ಜಿಲ್ಲಾಡಳಿತ ತನಿಖೆ ನಡೆಸಲು ಸಹಾಯ ಮಾಡುತ್ತಿಲ್ಲ ! – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರೋಪ
ಡೂಂಗರಪುರ (ರಾಜಸ್ಥಾನ) – ಇಲ್ಲಿಯ ಒಂದು ಸರಕಾರಿ ಶಾಲೆಯಲ್ಲಿ ಕನಿಷ್ಟ 6 ವಿದ್ಯಾರ್ಥಿನಿಯರ ಮೇಲೆ ಬಲಾತ್ಕಾರ ನಡೆಸಿರುವ ಆರೋಪದಡಿಯಲ್ಲಿ ಶಾಲೆಯ ಮುಖ್ಯೋಧ್ಯಾಪಕನನ್ನು ಬಂಧಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಿಗೆ ಸ್ಥಳೀಯ ಜಿಲ್ಲಾಡಳಿತ ಸಹಕರಿಸುತ್ತಿಲ್ಲವೆಂದು ಆಯೋಗದ ಅಧ್ಯಕ್ಷ ಪ್ರಿಯಾಂಕ ಕಾನೂನಗೊ ಇವರು ಆರೋಪಿಸಿದ್ದಾರೆ. ಮೇ 31 ರಂದು ಗ್ರಾಮಸ್ಥರು ಮುಖ್ಯೋಪಾಧ್ಯಪಕನ ವಿರುದ್ಧ ದೂರು ದಾಖಲಿಸಿದ ಬಳಿಕ ಈ ಪ್ರಕರಣ ಬಹಿರಂಗವಾಗಿದೆ. ಜೂನ 3ರಂದು ಮುಖ್ಯೋಪಾಧ್ಯಪಕನನ್ನು ಬಂಧಿಸಲಾಯಿತು.
राजस्थान के सरकारी स्कूल में रेप, पोर्न देख छात्राओं का शोषण करता था हेडमास्टर: NCPCR ने बताया- जाँच में मदद नहीं कर रहा डूंगरपुर प्रशासन#Rajasthan #NCPCRhttps://t.co/ro61bDX7A3
— ऑपइंडिया (@OpIndia_in) June 9, 2023
1. ಆರೋಪಿ ಮುಖ್ಯೋಪಾಧ್ಯಕನ ಹೆಸರು ರಮೇಶಚಂದ್ರ ಕಟಾರಾ ಆಗಿದ್ದು, ಆತ 8 ರಿಂದ 12 ವರ್ಷಗಳ ವಯಸ್ಸಿನ ವಿದ್ಯಾರ್ಥಿನಿಯರಿಗೆ ರಜೆಯ ಸಮಯದಲ್ಲಿ ಕರೆಯಿಸಿಕೊಂಡು ಅವರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸುತ್ತಿದ್ದನು. ತದನಂತರ ಅವರ ಮೇಲೆ ಬಲಾತ್ಕಾರ ಮಾಡುತ್ತಿದ್ದನೆಂದು ಸ್ಥಳೀಯ ಪ್ರಸಾರ ಮಾಧ್ಯಮಗಳು ಮಾಹಿತಿ ನೀಡಿದೆ.
2. ಸಂತ್ರಸ್ತರು ಈ ಮಾಹಿತಿಯನ್ನು ತಮ್ಮ ಪೋಷಕರಲ್ಲಿ ಹೇಳಬಾರದೆಂದು ಅವನು ಅವರಿಗೆ ‘ನಿಮ್ಮನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಾಗಿ ಅಥವಾ ಹತ್ತಿರದ ಕೊಳದಲ್ಲಿ ನಿಮ್ಮನ್ನು ದೂಡಿ ಕೊಲ್ಲುವುದಾಗಿ’ ಎಂದು ಬೆದರಿಕೆ ಹಾಕುತ್ತಿದ್ದನು.
3. ಓರ್ವ ಸಂತ್ರಸ್ತೆಗೆ ಹೊಟ್ಟೆ ನೋವಾಗಲು ಆರಂಭವಾದಾಗ ಅವಳ ತಾಯಿ ಈ ವಿಷಯದ ಕುರಿತು ಅವಳನ್ನು ನಿರಂತರವಾಗಿ ವಿಚಾರಿಸಿದಾಗ ಈ ಎಲ್ಲ ಪ್ರಕರಣ ಬಹಿರಂಗವಾಯಿತು.
4. ಇನ್ನೋರ್ವ ಸಂತ್ರಸ್ತೆಯ ತಾಯಿಯು, ಮುಖ್ಯೋಪಾಧ್ಯಕನು 6 ಅಲ್ಲ ಸುಮಾರು 10 ವಿದ್ಯಾರ್ಥಿನಿಯರ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸರು ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ.
ಸಂಪಾದಕೀಯ ನಿಲುವು
|