|
ಡೆಹರಾಡುನ (ಉತ್ತರಾಖಂಡ) – ಹರಿದ್ವಾರದಲ್ಲಿ ಬಹಾದರಾಬಾದ ನಗರದಲ್ಲಿ ಸರಕಾರಿ ಭೂಮಿಯ ಮೇಲೆ ನಿರ್ಮಿಸಲಾಗಿದ್ದ ಗೋರಿಯನ್ನು ಸರಕಾರ ಬುಲ್ಡೋಜರ್ ನಿಂದ ನೆಲಸಮಗೊಳಿಸಿತು. ಈ ಮಾಹಿತಿ ಸಿಗುತ್ತಲೇ ಮತಾಂಧ ಮುಸಲ್ಮಾನರು ಅಲ್ಲಿ ಗುಂಪುಗೂಡಿದರು. ಅವರು ಸರಕಾರಿ ಅಧಿಕಾರಿಗಳಲ್ಲಿ ಈ ವಿಷಯದ ಕುರಿತು ಪ್ರಶ್ನಿಸತೊಡಗಿದರು. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ ನಡೆಸಿದರು.
1. ಬಹಾದರಾಬಾದ ನಗರದ ಸಂಸ್ಕೃತ ವಿಶ್ವವಿದ್ಯಾಲಯದ ಹತ್ತಿರವಿರುವ ಸರಕಾರಿ ಭೂಮಿಯ ಮೇಲೆ ಮತಾಂಧರು ಅನಧಿಕೃತವಾಗಿ ಗೋರಿಯನ್ನು ನಿರ್ಮಿಸಿದ್ದರು ಮತ್ತು ಅದಕ್ಕೆ `ಸೈಯ್ಯದ ಬಾಬಾ ರೋಶನ ಅಲಿ ಶಾಹ ಮಜಾರ’ ಎಂದು ನಾಮಕರಣ ಮಾಡಿದ್ದರು. `ಈ ಗೋರಿಯನ್ನು ಮಸೀದಿಯಲ್ಲಿ ರೂಪಾಂತರಗೊಳಿಸಲಿದ್ದರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.
2. ಕಳೆದ ತಿಂಗಳು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸಾಗರ ಖೆಮರಿಯಾ ಇವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು `ಗೋರಿಯಲ್ಲಿ ಹಾಕಲಾಗಿದ್ದ ಧ್ವನಿವರ್ಧಕದಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ತೊಂದರೆಯಾಗುತ್ತಿದೆ’ ಎಂದು ದೂರು ನೀಡಿದ್ದರು. (ಇಂತಹ ದೂರನ್ನು ಏಕೆ ನೀಡಬೇಕಾಗುತ್ತಿದೆ ? ಪೊಲೀಸರು ತಾವಾಗಿಯೇ ಏಕೆ ಕ್ರಮ ಕೈಗೊಳ್ಳುವುದಿಲ್ಲ ?- ಸಂಪಾದಕರು)
3. ಈ ದೂರನ್ನು ಪರಿಗಣಿಸಿ ಸರಕಾರ ಜೂನ 12 ರಂದು ಗೋರಿಯನ್ನು ಕೆಡವಲು ಬುಲ್ಡೋಜರ ತರಿಸಿದ್ದರು ಹಾಗೂ ಆ ಸಮಯದಲ್ಲಿ ಪೊಲೀಸ ತುಕಡಿಯನ್ನು ನಿಯೋಜಿಸಲಾಗಿತ್ತು. ಆ ಸಮಯದಲ್ಲಿ ಬೃಹತ್ ಪ್ರಮಾಣದಲ್ಲಿ ಮತಾಂಧರು ಗುಂಪುಗೂಡಿದ್ದರು.
4. ಈ ಸಮಯದಲ್ಲಿ ಮತಾಂಧರು `ಇತರೆ ಧರ್ಮದವರ ಪ್ರಾರ್ಥನಾಸ್ಥಳಗಳನ್ನು ಕೂಡ ಧ್ವಂಸಗೊಳಿಸಿರಿ’, ಎಂದು ಆಗ್ರಹಿಸತೊಡಗಿದರು. ಗುಂಪು ಆಕ್ರೋಶಗೊಳ್ಳುತ್ತಿರುವುದನ್ನು ಗಮನಿಸಿದ ಪೊಲೀಸರು ಲಾಠಿಚಾರ್ಜ ನಡೆಸಿದರು. `ನಗರದ ಅನೇಕ ಅನಧಿಕೃತ ಕಟ್ಟಡ ಕಾಮಗಾರಿಗಳ ಮೇಲೆ ಆಡಳಿತ ಕ್ರಮ ಕೈಗೊಳ್ಳುತ್ತಿದೆ’, ಎಂದು ಸರಕಾರ ಮಾಹಿತಿ ನೀಡಿದೆ.
Video of another Illegal Mazaar in Haridwar getting demolished goes viral
Till now, reportedly more than 400 illegal Mazaars have been demolished by Dhami Govt in Uttarakhand. pic.twitter.com/ksbHm55fOh
— Megh Updates 🚨™ (@MeghUpdates) June 12, 2023
ಸಂಪಾದಕರ ನಿಲುವು
|