ್ಯೂಮರ ಇತ್ತು. ಆರೋಪಿಯು ಅವನ ಪುತ್ರನು ಈ ರೋಗದಿಂದ ಮುಕ್ತನಾಗುತ್ತಾನೆಂದು ಆಶ್ವಾಸನೆ ನೀಡಿದ್ದನು. ಕೆಲವು ದಿನಗಳವರೆಗೆ ಅವನು ಮಗನಿಗೆ ಚಿಕಿತ್ಸೆ ನೀಡಿದನು; ಆದರೆ ಅವನು ಗುಣಮುಖ ಆಗದೇ ಇದ್ದರಿಂದ ಅವನು ವಿಜಯನಿಗೆ `ನಿಮ್ಮ ಕುಟುಂಬದವರು ಮತಾಂತರಗೊಂಡರೆ ನಿಮ್ಮ ಮಗ ಗುಣಮುಖನಾಗುತ್ತಾನೆ ಮತ್ತು ನಿಮಗೆ 1 ಲಕ್ಷ ರೂಪಾಯಿಯನ್ನು ಕೊಡಲಾಗುವುದು’, ಎಂದೂ ಸಹ ಹೇಳಿದನು. ಅವನು 5 ಸಾವಿರ ರೂಪಾಯಿಗಳನ್ನು ನೀಡಿ ಹುಡುಗನ ಕೊರಳಿಗೆ ಕ್ರಾಸ್ ಚಿಹ್ನೆಯ ಪದಕವನ್ನು ಹಾಕಿದನು. ನಂತರ ಅವನು ಮನೆಯಲ್ಲಿರುವ ದೇವತೆಗಳ ಮೂರ್ತಿಗಳನ್ನು ಬಿಸಾಡಿದನು. ಇದರ ಸುಳಿವು ಪಕ್ಕದ ಮನೆಯವರಿಗೆ ಸಿಕ್ಕಾಗ, ಅವರು ವಿಜಯರ ಕುಟುಂಬದವರನ್ನು ಮತಾಂತರಗೊಳಿಸುವವನಿಗೆ ವಿರೋಧಿಸಿದರು. ಇದರಿಂದ ಆರೋಪಿಯು ವಿಜಯರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸುವಂತೆ ಬೆದರಿಕೆ ಹಾಕಿದನು. ಇದರಿಂದ ವಿಜಯನು ಆರೋಪಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದನು. ತದನಂತರ ಪೊಲೀಸರು ಆರೋಪಿಯ ಮೇಲೆ ದೂರನ್ನು ದಾಖಲಿಸಿದರು.
ಸಂಪಾದಕೀಯ ನಿಲುವುಮತಾಂತರ ವಿರೋಧಿ ಕಠಿಣ ಕಾನೂನು ಇಲ್ಲದಿರುವುದರಿಂದಲೇ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆಯೆನ್ನುವುದನ್ನು ಗಮನಿಸಬೇಕು ! |