ವಿಶ್ವಸಂಸ್ಥೆಯಿಂದ ಹಿಂದೂ ಮಹಿಳೆಯರೊಂದಿಗೆ ಆಗುತ್ತಿರುವ ತಾರತಮ್ಯದ ಚಿತ್ರ ಬಿಡುಗಡೆ !

ಹಿಂದೂ ವಿಧೀಜ್ಞ ಪರಿಷತ್ತಿನ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು ಟ್ವೀಟ್ ಮಾಡುವ ಮೂಲಕ ವಿಷಯವನ್ನು ಬಯಲಿಗೆಳೆದರು !

ಮುಂಬಯಿ – ವಿಶ್ವಸಂಸ್ಥೆಯ ಸಂಘಟನೆಯಾಗಿರುವ ಮಹಿಳೆಯರ ಮೇಲಿನ ತಾರತಮ್ಯ ವಿರೋಧಿ ಸಮಿತಿಯು ತನ್ನ ಜಾಲತಾಣದಲ್ಲಿ ಪ್ರಾತಿನಿಧಿಕ ಚಿತ್ರವೆಂದು ೩ ಹಿಂದೂ ಮಹಿಳೆಯರ ಚಿತ್ರವನ್ನು ಬಿಡುಗಡೆ ಮಾಡಿದೆ. (ಈ ಮೂಲಕ ಹಿಂದೂ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆಯೇ) ‘ಇದೇ ಒಂದು ತಾರತಮ್ಯವಾಗಿದೆ’ ಎಂದು ಹಿಂದೂ ವಿಧೀಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು ಟ್ವೀಟ್ ಮಾಡಿದ್ದಾರೆ. (ಜಗತ್ತಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಮಹಿಳೆಯರೊಂದಿಗೆ ತಾರತಮ್ಯ ಮಾಡಲಾಗುತ್ತಿಲ್ಲವೇ? ‘ಹಿಂದೂ ಧರ್ಮ ಮಹಿಳಾ ವಿರೋಧಿಯಾಗಿದೆ’ ಎಂದು ಬಿಂಬಿಸಲು ಅಂತಾರಾಷ್ಟ್ರೀಯ ಸಂಘಟನೆಗಳು ಹೇಗೆ ಅಟ್ಟಹಾಸ ಮಾಡುತ್ತಾರೆ ಎಂಬುದು ಇದು ತೋರಿಸುತ್ತದೆ ! – ಸಂಪಾದಕರು) ‘ಇದು ನಿಲ್ಲಬೇಕು’, ಎಂದು ಹೇಳಿದ್ದಲ್ಲದೆ ಈ ಬಗ್ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದವರು ಕ್ರಮ ಕೈಗೊಳ್ಳುವಂತೆ ಟ್ವೀಟ್ ಮೂಲಕ ಹೇಳಿದ್ದಾರೆ.

ಸಂಪಾದಕರ ನಿಲುವು

ಒಂದು ಕಡೆ, ವಿಶ್ವಸಂಸ್ಥೆಯು ‘ಶಾಂತಿ, ಪರಸ್ಪರ ಗೌರವ ಮತ್ತು ಸಮಾನತೆ’ ಈ ತತ್ವಗಳ ಮೇಲೆ ಕಾರ್ಯನಿರ್ವಹಿಸುವುದಾಗಿ ಹೇಳುತ್ತದೆ, ಮತ್ತೊಂದೆಡೆ ಹಿಂದೂಗಳನ್ನು ಅವಮಾನಿಸುತ್ತದೆ. ಇದರಿಂದ ವಿಶ್ವಸಂಸ್ಥೆಯ ಹಿಂದೂದ್ವೇಷ ಗಮನಕ್ಕೆ ಬರುತ್ತದೆ. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರು ಈ ಬಗ್ಗೆ ವಿಶ್ವಸಂಸ್ಥೆಗೆ ಪ್ರಶ್ನೀಸಬೇಕು !