ಇಸ್ರೋದಿಂದ ಜುಲೈನಲ್ಲಿ ‘ಚಂದ್ರಯಾನ-೩’ ಉಡಾವಣೆ !

ನವ ದೆಹಲಿ – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ ತಿಂಗಳಲ್ಲಿ ‘ಚಂದ್ರಯಾನ-೩’ ಅನ್ನು ಉಡಾವಣೆ ಮಾಡಲಿದೆ. ಉಡಾವಣೆ ಯಶಸ್ವಿಯಾದರೆ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಲಿದೆ. ಈ ಹಿಂದೆ ಅಮೆರಿಕಾ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದಾರೆ.
ಚಂದ್ರಯಾನ-೨ ಅನ್ನು ಜುಲೈ 22, ೨೦೧೯ ರಂದು ಉಡಾವಣೆ ಮಾಡಲಾಗಿತ್ತು. ಸೆಪ್ಟೆಂಬರ್ ೭, ೨೦೧೯ ರಂದು, ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಪ್ರಯತ್ನಿಸುವಾಗ ಪತನಗೊಂಡಿತು.

ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು, ಚಂದ್ರಯಾನ-೨ ಮಿಷನ್‌ನಲ್ಲಿ ನಾವು ವಿಫಲವಾಗಿದ್ದೇವೆ. ಪ್ರತಿ ಬಾರಿಯೂ ನಾವು ಯಶಸ್ವಿಯಾಗುತ್ತೇವೆ ಹೀಗಿರುವುದಿಲ್ಲ; ಆದರೆ ನಾವು ಅದರಿಂದ ಪಾಠ ಕಲಿತು ಮುಂದುವರಿಯಬೇಕು. ವೈಫಲ್ಯ ಸಂಭವಿಸಿದೆ; ಎಂದು ನಾವು ಪ್ರಯತ್ನವನ್ನು ಬಿಡಬಾರದು. ಚಂದ್ರಯಾನ-೩ ಮಿಷನ್‌ನಿಂದ ನಾವು ಬಹಳಷ್ಟು ಕಲಿಯುತ್ತೇವೆ ಮತ್ತು ನಾವು ಇತಿಹಾಸವನ್ನು ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ.