ಬಂಗಾಳದಲ್ಲಿ ಬೃಹತ್ ಪ್ರಮಾಣದಲ್ಲಿ ಹಿಂದೂಗಳ ಮತಾಂತರ ! – ರಾಷ್ಟ್ರೀಯ ಇತರೆ ಹಿಂದುಳಿದ ವರ್ಗಗಳ ಆಯೋಗ

  • ರಾಜ್ಯದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹಿಂದೂಗಳಿಗಿಂತ ಮುಸಲ್ಮಾನ ಜಾತಿಗಳ ಸಂಖ್ಯೆ ಹೆಚ್ಚು

  • ಇತರೆ ಹಿಂದುಳಿದ ವರ್ಗದವರ ಲಾಭವನ್ನು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರು ಪಡೆದುಕೊಳ್ಳುತ್ತಿದ್ದಾರೆ

ರಾಷ್ಟ್ರೀಯ ಇತರೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಹಂಸರಾಜ ಅಹೀರ

ನವದೆಹಲಿ – ಬಂಗಾಳದಲ್ಲಿ ಇತರೆ ಹಿಂದುಳಿದ ವರ್ಗದ(ಒಬಿಸಿ) ಅನೇಕ ಜಾತಿಯಲ್ಲಿರುವ ಹಿಂದೂಗಳನ್ನು ಮತಾಂತರಗೊಳಿಸಿ ಅವರನ್ನು ಮುಸಲ್ಮಾನರನ್ನಾಗಿ ಮಾಡಲಾಗಿದೆ. ಹಾಗೆಯೇ ಈ ಜಾತಿಯವರಿಗೆ ದೊರಕುವ ಸರಕಾರಿ ಸೌಲಭ್ಯಗಳ ಲಾಭವನ್ನು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರ ಮುಸಲ್ಮಾನರು ಪಡೆದುಕೊಳ್ಳುತ್ತಿದ್ದಾರೆ, ಎಂದು ರಾಷ್ಟ್ರೀಯ ಇತರೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಹಂಸರಾಜ ಅಹೀರ ಇವರು ಮಾಹಿತಿ ನೀಡಿದ್ದಾರೆ.

1. ಹಂಸರಾಜ ಅಹೀರ ಇವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಆಯೋಗದ ಸದಸ್ಯರು ಈ ವರ್ಷ ಫೆಬ್ರುವರಿ 25 ರಂದು ಬಂಗಾಳದ ಪ್ರವಾಸ ಮಾಡಿದ್ದರು. ಅಲ್ಲಿ ನಡೆಸಿದ ವಿಚಾರಣೆಯಲ್ಲಿ ಬಂಗಾಳದ ಸಾಂಸ್ಕೃತಿಕ ಸಂಸ್ಥೆ `ಕಲ್ಚರಲ್ ರಿಸರ್ಚ ಇನ್ಸಟಿಟ್ಯೂಟ’ ವರದಿಯಲ್ಲಿ, ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಇಸ್ಲಾಂಅನ್ನು ಸ್ವೀಕರಿಸಿರುವ ಮಾಹಿತಿ ದೊರಕಿದೆ’ ಎಂದು ಹೇಳಲಾಗಿದೆ. ಬಂಗಾಳದಲ್ಲಿ ಬಾಂಗ್ಲಾದೇಶದಿಂದ ಬಂದಿರುವ ಮುಸಲ್ಮಾನರಿಗೆ ಇತರೆ ಹಿಂದುಳಿದ ವರ್ಗದವರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಒಟ್ಟಾರೆ ಇತರೆ ಹಿಂದುಳಿದ ವರ್ಗದವರು ಅಲ್ಲವೋ ಅವರನ್ನೂ ಸಹ ಸೇರಿಸಲಾಗಿದೆ. ಆಯೋಗಕ್ಕೆ ಅನೇಕ ದೂರುಗಳು ಸಿಕ್ಕಿವೆ ಹಾಗೂ ವಿಚಾರಣೆಯಲ್ಲಿ, ಈ ಪಟ್ಟಿಯಲ್ಲಿರುವವರು ಬಾಂಗ್ಲಾದೇಶದಿಂದ ಬಂದಿದ್ದಾರೆ. ಹಾಗೆಯೇ ಮ್ಯಾನಮಾರದಿಂದ ಬಂದಿರುವ ರೋಹಿಂಗ್ಯಾ ಮುಸಲ್ಮಾನರನ್ನೂ ಇದರಲ್ಲಿ ಸೇರಿಸಲಾಗಿದೆ ಎಂಬುದು ಗಮನಕ್ಕೆ ಬಂದಿದೆ.

2. ಅಹೀರ ತಮ್ಮ ಮಾತನ್ನು ಮುಂದುವರೆಸುತ್ತಾ, ಇತರೆ ಹಿಂದುಳಿದ ವರ್ಗದವರ ಪಟ್ಟಿಯಲ್ಲಿ ಹಿಂದೂಗಳಿಗಿಂತ ಮುಸಲ್ಮಾನ ಜಾತಿಯ ಹೆಸರು ಹೆಚ್ಚಿದೆ. ಬಂಗಾಳ ಹಿಂದೂ ಬಹುಸಂಖ್ಯಾತವಿರುವಾಗ ಈ ಸ್ಥಿತಿಯಿದೆ. ರಾಜ್ಯದ ಈ ಪಟ್ಟಿಯಲ್ಲಿ 179 ಜಾತಿಗಳ ಹೆಸರುಗಳಿದ್ದೂ ಅದರಲ್ಲಿ 118 ಮುಸಲ್ಮಾನರು, 61 ಹಿಂದೂ ಜಾತಿಯವರಿದ್ದಾರೆ. ಬಂಗಾಳದ ಸರಕಾರವು ಈ ಪಟ್ಟಿಯಲ್ಲಿ ಸ್ಪಷ್ಟವಾಗಿ ಬದಲಾವಣೆಗಳನ್ನು ಮಾಡಿದೆ. ಹಾಗೆಯೇ `ಅ’ ಶ್ರೇಣಿಯಲ್ಲಿಯೂ ಶೇ 90 ರಷ್ಟು ಮುಸಲ್ಮಾನರಿದ್ದಾರೆ. ಅದೇ ರೀತಿ ‘ಬ’ ಶ್ರೇಣಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮುಸಲ್ಮಾನರಾಗಿದ್ದಾರೆ. ಈ ವಿಷಯದಲ್ಲಿ ವಿಚಾರಣೆ ಮಾಡಿದಾಗ ಸರಕಾರವು, ಇವರಲ್ಲಿ ಅನೇಕ ಜನರು ಮೊದಲು ಹಿಂದೂ ಆಗಿದ್ದರು ಎಂದು ಹೇಳಿದೆ.

3. ಅಹೀರ ಇವರು, ಬಂಗಾಳ ಸರಕಾರವು ‘ಕುರೇಶಿ’ ಈ ಮುಸಲ್ಮಾನ ಜಾತಿಯನ್ನು ಇತರೆ ಹಿಂದುಳಿದ ವರ್ಗದವರ ಕೇಂದ್ರೀಯ ಪಟ್ಟಿಯಲ್ಲಿ ಸಮಾವೇಶಗೊಳಿಸಲು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ; ಆದರೆ ಬಂಗಾಳ ಸರಕಾರವು ಸ್ವತಃ ಈ ಜಾತಿಯನ್ನು ಪ್ರತ್ಯೇಕವೆಂದು ಪರಿಗಣಿಸುವುದಿಲ್ಲ. ವಿಶೇಷವೆಂದರೆ ರಾಜ್ಯದ ಇತರೆ ಹಿಂದುಳಿದ ವರ್ಗದ ಜಾತಿಯ ಪಟ್ಟಿಯಲ್ಲಿ ಕುರೇಶಿ ಮುಸಲ್ಮಾನರನ್ನು ಸೇರಿಸಿಲ್ಲ.

ಬಂಗಾಳದಲ್ಲಿ ಹಿಂದೂ ಬಹುಸಂಖ್ಯಾತರಾಗಿರುವ ಪಟ್ಟಿಯಲ್ಲಿ ಮುಸಲ್ಮಾನರ ಜಾತಿ ಹೆಚ್ಚು ಹೇಗೆ ? ‘ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮೀಯರಲ್ಲಿ ಜಾತಿ ಇಲ್ಲ’ ಎಂದು ಹೇಳುವವರು ಈಗ ಎಲ್ಲಿದ್ದಾರೆ ?

ಭವಿಷ್ಯದಲ್ಲಿ ಬಂಗಾಳ ಮುಸಲ್ಮಾನ ಬಾಹುಸಂಖ್ಯಾತವಾದರೆ ಆಶ್ಚರ್ಯ ಪಡಬಾರದು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! ಬಂಗಾಳದ ಹಿಂದೂಗಳ ರಕ್ಷಣೆಗಾಗಿ ಮೊದಲು ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವನ್ನು ವಿಸರ್ಜಿಸುವುದು ಆವಶ್ಯಕವಿದೆ !