ಓಡಿಸ್ಸಾದಲ್ಲಿ ಪುನಃ ಅಪಘಾತ, ಗೂಡ್ಸ್ ನ ೫ ಭೋಗಿಗಳ ಹಳ್ಳಿಯಿಂದ ಜಾರಿದೆ !

ನವ ದೆಹಲಿ – ಇತ್ತೀಚಿಗೆ ಕೋರಮಂಡಲ ಎಕ್ಸ್ಪ್ರೆಸ್ ನ ಭೀಕರ ಅಪಘಾತದ ನಂತರ ಈಗ ಒಡಿಸ್ಸಾ ರಾಜ್ಯದ ಇನ್ನೊಂದು ರೈಲು ಅಪಘಾತದ ವಾರ್ತೆ ಬೆಳಕಿಗೆ ಬಂದಿದೆ. ರಾಜ್ಯದ ಬಾರಗಢ ಜಿಲ್ಲೆಯ ಮೇಂಧಾಪಾಲಿ ಗ್ರಾಮದ ಬಳಿ ಒಂದು ಖಾಸಗಿ ಸಿಮೆಂಟ್ ಕಾರ್ಖಾನೆಯ ಪರಿಸರದಲ್ಲಿ ಒಂದು ಗೂಡ್ಸ್ ರೈಲಿನ ೫ ಭೋಗಿಗಳು ಹಳಿಯಿಂದ ಕೆಳಗೆ ಜಾರಿವೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಜೀವ ಹಾನಿ ನಡೆದಿಲ್ಲ. ಅಪಘಾತದಲ್ಲಿ ರೈಲ್ವೆ ಬೋರ್ಡಿನ ಯಾವುದೇ ಭೂಮಿಕೆ ಇರದೆ ಹಳಿಯ ಎಲ್ಲಾ ವ್ಯವಸ್ಥೆ ಸಂಬಂಧಿತ ಕಾರ್ಖಾನೆ ನೋಡಿಕೊಳ್ಳುತ್ತದೆ, ಎಂದು ಸಂಬಂಧಿತ ಆಡಳಿತ ಅಧಿಕಾರಿಗಳು ಮಾಹಿತಿ ನೀಡಿದರು.

ಕೋರಮಂಡಲ ಅಪಘಾತದಲ್ಲಿನ ಮೃತರ ಸಂಖ್ಯೆ ಮರೆಮಾಚಿಲ್ಲ ! – ಒಡಿಸ್ಸಾ ಸರಕಾರ

ಇನ್ನೊಂದು ಕಡೆ ಕೋರಮಂಡಲ ಎಕ್ಸ್ಪ್ರೆಸ್ಸಿನ ಅಪಘಾತದಲ್ಲಿ ಮೃತಪಟ್ಟಿರುವ ಜನರ ಸಂಖ್ಯೆ ನಾವು ಮರೆಮಾಚುತಿಲ್ಲ ಎಂದು ಒಡಿಶಾ ಸರಕಾರದ ಮುಖ್ಯ ಸಚಿವ ಪಿ.ಕೆ. ಜೇನ ಇವರು ಸ್ಪಷ್ಟಪಡಿಸಿದರು. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು, ಅವರ ರಾಜ್ಯದಲ್ಲಿ ಅನೇಕ ಅಪಘಾತ ಗ್ರಸ್ತ ಪ್ರವಾಸಿಗರ ಹುಡುಕಾಟ ಇನ್ನು ನಡೆದಿಲ್ಲ. ಈ ಪ್ರಕರಣದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಇವರು ಯಾವುದೇ ಟಿಪ್ಪಣಿ ಮಾಡಿಲ್ಲ. ಇಲ್ಲಿಯವರೆಗೆ ದೊರೆತಿರುವ ಒಟ್ಟು ೨೭೫ ಶವಗಳಲ್ಲಿ ಕೇವಲ ೧೦೮ ಜನರು ಗುರುತು ಸಿಕ್ಕಿದೆ. ಭಯಾನಕ ಉಷ್ಣತೆಯಿಂದ ಶವಗಳು ಬೇಗನೆ ಕೊಳೆಯುತ್ತಿರುವದರಿಂದ ಅವುಗಳ ಗುರುತು ಸಿಗುವುದು ಕಠಿಣವಾಗಿದೆ ಎಂದು ಮುಖ್ಯ ಸಚಿವ ಜೇನ ಇವರು ಹೇಳಿದರು. ಇನ್ನು ಎರಡು ದಿನ ಗುರುತು ಹಿಡಿಯುವ ಪ್ರಯತ್ನ ಮಾಡಲಾಗುವುದು, ಇಲ್ಲವಾದರೆ ಕಾನೂನಿನ ಪ್ರಕಾರ ರಾಜ್ಯ ಸರಕಾರ ಶವಗಳ ಅಂತಿಮ ಸಂಸ್ಕಾರದ ವ್ಯವಸ್ಥೆ ಮಾಡುವುದು ಎಂದು ಕೂಡ ಜೇನ ಇವರು ಸ್ಪಷ್ಟಪಡಿಸಿದರು.