ವಿಶ್ವಾಮಿತ್ರ ಋಷಿಯ ವಿಷಯದಲ್ಲಿ ಖೇದಕರ ಹೇಳಿಕೆ ನೀಡಿದ್ದ ಸರವರ ಚಿಶ್ತಿಯವರಿಂದ ಕ್ಷಮಾಯಾಚನೆ

ಜಯಪುರ (ರಾಜಸ್ಥಾನ) – ಹುಡುಗಿಯಿಂದಾಗಿ ಎಷ್ಟೇ ದೊಡ್ಡ ವ್ಯಕ್ತಿಯಿದ್ದರೂ ಜಾರುತ್ತದೆ. ವಿಶ್ವಾಮಿತ್ರರು ಕೂಡ ಜಾರಬಹುದು ಎಂದು ಹೇಳಿಕೆ ನೀಡಿರುವ ಪ್ರಕರಣದಲ್ಲಿ ಅಜ್ಮೇರ ದರ್ಗಾದ ಖಾದಿಮ್ (ನೌಕರರ) ಸಂಘಟನೆಯಾಗಿರುವ `ಅಂಜುಮನ ಸಯ್ಯದ ಜಾದಗಾನ’ ಕಾರ್ಯದರ್ಶಿ ಸರವರ ಚಿಶ್ತಿಯವರು ಕ್ಷಮೆ ಕೋರಿದ್ದಾರೆ. ಈ ಹೇಳಿಕೆಯ ಬಳಿಕ ಅವರ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ. ಇದರಿಂದ ಅವರು ಕ್ಷಮೆ ಕೋರಿದ್ದಾರೆ. `ನಾನು ಕೂಡ ಮನುಷ್ಯನಾಗಿದ್ದೇನೆ. ನನ್ನ ನಾಲಿಗೆ ಜಾರಬಹುದು’ ಎಂದು ತಿಪ್ಪೆಸಾರಿಸಿದ್ದಾರೆ. (ಇಸ್ಲಾಂನ ಶ್ರದ್ಧಾಸ್ಥಾನದ ವಿಷಯದಲ್ಲಿ ಮಾತನಾಡುವಾಗ ಚಿಶ್ತಿಯವರ ನಾಲಿಗೆ ಜಾರುತ್ತಿತ್ತೇ? ಹಿಂದೂಗಳ ದೇವತೆ ಮತ್ತು ಶ್ರದ್ಧಾಸ್ಥಾನಗಳ ವಿಷಯದಲ್ಲಿ ಮಾತನಾಡುವಾಗ ಅವರ ನಾಲಿಗೆ ಹೇಗೆ ಜಾರುತ್ತದೆ ? – ಸಂಪಾದಕರು)

1. ಸರವರ ಚಿಶ್ತಿಯವರು ಮಾತನಾಡುತ್ತಾ, ‘`ಅಜ್ಮೇರ 92’ ಈ ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು, ಆ ವಿಷಯದಲ್ಲಿ ನಾನು ಸಂದರ್ಶನ ನೀಡಿದ್ದೆನು. ಆ ಸಂದರ್ಶನದಲ್ಲಿ ನಾನು ಆರೋಪಿಯ ಮೇಲೆ ಹೆಚ್ಚು ಟೀಕಿಸಿದ್ದೆನು; ಆದರೆ ಈ ಸಂದರ್ಶನವನ್ನು ತೋರಿಸದೇ ನನ್ನ `ಸ್ಟಿಂಗ ಆಪರೇಶನ’ (ಕದ್ದುಮುಚ್ಚಿದ ಪದ್ಧತಿಯಿಂದ ಮಾಹಿತಿಯನ್ನು ಪಡೆದುಕೊಳ್ಳುವುದು) ಮಾಡಿ ನಾನು ಖಾಸಗಿಯಲ್ಲಿ ಮಾತನಾಡುತ್ತಿರುವಾಗಿನ ಹೇಳಿಕೆಯನ್ನು ಪ್ರಸಾರ ಮಾಡಲಾಗಿದೆ. (ಅಂದರೆ `ಖಾಸಗಿಯಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳ ವಿಷಯದಲ್ಲಿ ಏನು ಬೇಕಾದರೂ ಮಾತನಾಡಿದರೆ ನಡೆಯುತ್ತದೆ’, ಎಂದು ಚಿಶ್ತಿಯವರಿಗೆ ಹೇಳುವುದಿದೆಯೇ ? ಇಂತಹವರ ಸ್ಥಾನ ಕಾರಾಗೃಹದಲ್ಲಿದ್ದು ಅವರ ಮೇಲೆ ಕ್ರಮ ಕೈಕೊಳ್ಳಲು ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ವಿರೋಧಿಸುವುದು ಆವಶ್ಯಕ ! – ಸಂಪಾದಕರು) ಈ ವಿಡಿಯೋದಿಂದಾಗಿ ನನ್ನ ಮೇಲೆ ಟೀಕೆಯ ಸುರಿಮಳೆಯಾಗುತ್ತಿದೆ’ ಎಂದು ಹೇಳಿದರು.

2. ಅಜ್ಮೇರನಲ್ಲಿ 1992 ರಲ್ಲಿ ನಡೆದಿದ್ದ 200 ಕ್ಕಿಂತ ಹೆಚ್ಚು ಲೈಂಗಿಕ ಕಿರುಕುಳದ ಘಟನೆಗಳಲ್ಲಿ ಅಜ್ಮೇರ ಖ್ವಾಜಾ ಮೊಯಿನುದ್ದೀನ ಚಿಶ್ತಿಯವರ ದರ್ಗಾದ ನೌಕರನಾಗಿದ್ದ ಚಿಶ್ತಿ ಮನೆತನದ ಕೆಲವು ಮುಸಲ್ಮಾನರ ಕೈವಾಡವಿತ್ತು. ಈ ಕಾರಣದಿಂದ ಮುಸಲ್ಮಾನರು `ಅಜ್ಮೇರ 92’ ಈ ಚಲನಚಿತ್ರವನ್ನು ನಿರ್ಬಂಧಿಸುವಂತೆ ಕೋರುತ್ತಿದ್ದಾರೆ.

3. ಸರವರ ಚಿಶ್ತಿಯವರು ಈ ಹಿಂದೆಯೂ ಹಿಂದೂಗಳ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಿ.ಎಫ್.ಐ. ಜೊತೆ ಅವರ ಸಂಬಂಧವಿದೆಯೆನ್ನುವುದು ಬೆಳಕಿಗೆ ಬಂದಿತ್ತು. ಅವರ ಮಗ ಆದಿರ ಚಿಶ್ತಿ ಕೂಡ ಹಿಂದೂ ದೇವತೆಗಳ ಮೇಲೆ ಖೇದಕರ ಟೀಕೆ ಮಾಡಿದ್ದನು.

ಸಂಪಾದಕೀಯ ನಿಲುವು

ಹಿಂದೂಗಳ ಋಷಿ-ಮುನಿಗಳ ವಿಷಯದಲ್ಲಿ ಖೇದಕರ ಹೇಳಿಕೆ ನೀಡುವವರನ್ನು ಜೈಲಿಗಟ್ಟಬೇಕು, ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಆಡಳಿತವಿರುವುದರಿಂದ ಅಲ್ಲಿಯ ಮತಾಂಧರು ಕೊಬ್ಬಿದ್ದಾರೆ ಎನ್ನುವುದು ಸತ್ಯವಾಗಿದೆ !