ಬ್ರಾಹ್ಮಣರು ತಮ್ಮ ನಿಲುವನ್ನು ನಿಸರ್ಗಕ್ಕೆ ಅನುಕೂಲಕರವಾಗುವಂತೆ ಬದಲಾಯಿಸುವ ಆವಶ್ಯಕತೆ

ಐ.ಎ.ಎಸ್. ಅಧಿಕಾರಿ ನಿಯಾಝ್ ಖಾನರ ಹೇಳಿಕೆ

ಐ.ಎ.ಎಸ್. ಅಧಿಕಾರಿ ನಿಯಾಝ್ ಖಾನ

ಭೋಪಾಳ (ಮಧ್ಯಪ್ರದೇಶ) – ಹಿಂದೂ ಧರ್ಮ ಸಹಿತ ಇತರೆ ವಿವಿಧ ವಿಷಯಗಳ ಮೇಲೆ 8 ಪುಸ್ತಕಗಳನ್ನು ಬರೆದಿರುವ ಐ.ಎ.ಎಸ್. ಅಧಿಕಾರಿ ನಿಯಾಝ್ ಖಾನ ಇವರು ಬ್ರಾಹ್ಮಣರಿಗೆ ತಮ್ಮ ನಿಲುವನ್ನು ನಿಸರ್ಗಕ್ಕೆ ಅನುಕೂಲಕರವಾಗುವಂತೆ ಬದಲಾಯಿಸಲು ಸಲಹೆ ನೀಡಿದ್ದಾರೆ. ಅವರು ಟ್ವೀಟ ಮಾಡಿ, ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದ ಅಭಿವೃದ್ಧಿ ಹೊಂದದೇ ಇರುವ ದೇಶಗಳು ತಮ್ಮ ಸಂಸ್ಕೃತಿ, ಪ್ರಾಚೀನ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಬಿಟ್ಟು ವೇಗವಾಗಿ ಅಭಿವೃದ್ಧಿಯ ಹಿಂದೆ ಓಡುತ್ತಿವೆ. ಆ ದೇಶಗಳು ಪೃಥ್ವಿಯ ಗುರುತ್ವಾಕರ್ಷಣದ ಹೊರಗೆ ಹೋಗತ್ತಿವೆಯೇನೋ ಎಂದೆನಿಸುತ್ತಿದೆ. ಈ ಎಲ್ಲದರಲ್ಲಿ ನಿಸರ್ಗ ಸ್ಮರಣೆಯಲ್ಲಿಯೂ ಎಲ್ಲಿಯೂ ಉಳಿದಿಲ್ಲ. ಈಗ ಧಾರ್ಮಿಕ ಗುರುಗಳೇ ಈ ವಿನಾಶದ ಓಟವನ್ನು ತಡೆಯಬೇಕಾಗಬಹುದು.
ನಿಯಾಝ ಖಾನರು ಈ ಸಂದರ್ಭದಲ್ಲಿ ವಿಡಿಯೋ ಸಂದೇಶವನ್ನೂ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು,

1. ಅಭಿವೃದ್ಧಿಯ ಹೆಸರಿನಡಿಯಲ್ಲಿ ಸಾವಿರಾರು ವೃಕ್ಷಗಳ ಬಲಿದಾನ ನೀಡುತ್ತಾರೆ. ಭೂದೇವಿಯ ಹೃದಯವನ್ನು ಕತ್ತರಿಸಬೇಕಾಗುತ್ತದೆ. ನಾವು ಪರಿಸರಕ್ಕೆ ಹಾನಿ ತಲುಪಿಸುತ್ತಿದ್ದೇವೆ.

2. ನೀವು ವೇದವನ್ನು ಓದಿದರೆ, ನಮ್ಮ ದೇವತೆಗಳು ಪ್ರಕೃತಿಯ ರಕ್ಷಕರಾಗಿದ್ದಾರೆ. ಅವರ ಜವಾಬ್ದಾರಿ ಪೃಥ್ವಿಯನ್ನು ರಕ್ಷಿಸುವುದಾಗಿದೆ ಎಂಬುದು ಗಮನಕ್ಕೆ ಬರುತ್ತದೆ.

3. ಬ್ರಾಹ್ಮಣರ ಎದುರಿಗೆ ಒಂದು ಹೊಸ ಆಹ್ವಾನವಿದೆ. ಎಲ್ಲ ವೇದಗಳು ಮತ್ತು ಬ್ರಾಹ್ಮಣರು ಪ್ರಕೃತಿಯ ಸಂರಕ್ಷಣೆಯಾದರೆ, ಮಾತ್ರ ಭೂಮಾತೆಯ ರಕ್ಷಣೆಯಾಗುವುದು ಎಂದು ನಂಬುತ್ತಾರೆ. ಬ್ರಾಹ್ಮಣರು ಯಾವಾಗ ಜಾಗೃತರಾಗುತ್ತಾರೆಯೋ, ಆಗ ಎಲ್ಲರೂ ಜಾಗೃತರಾಗುವರು. ಬ್ರಾಹ್ಮಣರು ಅವರ ದೃಷ್ಟಿಕೋನವನ್ನು ಬದಲಾಯಿಸಿ ನಿಸರ್ಗಾನುಕೂಲವಾಗುವಂತಹ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು. ಪ್ರತಿಯೊಬ್ಬ ಬ್ರಾಹ್ಮಣ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.