ಪೂರ್ವಾನ್ಮಾಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಹೇಳಿಕೆ !

ಮ. ಗಾಂಧಿಯವರನ್ನು ಕೊಲ್ಲುವುದರ ಹಿಂದೆ ನಥುರಾಮ ಗೋಡಸೆಯವರ ನೋವು ತಿಳಿದುಕೊಳ್ಳಿರಿ !

ಮ. ಗಾಂಧಿ ಮತ್ತು ನಥುರಾಮ ಗೋಡಸೆ

ರಾಯಪುರ (ಛತ್ತೀಸಗಡ) – ಮ. ಗಾಂಧಿಯವರನ್ನು ಹತ್ಯೆ ಮಾಡಿದ ಬಳಿಕ `ನನಗೆ ಗಲ್ಲು ಶಿಕ್ಷೆಯಾಗಬಹುದು’ ಎನ್ನುವುದು ನಥುರಾಮ ಗೋಡಸೆಯವರಿಗೆ ತಿಳಿದಿತ್ತು. ಆದರೂ ಅವರು ಗಾಂಧಿಯವರನ್ನು ಹತ್ಯೆ ಮಾಡಿದರು. ಇದರ ಹಿಂದೆ, ಗೋಡಸೆಯವರು ಯಾವ ಕಾರಣದಿಂದ ದುಃಖಿತರಾಗಿದ್ದರು, ಎನ್ನುವ ನೋವನ್ನು ತಿಳಿದುಕೊಳ್ಳಬೇಕು. ಅವರು ಬರೆದಿರುವ ಪುಸ್ತಕವನ್ನು ನೀವು ಓದಿದರೆ ನಿಮಗೆ ಅದು ಗಮನಕ್ಕೆ ಬರುವುದು, ಎಂದು ಪುರಿಯ ಪೂರ್ವಾನ್ಮಾಯ ಪೀಠದ ಶಂಕರಾಚಾರ್ಯ ಜಗದ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇತ್ತೀಚೆಗೆ ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು ಛತ್ತೀಸಗಡ ಪ್ರವಾಸದಲ್ಲಿರುವಾಗ `ನಥುರಾಮ ಗೋಡಸೆ ಭಾರತದ ಸುಪುತ್ರರಾಗಿದ್ದರು’, ಎಂದು ಹೇಳಿದ್ದರು. ಇದರಿಂದ ನಡೆದ ವಿವಾದದ ಹಿನ್ನೆಲೆಯಲ್ಲಿ ಮಾತನಾಡುವಾಗ ಶಂಕರಾಚಾರ್ಯರು ಮೇಲಿನಂತೆ ಹೇಳಿಕೆ ಹೇಳಿದರು.
ಶಂಕರಾಚಾರ್ಯರು ಮಾತನಾಡುತ್ತಾ, ಯಾರು ಯಾವ ಹೇಳಿಕೆ ನೀಡಿದರು, ಅದರ ಮೇಲೆ ಕೆಲವು ಜನರು ಸಮ್ಮತಿ ಮತ್ತು ಅಸಮ್ಮತಿ ಹೊಂದಿರುತ್ತಾರೆ. ನಾನು ಗೋಡಸೆಯವರ ವಿಷಯದಲ್ಲಿ ಹೇಳುವಾಗ, ಅವರ 70 ಪುಟಗಳ ಪುಸ್ತಕದ ಸಂದರ್ಭವನ್ನು ನೀಡುತ್ತಿದ್ದೇನೆ. ಇದೊಂದು ಮಾರ್ಮಿಕ ಪುಸ್ತಕವಾಗಿದೆ. ಗೋಡಸೆಯವರ ವಿಚಾರಗಳನ್ನು ನಾನು ಸಮ್ಮತಿಸುತ್ತೇನೆ ಅಥವಾ ಅಸಮ್ಮತಿ ಹೊಂದಿದ್ದೇನೆ ಎನ್ನುವುದನ್ನು ನೋಡಬೇಡಿರಿ. ಅವರ ಪುಸ್ತಕ ತಪ್ಪದೇ ಓದಿರಿ. ಯಾವುದೇ ಗ್ರಂಥಾಲಯದಲ್ಲಿ ಅದು ಸಿಗುವುದು. ಅದನ್ನು ಓದಿ ನಥುರಾಮ ದುಃಖಿತರಾಗಿದ್ದರು ಎಂದು ನಿಮ್ಮ ಹೃದಯ ಸ್ವೀಕರಿಸುವುದು, ಆ ಸಮಯದಲ್ಲಿ ಭಾರತವನ್ನು ಯಾವ ಮಾರ್ಗದಲ್ಲಿ ಒಯ್ಯಲು ಪ್ರಯತ್ನಿಸಲಾಗುತ್ತಿತ್ತು ಎಂದು ನೋಡಬೇಕು. ಗೋಡಸೆಯವರು ಅದರಲ್ಲಿ, ನಾನು ಗಾಂಧಿಯವರನ್ನು ಹತ್ಯೆ ಮಾಡಿದೆನು. ಕಾರಣ ಆ ವ್ಯಕ್ತಿಯ ಕೂಟನೀತಿ ಹೆಚ್ಚು ಕಾಲದವರೆಗೆ ಮುಂದುವರೆಯುತ್ತಿತ್ತು. ಇದರಿಂದ ಭಾರತದ ಅಸ್ತಿತ್ವ ಉಳಿಯುತ್ತಿರಲಿಲ್ಲ ಮತ್ತು ಆದರ್ಶವೂ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸುಸಂಸ್ಕೃತ, ಸುಶಿಕ್ಷಿತ, ಸುರಕ್ಷಿತ ಸಂಪನ್ನ ಮತ್ತು ಸೇವಾ ಇದು ಹಿಂದೂ ರಾಷ್ಟ್ರದ ಸ್ವರೂಪ !

ಹಿಂದೂ ರಾಷ್ಟ್ರ ಮತ್ತು ಸಂವಿಧಾನದ ವಿಷಯದಲ್ಲಿ ಶಂಕರಾಚಾರ್ಯರು ಮಾತನಾಡುತ್ತಾ, ಯಾರಿಗೆ ಭಾರತದ ಸಂವಿಧಾನವನ್ನು ರಚಿಸಿರುವ ಶ್ರೇಯಸ್ಸು ಕೊಡಲಾಗುತ್ತಿದೆಯೋ ಅವರೇ ಈ ಸಂವಿಧಾನದ ಸಮೀಕ್ಷೆಯನ್ನು ಮಾಡಿದ್ದರು. ಅವರು ಸಂಸತ್ತಿನಲ್ಲಿ ಈ ಸಂವಿಧಾನದಿಂದ ಸಂತುಷ್ಟರಾಗಿಲ್ಲವೆಂದು ಹೇಳಿದ್ದರು. ನಿಮಗೆ ಅವರ ಹೆಸರು ತಿಳಿದಿರಬಹುದು. ನಾವು ಪ್ರಧಾನಮಂತ್ರಿ ಮತ್ತು ಸಂವಿಧಾನವನ್ನು ನೋಡಿ ಮಾತನಾಡುತ್ತಿಲ್ಲ. ನಾವು, ನಮ್ಮೆಲ್ಲರ ಪೂರ್ವಜರು ಸನಾತನ ಕಾಲದಲ್ಲಿ ಹಿಂದೂಗಳಾಗಿದ್ದರು. ಇದಕ್ಕೆ ನೀವು ಸಹಮತರಿಲ್ಲದಿದ್ದರೆ, ಹೇಳಿರಿ. ಸುಸಂಸ್ಕೃತ, ಸುಶಿಕ್ಷಿತ, ಸುರಕ್ಷಿತ ಸಂಪನ್ನ ಮತ್ತು ಸೇವಾ ಇದು ಹಿಂದೂ ರಾಷ್ಟ್ರದ ಸ್ವರೂಪವಾಗಿದೆ. ನಾನು ಯಾವುದೇ ರಾಜಕೀಯ ಪಕ್ಷದವನಲ್ಲ. ನನ್ನನ್ನು ಎಲ್ಲಿಯೂ ಸಿಲುಕಿಸಲು ಪ್ರಯತ್ನಿಸಬೇಡಿರಿ. ಪ್ರಧಾನಮಂತ್ರಿಗಳು ನನ್ನ ಕಡೆಗೆ ಬರುತ್ತಾರೆ. ಈ ರಾಜ್ಯದ ಮುಖ್ಯಮಂತ್ರಿ ನನ್ನ ಕಡೆಗೆ ಬರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.