ಪೊಲೀಸರಿಂದ ನನ್ನ ಹಿಂದೂ ಪತಿಯ ಕುಟುಂಬದವರಿಗೆ ಕಿರುಕುಳ !

ಮುಸಲ್ಮಾನ ಯುವತಿಯ ಗಂಭೀರ ಆರೋಪ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಕುಷಿನಗರ ಜಿಲ್ಲೆಯ ಒರ್ವ ಮುಸಲ್ಮಾನ ಯುವತಿಯು ಹಿಂದೂ ಧರ್ಮದಲ್ಲಿ ಪ್ರವೇಶಮಾಡಿ ಹಿಂದೂ ಯುವಕನ ಜೊತೆ ವಿವಾಹವಾಗಿದ್ದಾಳೆ. ಇದಾದ ಬಳಿಕ ಸಂಬಂಧಪಟ್ಟ ಯುವತಿಯು ‘ಪೊಲೀಸರು ನನ್ನ ಪತಿಯ (ಅಂದರೆ ಹಿಂದೂ ಯುವಕನ) ಕುಟುಂಬದವರಿಗೆ ಕಿರುಕುಳ ನೀಡುತ್ತಿದ್ದಾರೆ’, ಎಂದು ಆರೋಪಿಸಿದ್ದಾಳೆ. ಈ ಯುವತಿಯು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಾಗೇಶ್ವರಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಬಳಿ ಸಹಾಯ ಕೋರಿದ್ದಾಳೆ. ಅವಳು ಈ ಕುರಿತು ವಿಡಿಯೋ ಪ್ರಸಾರ ಮಾಡಿದ್ದಾಳೆ, ಅದರಲ್ಲಿ ‘ನಾನು ಸನಾತನ ಹಿಂದೂ ಧರ್ಮ ಸ್ವೀಕರಿಸಿದ್ದು ಓರ್ವ ಹಿಂದೂ ಯುವಕನ ಜೊತೆಗೆ ವಿವಾಹ ಮಾಡಿಕೊಂಡಿದ್ದೆನೆ; ಆದರೆ ರವೀಂದ್ರ ನಗರ ಠಾಣೆಯ ಪೊಲೀಸ ಅಧಿಕಾರಿ ಕಿರುಕುಳ ನೀಡುತ್ತಿದ್ದಾರೆ. ಓರ್ವ ಮುಸಲ್ಮಾನ ಯುವತಿ ಹಿಂದೂ ಧರ್ಮ ಸ್ವೀಕರಿಸಲು ಸಾಧ್ಯವಿಲ್ಲವೇ ? ನೀವು ನನ್ನನ್ನು ತಡೆಯುವವರು ಯಾರು ? ನಾನು ಜೈ ಶ್ರೀ ರಾಮ್ ಎನ್ನುತ್ತಲೇ ಇರುತ್ತೇನೆ. ಏನುಬೇಕಾದರೂ ಮಾಡಿ. ಪೊಲೀಸರು ನನ್ನ ತವರು ಮನೆಯವರಿಂದ ಹಣ ಪಡೆದು ನನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾಳೆ.

ಪೊಲೀಸರು ಆರೋಪ ತಿರಸ್ಕಾರ !

ರವೀಂದ್ರ ನಗರ ಪೊಲೀಸ್ ಠಾಣೆಯ ಪೊಲೀಸ ಅಧಿಕಾರಿ ರಾಜೇಶ ಮಿಶ್ರಾ ಇವರು ಈ ಆರೋಪ ತಿರಸ್ಕರಿಸಿದ್ದಾರೆ .

ಸಂಪಾದಕೀಯ ನಿಲುವು

ಈ ಆರೋಪದಲ್ಲಿ ಏನಾದರೂ ಸತ್ಯಾಂಶವಿದ್ದರೆ, ಉತ್ತರಪ್ರದೇಶದಲ್ಲಿನ ಭಾಜಪ ಸರಕಾರದಿಂದ ಸಂಬಂಧಪಟ್ಟ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !