ದಮೋಹ (ಮಧ್ಯ ಪ್ರದೇಶ) ಇಲ್ಲಿಯ ಗಂಗಾ ಜಮುನಾ ಶಾಲೆಯ ಕಟ್ಟಡ ಕೆಡವಲಾಗುವುದು !

ಹಿಂದೂ ಹುಡುಗಿಯರಿಗೆ ಹಿಜಾಬ್ ಧರಿಸಲು ಅನಿವಾರ್ಯಗೊಳಿಸಿದ ಪ್ರಕರಣ

ದಮೋಹ (ಮಧ್ಯಪ್ರದೇಶ) – ಹಿಂದೂ ಹುಡುಗಿಯರಿಗೆ ಹಿಜಾಬ್ ಧರಿಸಲು ಅನಿವಾರ್ಯಗೊಳಿಸಿದ್ದರಿಂದ ಹಾಗೂ ಮತಾಂತರಕ್ಕೆ ಪ್ರಯತ್ನ ಮಾಡಿದ್ದರಿಂದ ಇಲ್ಲಿಯ ಗಂಗಾ ಜಮುನಾ ಮಾಧ್ಯಮಿಕ ಶಾಲೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ ಇವರು ಆದೇಶ ನೀಡಿದರು. ಆದಕ್ಕನುಸಾರ ಶಾಲೆಯ ಕಟ್ಟಡ ಈಗ ನೆಲಸಮ ಮಾಡಲಾಗುವುದು.

ದಮೋಹ ನಗರಪಾಲಿಕೆಯಿಂದ ಶಾಲೆಗೆ ಅನುಮತಿ ಇಲ್ಲದೆ ಶಾಲೆಯ ಕಟ್ಟಡ ಕಟ್ಟಿರುವುದರ ಬಗ್ಗೆ ಉತ್ತರಿಸುವಂತೆ ಪಾಲಿಕೆಯು ಶಾಲೆಗೆ ನೋಟಿಸ್ ನೀಡಿ ಮೂರು ದಿನದಲ್ಲಿ ಉತ್ತರ ನೀಡಲು ಆದೇಶ ನೀಡಿದೆ. (ಪಾಲಿಕೆಗೆ ಈ ಹಿಂದೆಯೇ ಗಮನಕ್ಕೆ ಬಂದಿರಲಿಲ್ಲವೇ ? – ಸಂಪಾದಕರು) ಈ ಹಿಂದೆ ಪೊಲೀಸರು ಶಾಲೆಗೆ ಸಂಬಂಧಿತ ಜನರನ್ನು ಬಂಧಿಸಿದ್ದಾರೆ. ಇದರ ಜೊತೆಗೆ ಶಾಲಾ ಸಂಚಾಲಕರ ವ್ಯವಸಾಯಗಳ ಮೇಲೆ ಕೂಡ ದಾಳಿ ನಡೆಸಲಾಗಿದೆ. ಅವರ ಪೆಟ್ರೋಲ್ ಪಂಪ್ ಸಹಿತ ಅನೇಕ ಅಂಗಡಿಗಳಿಗೆ ಬೀಗ ಜಡೆಯಲಾಗಿದೆ.