ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ ಧರಿಸುವಂತೆ ಹೇಳಿದ ಶಾಲೆಯ ಪರವಾನಿಗೆ ರದ್ದು !

  • ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣರ ನಿರ್ಧಾರ

  • ಶಾಲೆಯಲ್ಲಿ ಅನೇಕ ಕುಂದುಕೊರತೆಗಳು ಕಂಡು ಬಂದಿದ್ದರಿಂದ ಕ್ರಮ !

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್

ಭೋಪಾಲ (ಮಧ್ಯಪ್ರದೇಶ) – ಮಧ್ಯಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣ ಇವರು ರಾಜ್ಯದ ದಮೋಹದಲ್ಲಿರುವ `ಗಂಗಾ ಜಮನಾ ಹೈಯರ ಸೆಕೆಂಡರಿ ಸ್ಕೂಲ’ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ. ಈ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ ಧರಿಸಿರುವ ಒಂದು ಪೋಸ್ಟರ ಪ್ರಸಾರವಾದ ಬಳಿಕ ಅದಕ್ಕೆ ವಿರೋಧ ವ್ಯಕ್ತವಾಗತೊಡಗಿತ್ತು. ತದನಂತರ ಸ್ಥಳೀಯ ಆಡಳಿತ ಈ ವಿಷಯದ ವಿಚಾರಣೆಯನ್ನು ಪ್ರಾರಂಭಿಸಿದಾಗ ಶಾಲೆಯ ಆಡಳಿತದಲ್ಲಿ ಅನೇಕ ಕುಂದು ಕೊರತೆಗಳು ಕಂಡು ಬಂದಿತು. ತದನಂತರ ಸರಕಾರವು ಈ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಿತು.

1. ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾಣ ಇವರು ಟ್ವೀಟ ಮಾಡಿ, ನನ್ನ ಸಹೋದರ ಮತ್ತು ಸಹೋದರಿಯರ ಮಕ್ಕಳೊಂದಿಗೆ (ಶಿವರಾಜ ಸಿಂಹ ಚೌಹಾಣರನ್ನು ರಾಜ್ಯದಲ್ಲಿ `ಮಾಮಾ’ ಎಂದು ಗುರುತಿಸುತ್ತಾರೆ) ಯಾವುದೇ ರೀತಿಯ ನಿಷ್ಕಾಳಜಿಯನ್ನು ಸಹಿಸಲಾಗುವುದಿಲ್ಲ. ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮವನ್ನು ಕೈಕೊಳ್ಳಲು ನಾವು ಕಟಿಬದ್ಧರಾಗಿದ್ದೇವೆ.

2. ಈ ಶಾಲೆಯಲ್ಲಿ ಗ್ರಂಥಾಲಯವಿಲ್ಲ, ಹಾಗೆಯೇ ರಸಾಯನ, ಭೌತಶಾಸ್ತ್ರಗಳಿಗೆ ಪ್ರತ್ಯೇಕ ಪ್ರಯೋಗಶಾಲೆಯಲ್ಲಿ ಹಳೆಯ `ಫರ್ನಿಚರ’ ಮತ್ತು ಸಾಮಗ್ರಿಗಳು ಕಂಡು ಬಂದವು. ಪ್ರಯೋಗಕ್ಕಾಗಿ ಆವಶ್ಯಕವಿರುವ ಸಾಮಗ್ರಿಗಳು ಇರಲಿಲ್ಲ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಶುದ್ಧ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯೂ ಇಲ್ಲದಿರುವುದು ವಿಚಾರಣೆಯ ಸಂದರ್ಭದಲ್ಲಿ ಕಂಡು ಬಂದಿದೆಯೆಂದು ತಿಳಿಸಿದ್ದಾರೆ.