ಇದುವರೆಗೆ ಎಲ್ಲ ಸರಕಾರಗಳೂ ಸಿಗರೇಟ್ ನಿಷೇಧಿಸದಿರುವ ಪರಿಣಾಮ !
ನೋಯ್ಡಾ (ಉತ್ತರ ಪ್ರದೇಶ) – ಇಲ್ಲಿ ಸಿಗರೇಟ್ ಸೇದಿದ್ದಕ್ಕೆ ಜೆ.ಐ.ಐ.ಎಮ್.ಎಸ್ (ಜಿಮ್ಸ್) ಈ ಕಾಲೇಜಿನ ವಸತಿ ನಿಲಯದ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ತೀವ್ರ ಹೊಡೆದಾಟ ನಡೆದಿದೆ. ಇದರಲ್ಲಿ ೧೫ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ ೪ ರಂದು ತಡರಾತ್ರಿ ಈ ಘಟನೆ ನಡೆದಿದೆ.
GIMS College Clash: GIMS के Students और Security Guards के बीच जमकर चले लाठी डंडे, 33 गिरफ्तार#GreaterNoidaStudentsClash #StudentsClash #GreaterNoida #Students #GIMS pic.twitter.com/NLzRD8Sjar
— Dainik Jagran (@JagranNews) June 5, 2023
ವಿದ್ಯಾರ್ಥಿಯೊಬ್ಬ ಸಿಗರೇಟ್ ಸೇದುತ್ತಿರುವುದನ್ನು ನೋಡಿ ಭದ್ರತಾ ಸಿಬ್ಬಂದಿ ಅದನ್ನು ತಡೆದರು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ನಂತರ ಹೊಡೆದಾಟ ನಡೆದಿದೆ. ಅಲ್ಲಿಗೆ ಇತರ ವಿದ್ಯಾರ್ಥಿಗಳೂ ಬಂದರು. ಹೀಗಾಗಿ ಭದ್ರತಾ ಸಿಬ್ಬಂದಿಯು ತನ್ನ ಇತರೆ ೫ ಮಂದಿ ಸಹಚರರನ್ನು ಕರೆಸಿಕೊಂಡಿದ್ದಾನೆ. ಆಗ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ತೀವ್ರ ಹೊಡೆದಾಟ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ೩೩ ಮಂದಿಯನ್ನು ಬಂಧಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.