ಮಂಗಳೂರಿನಲ್ಲಿ ಧಾರ್ಮಿಕ ಹಿಂಸಾಚಾರ ತಡೆಯಲು ಪೊಲೀಸರಿಂದ ಮತಾಂಧ ವಿರೋಧಿ ದಳದ ಸ್ಥಾಪನೆ

ಅಮಾಯಕ ಹಿಂದೂ ಯುವಕರ ಮೇಲೆ ಕ್ರಮ ಕೈಗೊಂಡರೆ ಅದರ ಪರಿಣಾಮ ನೆಟ್ಟಗೆ ಇರುವುದಿಲ್ಲ ! – ವಜ್ರದೇಹಿ ಸ್ವಾಮೀಜಿಯವರ ಎಚ್ಚರಿಕೆ

ಮಂಗಳೂರು – ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮತಾಂಧತೆ ವಿರೋಧಿ ದಳದ ಸ್ಥಾಪನೆ ಮಾಡಲಾಗಿದೆ. ಮಂಗಳೂರಿನ ಗುರುಪುರದ ಶ್ರೀವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಇವರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿಯವರು, ‘ಸರಕಾರ ಬಿಗುವಿನ ವಾತಾವರಣ ತಡೆಯುವುದಕ್ಕಾಗಿ ಸಮಾಜದಲ್ಲಿ ಬಿರುಕು ಮೂಡಿಸಬಾರದು. ಓರ್ವ ಸಹೋದರಿ ಮತಾಂಧನ ಕೈಯಲ್ಲಿ ಸಿಲುಕಿದಾಗ ಹಿಂದೂ ಕೇವಲ ನೋಡುಗರಾಗಿ ಉಳಿಯುವುದಿಲ್ಲ. ಅಮಾಯಕ ಹಿಂದೂ ಯುವಕರನ್ನು ವಶಕ್ಕೆ ಪಡೆದರೆ ಅದರ ಪರಿಣಾಮ ನೆಟ್ಟಿಗೆ ಇರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ರಾಜ್ಯದ ಗೃಹ ಸಚಿವರು ಶ್ರೀ.ಜಿ. ಪರಮೇಶ್ವರ್ ಇವರು, ಈ ದಳದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಕೈಗೆತ್ತಿಕೊಳ್ಳಲಾಗುತ್ತದೆ. ಆದ್ದರಿಂದ ಇಲಾಖೆಯ ಮತ್ತು ಜಿಲ್ಲೆಯ ಹೆಸರು ಕಳಂಕಿತಗೊಳ್ಳುತ್ತದೆ. ಇಂತಹ ಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಲು ಈ ದಳದ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.