ಫಿರೋಜಾಬಾದ್ (ಉತ್ತರ ಪ್ರದೇಶ) ನಲ್ಲಿ ೪೨ ವರ್ಷಗಳ ಹಿಂದೆ ೧೦ ಜನರ ಕೊಲೆಗೆ ಸಂಬಂಧಿಸಿದಂತೆ ೯೦ ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ !

ವಿಳಂಬವಾಗಿ ನೀಡಿದ ನ್ಯಾಯ ಅನ್ಯಾಯವಲ್ಲವೇ ?

ಫಿರೋಜಾಬಾದ್ (ಉತ್ತರ ಪ್ರದೇಶ) – ೪೨ ವರ್ಷಗಳ ಹಿಂದಿನ ಪ್ರಕರಣದಲ್ಲಿ ೯೦ ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ೫೫,೦೦೦ ರೂಪಯಿಗಳ ದಂಡ ವಿಧಿಸಲಾಯಿತು. ೧೯೮೧ ರಲ್ಲಿ ೧೦ ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಪ್ರಕರಣದಲ್ಲಿ ೧೦ ಮಂದಿ ತಪ್ಪಿತಸ್ಥರಿದ್ದರು. ಪ್ರಕರಣದ ಸುದೀರ್ಘ ವಿಚಾರಣೆಯ ಸಮಯದಲ್ಲಿ ಒಂಬತ್ತು ಅಪರಾಧಿಗಳು ಸಾವನ್ನಪ್ಪಿದ್ದರೆ, ಶಿಕ್ಷೆಗೆ ಗುರಿಯಾದ ೯೦ ವರ್ಷದ ಗಂಗಾದಯಾಲ ಮಾತ್ರ ಉಳಿದಿರುವ ಅಪರಾಧಿಯಾಗಿದ್ದಾನೆ. ವಯಸ್ಸಿನ ಕಾರಣದಿಂದ ಗಂಗಾದಯಾಲ ಅವರಿಗೆ ನಿಲ್ಲಲೂ ಆಗುವುದಿಲ್ಲ. ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದ ನಂತರ, ಪೊಲೀಸರು ಅವರನ್ನು ಹಿಡಿದು ನ್ಯಾಯಾಲಯದಿಂದ ಹೊರಗೆ ಕರೆದೊಯ್ದರು.