ಕೇರಳದಲ್ಲಿ ಬಡತನರೇಖೆಗಿಂತ ಕೆಳಗಿರುವ 20 ಲಕ್ಷ ಕುಟುಂಬಗಳಿಗೆ ಉಚಿತ ಇಂಟರನೆಟ್ ಸೌಲಭ್ಯ !

ತಿರುವನಂತಪುರಮ್ (ಕೇರಳ) – ಇಂದು ಇಂಟರನೆಟ್ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಪಿಣರಾಯಿ ವಿಜಯನ್ ಸರಕಾರವು ರಾಜ್ಯದಲ್ಲಿ ಬಡತನ ರೇಖೆಯ ಕೆಳಗೆ ಇರುವ 20 ಲಕ್ಷಕ್ಕಿಂತ ಅಧಿಕ ಕುಟುಂಬಗಳಿಗೆ ಉಚಿತ ಇಂಟರನೆಟ್ ಸೌಲಭ್ಯವನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿಯಲ್ಲಿ ಮೊದಲ ಹಂತದ 7 ಸಾವಿರ ಕುಟುಂಬಗಳಿಗೆ ಈ ಸೇವೆಯನ್ನು ನೀಡಲು ಪ್ರಾರಂಭಿಸಿದೆ. ‘ಕೇರಳ ಫೈಬರ ಆಪ್ಟಿಕ್ ನೆಟವರ್ಕ’ ಎಂದು ಈ ಯೋಜನೆಯ ಹೆಸರು ಆಗಿದೆ, ರಾಜ್ಯದಲ್ಲಿ ‘ಇಂಟರನೆಟ್ ನಾಗರಿಕರ ಮೂಲಭೂತ ಅಧಿಕಾರವಾಗಿದೆ’, ಎಂದು ರಾಜ್ಯ ಸರಕಾರ ಈ ಹಿಂದೆಯೇ ಘೋಷಿಸಿದೆ. ಹಾಗೂ ಇಂತಹ ಯೋಜನೆಗಳನ್ನು ಪ್ರಾರಂಭಿಸುವ ಕೇರಳ ಮೊದಲ ರಾಜ್ಯವಾಗಿದೆ.

1. ಈ ಯೋಜನೆಯಲ್ಲಿ ರಾಜ್ಯದ 30 ಸಾವಿರಕ್ಕಿಂತ ಹೆಚ್ಚು ಸರಕಾರಿ ಸಂಸ್ಥೆಗಳನ್ನೂ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಸರಕಾರಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮಾವೇಶವಿದೆ.

2. ರಾಜ್ಯಾದ್ಯಂತ ಇಲ್ಲಿಯವರೆಗೆ 34 ಸಾವಿರ ಕಿಮೀಗಳಷ್ಟು ಕೇಬಲ ಭೂಮಿಯ ಕೆಳಗೆ ಹಾಕಲಾಗಿದೆ.

3. ಆದಾಯಕ್ಕಾಗಿ ಉಪಯೋಗಿಸದೇ ಇರುವ ಫೈಬರ್ ಬಾಡಿಗೆಯ ಆಧಾರದಲ್ಲಿಯೂ ನೀಡಲು ನಿರ್ಧರಿಸಲಾಗಿದೆ ಎಂದು ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಬಾಬು ಇವರು ಮಾಹಿತಿ ನೀಡಿದ್ದಾರೆ.

ಸಂಪಾದಕರ ನಿಲುವು

ಉಚಿತ ಇಂಟರನೆಟ್ ಸೇವೆಯನ್ನು ನೀಡುವ ಕಮ್ಯುನಿಸ್ಟ ಸರಕಾರವು ಇದಕ್ಕಾಗಿ ಸಾಮಾನ್ಯ ಜನತೆಯ ಜೇಬಿನಿಂದ ಕೊಡಲಿದೆಯೆನ್ನುವುದು ಖಂಡಿತ ! ಕಮ್ಯುನಿಸ್ಟ ಸರಕಾರ ಅದರ ಬದಲಾಗಿ ಬಡವರಿಗೆ ಉದ್ಯೋಗ ನೀಡಿ ಅವರನ್ನು ಸ್ವಾವಲಂಬಿಗೊಳಿಸಿದರೆ ಇಂತಹ ಯೋಜನೆಗಳನ್ನು ಜಾರಿಗೊಳಿಸುವ ಸಮಯ ಬರುವುದಿಲ್ಲ; ಆದರೆ ಮತಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೊಳಿಸುವ ಕಮ್ಯನಿಸ್ಟರ ಗಮನಕ್ಕೆ ಈ ಬರುವ ದಿನವೇ ಸುದಿನವಾಗಿದೆ !