ಇರಾನ್‌ನಲ್ಲಿ 75 ಸಾವಿರ ಮಸೀದಿಗಳಲ್ಲಿ 50 ಸಾವಿರ ಮಸೀದಿಗಳು ಬಂದ್ !

  • ಇರಾನ್ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪರಿಣತರಲ್ಲಿ ಒಬ್ಬರಾದ ಮೌಲಾನಾ ಬಗ್ಗೆ ಮಾಹಿತಿ !

  • ನಮಾಜ್ ಗೆ ಜನರಿಂದ ನಿರ್ಲಕ್ಷ್ಯ!

  • ಇರಾನ್‌ನ ದೊರೆ ಅಮಾನವೀಯವಾಗುದ್ದೂ ಅವನ ಸರ್ವಾಧಿಕಾರದ ಆಧಾರ ಇಸ್ಲಾಂ ಎಂದು ಜನರ ಭಾವನೆ !

ಮೌಲಾನಾ ಮಹಮ್ಮದ್ ಅಬೋಲ್ಗಾಸೀಂ ದೌಲಾಬಿ

ಟೆಹ್ರಾನ್ (ಇರಾನ್) – ಕಳೆದ ಕೆಲವು ತಿಂಗಳುಗಳಿಂದ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಮಹಿಳೆಯರ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಓರ್ವ ಪ್ರಮುಖ ಮೌಲ್ವಿಯು(ಇಸ್ಲಾಂನ ಅಧ್ಯಯನಕಾರ), ದೇಶದ 75 ಸಾವಿರ ಮಸೀದಿಗಳಲ್ಲಿ 50 ಸಾವಿರ ಮಸೀದಿಗಳು ಬಂದ್ ಆಗಿದೆ ಎಂದು ದಾವೆ ಮಾಡಿದ್ದಾರೆ. ಮೌಲಾನ ಹೆಸರು ಮುಹಮ್ಮದ್ ಅಬೋಲ್ಗಸೀಮ್ ದೌಲಾಬಿ ಎಂದಾಗಿದೆ. ಈ ಮೌಲಾನಾ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸರಕಾರ ಮತ್ತು ದೇಶದ ಮೌಲಾನಾ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾನೆ. ಮೌಲಾನಾ ದೌಲಾಬಿ ಅವರು ತಜ್ಞರ ಸಮಿತಿಯ ಸದಸ್ಯರೂ ಆಗಿದ್ದಾನೆ. ಈ ಸಮಿತಿಯು ಇರಾನ್‌ನ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುತ್ತದೆ.

ಇಸ್ಲಾಂನ ಹೆಸರಿನಲ್ಲಿ ಜನರನ್ನು ಸಮೃದ್ಧಿಯಿಂದ ದೂರವಿಡಲಾಗುತ್ತದೆ ಮತ್ತು ಬಡವರನ್ನಾಗಿ ಮಾಡಲಾಗುತ್ತದೆ !

ಮೌಲಾನಾ ಮಹಮ್ಮದ್ ಅಬೋಲ್ಗಾಸೀಂ ದೌಲಾಬಿಯು, ನಮಾಜ್ ಮಾಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಇರಾನ್‌ನ ಸೃಷ್ಟಿಯು ಹೆಚ್ಚುಕಡಿಮೆ ಇಸ್ಲಾಂ ಧರ್ಮದ ಸ್ಥಾಪನೆಯ ಸಮಯದಲ್ಲಾಗಿದೆ. ಇಂತಹ ಸಮಯದಲ್ಲಿ ಮಸೀದಿಗಳ ಸಂಖ್ಯೆ ಮತ್ತು ನಮಾಜು ಮಾಡುವವರ ಸಂಖ್ಯೆ ಆತಂಕದ ವಿಷಯವಾಗಿದೆ. ಇಸ್ಲಾಂನಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ಮಸೀದಿಗಳು ಬಂದ್ ಆಗುತ್ತಿವೆ. ಧಾರ್ಮಿಕ ಶಿಕ್ಷಣದಲ್ಲಿನ ಪುರಾಣಗಳಿಂದಾಗಿ ಇದು ನಡೆಯುತ್ತಿದೆ ಮತ್ತು ಇಸ್ಲಾಂ ಧರ್ಮದ ಹೆಸರಿನಲ್ಲಿ ಜನರನ್ನು ಸಮೃದ್ಧಿಯಿಂದ ದೂರವಿಡಲಾಗುತ್ತಿದೆ ಮತ್ತು ಬಡವರನ್ನಾಗಿ ಮಾಡಲಾಗುತ್ತಿದೆ. ಧರ್ಮದ ಹೆಸರಲ್ಲೂ ಜನರನ್ನು ಅವಮಾನಿಸಲಾಗುತ್ತಿದೆ. ಒಂದು ಧರ್ಮದ ಪರಿಣಾಮಗಳನ್ನು ಚರ್ಚಿಸಿದಾಗ, ಜನರು ಅದರ ಆಧಾರದ ಮೇಲೆ ಆ ಧರ್ಮವನ್ನು ತೊರೆಯಲು ಅಥವಾ ಸ್ವೀಕರಿಸಲು ನಿರ್ಧರಿಸುತ್ತಾರೆ. ಇರಾನ್‌ನ ಆಡಳಿತಗಾರರು ಅಮಾನವೀಯರು ಮತ್ತು ಅವರ ಸರ್ವಾಧಿಕಾರದ ಆಧಾರ ಇಸ್ಲಾಂ ಎಂಬ ಭಾವನೆ ಅನೇಕರ ಮನಸ್ಸಿನಲ್ಲಿದೆ. 2022ರ ಸೆಪ್ಟೆಂಬರ್‌ನಿಂದ ದೇಶದಲ್ಲಿ ನಡೆಯುತ್ತಿರುವ ಆಂದೋಲನವು ಇದರ ಪರಿಣಾಮವಾಗಿದೆ.

ಸಂಪಾದಕೀಯ ನಿಲುವು

ಜನರು ತಮ್ಮ ಕಣ್ಣುಗಳಿಂದ ಅಧ್ಯಯನ ಮಾಡಿದಾಗ, ಪ್ರಪಂಚದಾದ್ಯಂತ ಅದೇ ಸ್ಥಿತಿ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ !