ರಾಜ್ಯ ಸರಕಾರದಿಂದ ಸರಕಾರಿ ಶಾಲೆಯ ಪಠ್ಯ ಪುಸ್ತಕದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಹೇಡಗೆವಾರ ಇವರ ಪಠ್ಯ ಕೈಬಿಡಲಿದೆ !

ಶಿಕ್ಷಣ ಸಚಿವರು ಹೇಡಗೆವಾರರನ್ನು ಹೇಡಿ ಎಂದು ಹೇಳಿದರು !

ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ ಬಳಿರಾಮ ಹೆಡಗೆವಾರ ಇವರ ಬಗ್ಗೆ ಶಾಲೆಯ ಪಠ್ಯಪುಸ್ತಕದಲ್ಲಿನ ಪಾಠ ಕೈಬಿಡುವ ಪ್ರಕ್ರಿಯೆ ನಡೆಯುತ್ತಿದೆ. ಭಾಜಪ ಸರಕಾರದ ಸಮಯದಲ್ಲಿ ಈ ಪಾಠ ಅಭ್ಯಾಸ ಕ್ರಮದಲ್ಲಿ ಸಮಾವೇಶಗೊಳಿಸಲಾಗಿತ್ತು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅದನ್ನು ಕೈ ಬಿಡುವುದರ ಬಗ್ಗೆ ಘೋಷಣಾಪತ್ರದಲ್ಲಿ ಆಶ್ವಾಸನೆ ನೀಡಿತ್ತು.

೧. ರಾಜ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರು, ಶಾಲೆಯ ಪುಸ್ತಕದ ಅಭ್ಯಾಸ ಕ್ರಮದಲ್ಲಿ ಈ ವರ್ಷದಿಂದ ಬದಲಾವಣೆ ಮಾಡಲಾಗುವುದು. ರಾಜ್ಯ ಸರಕಾರ ಬದಲಾವಣೆ ಮಾಡುವ ಮುನ್ನ ಶೈಕ್ಷಣಿಕ ವರ್ಷದ ಪ್ರಾರಂಭವಾಗಿತ್ತು. ಆದ್ದರಿಂದ ಹಳೆಯ ಪುಸ್ತಕಗಳನ್ನು ಪಡೆಯಲಾಗುವುದಿಲ್ಲ, ಆದರೆ ಪೂರಕ ಶಾಲೆಗಳಲ್ಲಿ ಏನು ಕಲಿಸಬೇಕು ಅಥವಾ ಕಲಿಸಬಾರದು ಇದರ ಸೂಚನೆ ನೀಡಲಾಗುವುದು. ಪುಸ್ತಕದಲ್ಲಿ ಯಾವ ಬದಲಾವಣೆ ಮಾಡಬೇಕಾಗುವುದು, ಇದರ ಬಗ್ಗೆ ತಾಂತ್ರಿಕ ಸಮಿತಿಯಿಂದ ಇಲ್ಲಿಯವರೆಗೆ ಯಾವುದೇ ಶಿಫಾರಸು ದೊರೆತಿಲ್ಲ. ಸಮಿತಿಯಿಂದ ಬಂದಿರುವ ಶಿಫಾರಸಿನ ಪ್ರಕಾರ ಮಂತ್ರಿ ಮಂಡಲದಲ್ಲಿ ಚರ್ಚೆ ನಡೆಯುವುದು. ಈ ಪ್ರಕ್ರಿಯೆಗೆ ೧೦ ರಿಂದ ೧೫ ದಿನ ಬೇಕಾಗುವುದು. ಅದನ್ನು ಬೇಗನೆ ಪೂರ್ಣಗೊಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ಹೇಳಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ

೨. ಇನ್ನೊಂದೆಡೆ ಕಾಂಗ್ರೆಸ್ಸಿನ ಶಾಸಕ ಬೀ.ಕೆ. ಹರಿಪ್ರಸಾದ ಇವರು ಹೇಡಗೆವಾರ ಇವರನ್ನು ‘ಹೇಡಿ’ ಎಂದು ಮತ್ತು ನಕಲಿ ಸ್ವಾತಂತ್ರ ಸೈನಿಕ’ನೆಂದು ಹೇಳಿದ್ದಾರೆ. ಅವರು, ”ಇಂತಹವರ ಬಗ್ಗೆ ಮಕ್ಕಳಿಗೆ ಕಲಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಹೇಡಗೆವಾರ ಇವರ ಜೀವನಕ್ಕೆ ಸಂಬಂಧ ಪಟ್ಟ ಪಠ್ಯ ಪುಸ್ತಕದಲ್ಲಿ ಅಳವಡಿಸಲು ಬಿಡುವುದಿಲ್ಲ.” ಎಂದು ಹೇಳಿದರು.

೩. ಈ ಬಗ್ಗೆ ಭಾಜಪದಿಂದ ಸರಕಾರದ ಬಗ್ಗೆ ಇತಿಹಾಸದ ವಿಕೃತಿ ಕರಣಗೊಳಿಸಿರುವ ಆರೋಪ ಮಾಡಲಾಗಿದೆ. ಹೇಡಗೆವಾರ ಇವರನ್ನು ಹೇಡಿ ಎಂದಿರುವುದಕ್ಕಾಗಿ ಕಾಂಗ್ರೆಸ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.

‘ಸರಕಾರದ ಈ ನಿರ್ಣಯ ಯುವಕರ ಮೇಲೆ ಅನ್ಯಾಯ ಮಾಡುವುದಾಗಿದೆ’, ಎಂದು ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು ಹೇಳಿದರು.