ರಾಜ್ಯದಲ್ಲಿ ಗೋಹತ್ಯೆ ಮತ್ತು ಹಿಜಾಬ್ ವಿರೋಧಿ ಕಾನೂನು ಹಿಂಪಡೆಯಲಾಗುವುದು !

ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿನ ಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು (ಕರ್ನಾಟಕ) – ಹಿಂದಿನ ರಾಜ್ಯ ಸರಕಾರ ರೂಪಿಸಿರುವ ಗೋಹತ್ಯೆ ವಿರೋಧಿ ಕಾನೂನು ರಾಜ್ಯಕ್ಕೆ ಆರ್ಥಿಕ ಹಾನಿ ಮಾಡುತ್ತಿದೆ. ಕೇವಲ ಗೋಹತ್ಯೆ ವಿರೋಧ ಅಷ್ಟೇ ಅಲ್ಲದೆ, ಹಿಜಾಬ್ ವಿರೋಧಿ ಕಾನೂನು ಕೂಡ ಹಿಂಪಡೆಯಲಾಗಬಹುದು, ಎಂದು ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿನ ಸಚಿವ ಪ್ರಿಯಾಂಕ ಖರ್ಗೆ ಇವರು ಹೇಳಿಕೆ ನೀಡಿದರು. ಹಿಜಾಬ್ ನಿಷೇಧದಿಂದ ಸಾಮಾಜಿಕ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಖರ್ಗೆ ಮಾತು ಮುಂದುವರೆಸುತ್ತಾ, ಕಾಂಗ್ರೆಸ್ ರಾಜಕಾರಣ ಅಲ್ಲ, ಅರ್ಥ ವ್ಯವಸ್ಥೆಯ ಮೇಲೆ ಲಕ್ಷ ಕೇಂದ್ರೀಕರಿಸುತ್ತದೆ. ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ನೀಗಿಸುವುದಕ್ಕಾಗಿ ಮುಂದಿನ ೨ ವರ್ಷದಲ್ಲಿ ಈ ಎರಡು ಕಾನೂನು ಹಿಂಪಡೆಯಬಹುದು.