ಭಾರತದ ವಿಭಜನೆಯನ್ನು ತಡೆಯಬೇಕಾದರೆ `ಹಿಂದೂ ರಾಷ್ಟ್ರ’ದ ಹೊರತು ಪರ್ಯಾಯವಿಲ್ಲ! – ಪ್ರಶಾಂತ ಜುವೇಕರ, ಹಿಂದೂ ಜನಜಾಗೃತಿ ಸಮಿತಿ, ಜಳಗಾವ

ಗೋವಾದಲ್ಲಿ ಜೂನ್ 16 ರಿಂದ 22ರ ವರೆಗಿನ ಸಮಯದಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆಯೋಜನೆ !

ಎಡದಿಂದ ಶ್ರೀ ಮನುದೇವಿ ಸಂಸ್ಥಾನದ ವಿಶ್ವಸ್ಥ ಶ್ರೀ ನೀಲಖಂಟ ಚೌದರಿ, ಸಮಿತಿಯ ಜಿಲ್ಲಾ ಸಮನ್ವಯಕರಾದ ಶ್ರೀ ಪ್ರಶಾಂತ ಜುವೇಕರ್, ಸದ್ಗುರು ನಂದಕುಮಾರ ಜಾದವ್ ಮತ್ತು ನ್ಯಾವವಾದಿ ಶ್ರೀ ಯೋಗೇಶ ಪಾಟೀಲ್

ಜಳಗಾವ – ಗೋವಾದಲ್ಲಿ ಕಳೆದ 11 ವರ್ಷಗಳಿಂದ ನಡೆಯುತ್ತಿರುವ `ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದಾಗಿ ಹಿಂದೂ ರಾಷ್ಟ್ರದ ಬಗೆಗಿನ ಚರ್ಚೆಯು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿ ನಡೆಯಲು ಆರಂಭವಾಗಿದೆ. ಈಗ ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡುವ ಅನೇಕ ವ್ಯಾಸಪೀಠಗಳ ನಿರ್ಮಾಣವಾಗಿದೆ; ಆದರೆ ಇನ್ನೊಂದು ಕಡೆಯಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ `ಇಸ್ಲಾಮಿಕ್ ಸ್ಟೇಟ್’ನ ಸಮರ್ಥಕರ ಬಂಧನ ನಡೆಯುತ್ತಿದೆ. ಖಲೀಸ್ತಾನವಾದಿಗಳು ಸರಕಾರಕ್ಕೆ ಕರೆ ನೀಡುತ್ತಿದ್ದಾರೆ, ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿದ್ದಾರೆ; ಮಣಿಪುರ, ನಾಗಾಲ್ಯಾಂಡಗಳಂತಹ ರಾಜ್ಯಗಳಲ್ಲಿನ ಹಿಂದೂಗಳ ಮನೆಗಳು ಭಸ್ಮವಾಗುತ್ತಿವೆ. ಕಾಶ್ಮೀರದಿಂದ ಕಲಂ 370 ತೆಗೆಯಲಾಗಿದ್ದರೂ ಅಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ. ದೇಶದಾದ್ಯಂತ ಅಸಂಖ್ಯ ಹಿಂದೂ ಯುವತಿಯರ `ಲವ್ ಜಿಹಾದಿ’ಗಳಿಂದ ನಡೆಯುತ್ತಿರುವ ಅತ್ಯಂತ ಕ್ರೂರ ಹತ್ಯೆಗಳನ್ನು ನೋಡುವಾಗ ದೇಶದಲ್ಲಿನ ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದೆ. `ದಿ ಕೇರಳ ಸ್ಟೋರಿ’ ಎಂಬ ಚಲನಚಿತ್ರವು ಮಂಡಿಸಿರುವ ನೈಜತೆಯು ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೇ ದೇಶದಾದ್ಯಂತ ಈ ಜಿಹಾದಿ ಷಡ್ಯಂತ್ರದ ವ್ಯಾಪ್ತಿಯು ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಒಂದು ಕಡೆಯಲ್ಲಿ ಹಿಂದೂಗಳು ಭಾಷಣ ಮಾಡಿದರೆ, ತಕ್ಷಣ ಅವರ ಮೇಲೆ `ಹೇಟ್ ಸ್ಪೀಚ್’ನ (ದ್ವೇಷಯುಕ್ತ ಭಾಷಣ) ಅಪರಾಧವನ್ನು ದಾಖಲಿಸಲಾಗುತ್ತದೆ. ಆದರೆ `ಸರ ತನ ಸೆ ಜುದಾ’ (ಶಿರಚ್ಛೇದನ) ಮಾಡುವುದಾಗಿ ಬಹಿರಂಗವಾಗಿ ಘೋಷಣೆ ಕೂಗುವ ಮತಾಂಧರ ಮೇಲೆ ಯಾವುದೇ ಕಾರ್ಯಾಚರಣೆಯಾಗುತ್ತಿರುವುದು ಕಂಡುಬರುವುದಿಲ್ಲ. ಇನ್ನೊಂದು ಕಡೆಯಲ್ಲಿ ರಾಷ್ಟ್ರೀಯ ತನಿಖಾ ದಳದ ತನಿಖೆಯಲ್ಲಿ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಹಾಗೂ `ಐ. ಎಸ್. ಐ. ಎಸ್.’ಗಳು ಭಾರತವನ್ನು 2047 ರ ವರೆಗೆ ಇಸ್ಲಾಮಿ ರಾಷ್ಟ್ರವಾಗಿಸುವ ಷಡ್ಯಂತ್ರವನ್ನು ರಚಿಸುತ್ತಿರುವುದು ಬಹಿರಂಗವಾಗಿದೆ. ಆದುದರಿಂದ ಪುನಃ ಭಾರತದ ವಿಭಜನೆಯನ್ನು ತಡೆಯಲು ಭಾರತವನ್ನು ಆದರ್ಶ ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರವನ್ನಾಗಿಸದೇ ಪರ್ಯಾಯವಿಲ್ಲ. ಆದುದರಿಂದಲೇ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ವೇಗ ಸಿಗಲೆಂದು ಪ್ರತಿವರ್ಷದಂತೆ ಜೂನ್ 16 ರಿಂದ 22, 2023 ರ ವರೆಗಿನ ಸಮಯದಲ್ಲಿ `ಶ್ರೀ ರಾಮನಾಥ ದೇವಸ್ಥಾನ’, ಫೊಂಡ, ಗೋವಾದಲ್ಲಿ 11 ನೇ `ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿದೆ, ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಪ್ರಶಾಂತ ಹೇಮಂತ ಜುವೇಕರರವರು ಪತ್ರಿಕಾ ಪರಿಷತ್ತಿನಲ್ಲಿ ನೀಡಿದ್ದಾರೆ. ಈ ಸಮಯದಲ್ಲಿ ಸನಾತನ ಸಂಸ್ಥೆಯ ಸದ್ಗುರು ನಂದಕುಮಾರ ಜಾಧವ ಹಾಗೂ ನ್ಯಾಯವಾದಿ ಯೋಗೇಶ ಪಾಟೀಲ ರವರು ಉಪಸ್ಥಿತರಿದ್ದರು.

ಸಾತಪುಡಾ ನಿವಾಸಿನಿ ಮನುದೇವಿ ದೇವಸ್ಥಾನದ ಕಾರ್ಯದರ್ಶಿಗಳಾದ ಪ್ರಾ. ನೀಲಕಂಠ ಚೌಧರಿಯವರು ಮಾತನಾಡುತ್ತ, ಕಳೆದ ವರ್ಷದ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ `ದೇವಸ್ಥಾನಗಳ ಸುವ್ಯವಸ್ಥಾಪನೆ’ಯ ವಿಷಯದಲ್ಲಿ ನಡೆದ ಮಾರ್ಗದರ್ಶನದಿಂದಾಗಿ ಈ ವರ್ಷ ಜಳಗಾವನಲ್ಲಿ ರಾಜ್ಯಮಟ್ಟದ ದೇವಸ್ಥಾನಗಳ ನ್ಯಾಸ/ಟ್ರಸ್ಟ್ ಗಳ ಪರಿಷತ್ತು’ ನಡೆಯಿತು. ಈ ವರ್ಷದ ಮಹೋತ್ಸವದಲ್ಲಿ `ದೇವಸ್ಥಾನ ಸಂಸ್ಕೃತಿ ರಕ್ಷಣೆ’ಯ ವಿಷಯದಲ್ಲಿ ಮುಂದಿನ ಆಯೋಜನೆಯ ದೃಷ್ಟಿಯಿಂದ ವ್ಯಾಪಕ ವಿಚಾರ ಮಂಥನ ನಡೆಯಲಿದೆ ಹಾಗೂ ಅದಕ್ಕಾಗಿ ಈ ವರ್ಷ ಅನೇಕ ದೇವಸ್ಥಾನಗಳ ವಿಶ್ವಸ್ಥರು ಈ ಮಹೋತ್ಸವದಲ್ಲಿ ಸಹಭಾಗಿಯಾಗಲಿದ್ದಾರೆ, ಎಂದು ಹೇಳಿದರು.

7 ದೇಶ ಮತ್ತು ಭಾರತದ 28 ರಾಜ್ಯಗಳಿಂದ ಹಿಂದುತ್ವನಿಷ್ಠರು ಬರಲಿದ್ದಾರೆ !

ಈ ಅಧಿವೇಶನಕ್ಕೆ ಅಮೇರಿಕ, ಇಂಗ್ಲೆಂಡ್, ಇಂಡೋನೇಷಿಯಾ, ಸಿಂಗಪೂರ, ಬೆಲ್ಜಿಯಂ, ಬಾಂಗ್ಲಾದೇಶ ಹಾಗೂ ನೇಪಾಳ ಈ ದೇಶಗಳೊಂದಿಗೆ ಭಾರತದಲ್ಲಿನ 28 ರಾಜ್ಯಗಳಲ್ಲಿನ 350 ಕ್ಕೂ ಹೆಚ್ಚಿನ ಹಿಂದೂ ಸಂಘಟನೆಗಳ 1500 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಅಮಂತ್ರಿಸಲಾಗಿದೆ. ಈ ಮಹೋತ್ಸವದಲ್ಲಿ ಹಿಂದೂಗಳ ಮೇಲಿನ ಅತ್ಯಾಚಾರಗಳಂತಹ ವಿವಿಧ ವಿಷಯಗಳೊಂದಿಗೆ ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಅವಶ್ಯಕವಿರುವ ವಿಷಯಗಳ ಮೇಲೆ ವಿಚಾರ ಮಂಥನ ನಡೆಯಲಿದೆ.