‘ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿ ಅಖಂಡ ಭಾರತವಾದರೆ, ಮುಸಲ್ಮಾನ ಪ್ರಧಾನಮಂತ್ರಿಯಾಗುವರಂತೆ !’ – `ಇಂಡಿಯಾ ಮುಸ್ಲಿಂ ಫೌಂಡೇಶನ’ ಮುಖಂಡ ಶೋಯಬ್ ಜಮಾಯಿ

  • `ಇಂಡಿಯಾ ಮುಸ್ಲಿಂ ಫೌಂಡೇಶನ’ ಮುಖಂಡ ಶೋಯಬ್ ಜಮಾಯಿ ಇವರ ದಾವೆ !

  • ‘ಬಾಬಾ’ಗಳಿಗೆ ಲಂಗೋಟಿ ಹಿಡಿದುಕೊಂಡು ಓಡಿ ಹೋಗಬೇಕಾಗಲಿದೆ ಎಂದು ಹೇಳಿಕೆ !

 

`ಇಂಡಿಯಾ ಮುಸ್ಲಿಂ ಫೌಂಡೇಶನ’ ಮುಖಂಡ ಶೋಯಬ್ ಜಮಾಯಿ

ನವದೆಹಲಿ – ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, ಅಲ್ಲಾನು ಕೃಪೆ ಮಾಡಬೇಕು ಮತ್ತು ಆ ದಿನ ಬರಬೇಕು ಮತ್ತು `ಅಖಂಡ ಭಾರತ’ ಅಸ್ತಿತ್ವದಲ್ಲಿ ಬರಬೇಕು. ಪಾಕಿಸ್ತಾನದಲ್ಲಿ ವಾಸಿಸುತ್ತಿರುವ 25 ಕೋಟಿ ಮುಸಲ್ಮಾನರು, ಬಾಂಗ್ಲಾದೇಶದ 25 ಕೋಟಿ ಮುಸಲ್ಮಾನರು ಮತ್ತು ಭಾರತದಲ್ಲಿರುವ 25 ಕೋಟಿ ಈ ಎಲ್ಲ ಮುಸಲ್ಮಾನರು ಒಂದಾದರೆ, 75 ಕೋಟಿಗಳಾಗುತ್ತಾರೆ. ಆ ದಿನ ಈ ದೇಶದಲ್ಲಿ ನಮ್ಮ ಮುಸಲ್ಮಾನ ಪ್ರಧಾನಮಂತ್ರಿ ಇರುವನು, ಮತ್ತು ಸಂಸತ್ತಿನಲ್ಲಿ 250 ಶಾಸಕರು ಇರುವರು, ಎಂದು ‘ಇಂಡಿಯಾ ಮುಸ್ಲಿಮ್ ಫೌಂಡೇಶನ’ ಮುಖಂಡ ಶೋಯಬ ಜಮಾಯಿ ಇವರು ಒಂದು ವಾರ್ತಾವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಹೇಳಿದರು. ಇದರಲ್ಲಿ ಜಮಾಯಿಯವರು ಮಾತನಾಡುತ್ತಾ, ನೋಡುತ್ತಿರಿ, 2024ರಲ್ಲಿ `ಬಾಬಾ’ ಗಳಿಗೆ ಲಂಗೋಟಿ ಹಿಡಿದುಕೊಂಡು ಓಡಿಹೋಗಬೇಕಾಗಲಿದೆ. ಇಲ್ಲವಾದಲ್ಲಿ ನಾನು ನನ್ನ ಹೆಸರನ್ನು ಬದಲಾಯಿಸುತ್ತೇನೆ. ಇದು ನಿಮ್ಮಪ್ಪನ ದೇಶವಲ್ಲ.’ ಎಂದು ಹೇಳಿದರು.

ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಈ ವಿಡಿಯೋ ಯಾವ ವಾರ್ತಾ ವಾಹನಿಯ ಮೇಲೆ ನಡೆದಿದ್ದಾಗಿದೆಯೆಂದು ಸ್ಪಷ್ಟವಾಗಿಲ್ಲ ಮತ್ತು ‘ಅವರು ಯಾವ ಬಾಬಾನನ್ನು ಉದ್ದೇಶಿಸಿ ಮಾತನಾಡಿದರು’ ಎನ್ನುವುದೂ ಸ್ಪಷ್ಟವಾಗಿಲ್ಲ. ಕೆಲವು ಜನರು ಈ ಹೇಳಿಕೆಯ ಬಗ್ಗೆ ಉತ್ತರಪ್ರದೇಶ ಮತ್ತು ದೆಹಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ಜಮಾಯಿ ಇವರ ಮೇಲೆ ದೇಶದ್ರೋಹದ ದೂರು ದಾಖಲಿಸುವಂತೆ ಕೋರುತ್ತಿದ್ದಾರೆ.

ಅಖಂಡ ಭಾರತ ಭವಿಷ್ಯದಲ್ಲಿ ಆಗುವ ಚಿತ್ರಣವಲ್ಲ,ಇದು ವಸ್ತುಸ್ಥಿತಿ ! – ಜಮಾಯಿಯವರ ಸ್ಪಷ್ಟೀಕರಣ

ಶೋಯಬ ಜಮಾಯಿ ಇವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ವಿಡಿಯೋದಿಂದ ವಿವಾದ ನಿರ್ಮಾಣವಾಗಿರುವುದರಿಂದ ಅವರು ಟ್ವೀಟ್ ಮಾಡಿ ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ್ದಾರೆ.

ಜಮಾಯಿಯವರು, ರಾ.ಸ್ವ. ಸಂಘದಿಂದ ಅಖಂಡ ಭಾರತದ ವಿಷಯದಲ್ಲಿ ಮಾತನಾಡುತ್ತಿದ್ದಾರೆ, ಇಂತಹ ಸ್ಥಿತಿಯಲ್ಲಿ ‘ಏನಾಗಬಹುದು ಮತ್ತು ಏನಾಗುವುದಿಲ್ಲ’ ಎಂದು ನಾನು ಹೇಳಲು ಪ್ರಯತ್ನಿಸಿದ್ದೇನೆ. ಜನಸಂಖ್ಯೆಯಲ್ಲಿ ಹೆಚ್ಚಳವಾಗಬಹುದು. ಭೂ- ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬಹುದು. ಎಲ್ಲರು (ಮುಸಲ್ಮಾನರ) ಮತಾಂತರಗೊಳ್ಳಬಹುದು. ಯಾರು ಏತಕ್ಕಾಗಿ ಮತಾಂತರಗೊಳ್ಳುತ್ತಾರೆ? ಹೆದರಿಸಿ ಅಥವಾ ಬಲವಂತವಾಗಿ ಮತಾಂತರಗೊಳಿಸುತ್ತಾರೆ? ಆಗ ನಾನು ಇಂತಹ ಸ್ಥಿತಿಯಲ್ಲಿ ದೇಶದಲ್ಲಿ ಮುಸಲ್ಮಾನ ಪ್ರಧಾನಮಂತ್ರಿಯಾಗಬಹುದು. ಎಂದು ಹೇಳಿದೆನು. ಇದಕ್ಕಾಗಿ ನನಗೆ ಬಯ್ಗುಳಗಳನ್ನು ಹಾಕಿದರು. ಬೆದರಿಕೆ ಹಾಕಿದರು. ಆದ್ದರಿಂದ ನಾವು ಹೇಳುವುದೇನೆಂದರೆ, ಇಂತಹ ಕನಸನ್ನು ಕಾಣಬೇಡಿರಿ. ಎಲ್ಲಿಯವರೆಗೆ ಭ್ರಮೆಯಲ್ಲಿ ಇರುತ್ತೀರಿ? ವಸ್ತು ಸ್ಥಿತಿ ಏನಿದೆಯೆಂದರೆ, ಅಖಂಡ ಭಾರತ ಭವಿಷ್ಯದಲ್ಲಿ ಆಗುವ ಚಿತ್ರಣವಿಲ್ಲ. ಆದುದರಿಂದ ಈಗ ಯಾವ ದೇಶದಲ್ಲಿ ವಾಸಿಸುತ್ತಿದ್ದೇವೆಯೋ, ಅದನ್ನೇ ಅಭಿವೃದ್ಧಿ ಮಾಡೋಣ ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಅಖಂಡ ಭಾರತ’ ವನ್ನು ಮುಸಲ್ಮಾನರು ಯಾವ ದೃಷ್ಟಿಯಿಂದ ನೋಡುತ್ತಾರೆ. ಎನ್ನುವುದು ಹಿಂದೂಗಳು ಗಮನಿಸಬೇಕಾದ ವಿಷಯವಾಗಿದೆ. ಇದರ ವಿಚಾರ ಮಾಡಿಯೇ ಭಾರತವನ್ನು ಮೊದಲು ಹಿಂದೂ ರಾಷ್ಟ್ರವನ್ನಾಗಿ ಮಾಡಿ, ದೇಶದಲ್ಲಿ ಹಿಂದೂಗಳ ಸ್ಥಿತಿಯನ್ನು ಗಟ್ಟಿಗೊಳಿಸುವ ಆವಶ್ಯಕತೆಯಿದೆಯೆನ್ನುವುದು ಗಮನಕ್ಕೆ ಬರುತ್ತದೆ !