‘ನ್ಯೂಸ್ 18’ ಈ ವಾರ್ತಾವಾಹಿನಿಯಲ್ಲಿ ಸುಬುಹಿ ಖಾನ್ ಇವರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ ಪರಿಣಾಮ !
ನವ ದೆಹಲಿ – ಮುಂಬರುವ ಹಿಂದಿ ಚಲನಚಿತ್ರ ‘೭೨ ಹುರೆ’ ಇದರ ಬಗ್ಗೆ ‘ನ್ಯೂಸ್ ೧೮’ ಈ ಹಿಂದಿ ವಾರ್ತಾ ವಾಹಿನಿಯಲ್ಲಿ ಚರ್ಚಾಕೂಟ ಆಯೋಜಿಸಲಾಗಿತ್ತು. (೭೨ ಹುರೆ ಇದು ಇಸ್ಲಾಂನ ಪರಿಕಲ್ಪನೆ ಆಗಿದ್ದು, ಅದರ ಪ್ರಕಾರ ಇಸ್ಲಾಂನ್ನು ಚಾಚು ತಪ್ಪದೇ ಪಾಲಿಸುವವರು ಸ್ವರ್ಗಕ್ಕೆ ಹೋದ ನಂತರ ಅವರಿಗೆ ೭೨ ಸುಂದರ ಯುವತಿಯರ ಸಹವಾಸ ದೊರೆಯುತ್ತದೆ) ಇದರಲ್ಲಿ ಭಾಗವಹಿಸಿದ್ದ, ‘ಇಂಡಿಯಾ ಮುಸ್ಲಿಂ ಫೌಂಡೇಶನ್’ನ ಮುಖ್ಯಸ್ಥ ಶೋಯೆಬ್ ಜಮಾಯಿ ಇವರು ಚರ್ಚೆಯಲ್ಲಿ ಸಹಭಾಗಿಯಾಗಿದ್ದ ‘ರಾಷ್ಟ್ರೀಯ ಜಾಗರಣ ಅಭಿಯಾನ’ದ ಸಂಯೋಜಕ ಸುಬುಹಿ ಖಾನ್ ಇವರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದರು. ಆದ್ದರಿಂದ ಸುಬುಹಿ ಖಾನ್ ಇವರು ಜಮಾಯಿಗೆ ಪ್ರಶ್ನೆ ಕೇಳುತ್ತ ಥಳಿಸುವ ಪ್ರಯತ್ನ ಮಾಡಿದರು. ಈ ಸಮಯದಲ್ಲಿ ಸೂತ್ರ ಸಂಚಾಲಕ ಅಮನ ಚೋಪಡಾ ಇವರು ಇದನ್ನು ತಡೆಯುವ ಪ್ರಯತ್ನ ಮಾಡಿದರು. ಸುಬುಹಿ ಖಾನ ಇವರು ಶೋಯೆಬ್ ಜಾಮಾಯಿ ಇವರಿಗೆ ಎಚ್ಚರಿಸುತ್ತಾ, ಇಲ್ಲಿಂದ ಹೊರಟು ಹೋಗು. ನಿನ್ನನ್ನು ಮತ್ತು ನಿನ್ನ ತಂದೆಯನ್ನು ಕೂಡ ಥಳಿಸುವೆನು ಎಂದು ಹೇಳಿದರು.
(ಸೌಜನ್ಯ – ಮುರ್ತಜಾ ಸ್ಟೋರಿಸ್)
೧. ಸುಬುಹಿ ಖಾನ ಇವರು, ನೂರಾರು ವರ್ಷಗಳಿಂದ ಮುಸಲ್ಮಾನ ಹುಡುಗಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ನಮಗೆ ದುಃಖವಾಗುತ್ತಿದೆ. ಮುಸಲ್ಮಾನ ಹುಡುಗರು ಪುನರ್ಜನ್ಮದ ಮೇಲೆ ವಿಶ್ವಾಸ ಇಡುವರೋ, ಆಗ ಅವರು ಹೆದರುವುದಿಲ್ಲ. ಅವರಿಗೆ ಕರ್ಮ ಸಿದ್ದಾಂತ ತಿಳಿಯುವುದು.
೨. ಶೋಯೆಬ್ ಜಮಾಯಿ ಇವರ ವಿರುದ್ಧ ನ್ಯಾಯವಾದಿ ಶಶಾಂಕ್ ಶೇಖರ ಝಾ ಇವರು ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಶೋಯೆಬ್ ಜಮಾಯಿ ಇವರು ‘ಹುರಾ’ದ ತುಲನೆ ಹಿಂದೂ ಧರ್ಮದ ಅಪ್ಸರೆಯ ಜೊತೆ ಮಾಡಿದ್ದರು. ಇದರಿಂದ ಭಾಜಪದ ವಕ್ತಾರರು ಶಹಜಾದ ಪುನಾವಾಲ ಇವರು, ಯಾವ ಚರ್ಚಾಕೂಟದಲ್ಲಿ ಶೋಯೆಬ್ ಜಮಾಯಿ ಭಾಗವಹಿಸುವರೋ, ಆ ಚರ್ಚಾಕೂಟದಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಹೇಳಿದರು.