ಚಲಿಸುತ್ತಿರುವ ರೈಲಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ದಂಪತಿಗಳನ್ನು ಪೊಲೀಸರ ಸ್ವಾಧೀನ !

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕಾ ಕಾನುನಗೋ ಅವರ ಶ್ಲಾಘನೀಯ ಕ್ರಮ !

ನವ ದೆಹಲಿ – ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಂಕ ಕಾನುನಗೋ ಇವರು ಮಧ್ಯಪ್ರದೇಶದಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪ್ರಾಪ್ತ ಬಾಲಕಿಯರ ಕಳ್ಳಸಾಗಣೆ ಮಾಡುತ್ತಿದ್ದ ದಂಪತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೇ ೩೦ ರ ರಾತ್ರಿ ಕನುನುಗೋ ಇವರು ಕಟನಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ದಂಪತಿಗಳ ಮೇಲೆ ಅನುಮಾನ ಬಂದಿತ್ತು. ಅವರ ಜೊತೆ ೧೫-೧೬ ವರ್ಷದ ಹುಡುಗಿ ಇದ್ದಳು. ದಂಪತಿಗಳು ಹುಡುಗಿಯ ಪೋಷಕರಂತೆ ಕಾಣಿಸುತ್ತಿರಲಿಲ್ಲ. ಅವರ ನಡುವಳಿಕೆ ವಿಚಿತ್ರವಾಗಿದ್ದುದರಿಂದ ಕಾನುನಗೊರವರು ಅವರನ್ನು ವಿಚಾರಿಸಿದರು. ಅವರ ದಾಖಲೆಗಳನ್ನು ಪರಿಶೀಲಿಸಿದರು ಆಗ ಅವರ ಅನುಮಾನ ಸರಿಯಾಯಿತು. ಅವರು ಹುಡುಗಿಯ ಕಳ್ಳಸಾಗಣೆ ಮಾಡಲು ಹೋಗುತ್ತಿದ್ದರು. ತಕ್ಷಣ ಕಾನುನಗೊ ಪೊಲೀಸರನ್ನು ಸಂಪರ್ಕಿಸಿ ಇಬ್ಬರನ್ನೂ ಸಾಗರ್ ರೈಲು ನಿಲ್ದಾಣದಲ್ಲಿ ಅವರನ್ನು ಪೋಲಿಸರಿಗೆ ಒಪ್ಪಿಸಿದರು ಹಾಗೂ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಇಡೀ ಪ್ರಕರಣದ ವಿಡಿಯೋ ಮಾಡಲಾಗಿದೆ.

ಬಾಲಕಿ ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದವಳಾಗಿದ್ದು, ಆಕೆಗೆ ಸಮಾಲೋಚನ ನಡೆಸಲಾಗುತ್ತಿದೆ. ಅವಳ ಸಾಮಾಜಿಕ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಈ ವರದಿಯಡಿ, ಯುವತಿಯನ್ನು ಕಳ್ಳಸಾಗಣೆದಾರರಿಗೆ ಹಸ್ತಾಂತರಿಸುವ ಹಿಂದಿನ ಕುಟುಂಬದ ಪರಿಸ್ಥಿತಿಯನ್ನು ಅಧ್ಯಯನ ಮಾಡಲಾಗುತ್ತದೆ. ಒಟ್ಟಾರೆ ಪರಿಸ್ಥಿತಿ ಅವಲೋಕಿಸಿದರೆ, ಮನೆಗೆ ಕಳುಹಿಸಿದ ನಂತರ ಮತ್ತೆ ಕಳ್ಳಸಾಗಣಿಕೆದಾರರ ಬಳಿ ಬಾಲಕಿಯನ್ನು ಕಳುಹಿಸುವ ಸಾಧ್ಯತೆಯಿದೆ, ಆದ್ದರಿಂದ ಆಕೆಯನ್ನು ಮನೆಗೆ ಕಳುಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.