ಶ್ರೀ ತುಳಜಾಭವಾನಿ ದೇವಿಗೆ ಅರ್ಪಿಸಿರುವ ಬಂಗಾರ ಮತ್ತು ಬೆಳ್ಳಿಯನ್ನು ಕರಗಿಸಲು ನಿರ್ಧಾರ !

ಶ್ರೀ ತುಳಜಾಭವಾನಿ ದೇವಿಗೆ ಅರ್ಪಿಸಿರುವ ಬಂಗಾರ ಮತ್ತು ಬೆಳ್ಳಿ

ತುಳಜಾಪೂರ (ಧಾರಾಶಿವ ಜಿಲ್ಲೆ) – ಶ್ರೀ ತುಳಜಾಭವಾನಿ ದೇವಿಗೆ ಅರ್ಪಿಸಿರುವ ಬಂಗಾರ ಮತ್ತು ಬೆಳ್ಳಿಯನ್ನು ಕರಗಿಸುವಂತೆ ನಿರ್ಧರಿಸಲಾಗಿದೆ. ಜೂನ 5 ರಂದು `ವಿಡಿಯೋ ರೆಕಾರ್ಡಿಂಗ’ ಮತ್ತು ಸಿಸಿಟಿವಿ ಛಾಯಾಚಿತ್ರಣದ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ನಡೆಯಲಿದೆ.

ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ಮಂದಿರ ಸಂಸ್ಥಾನದ ಅಧ್ಯಕ್ಷರಾದ ಡಾ. ಓಂಬಾಸೆಯವರು ಸಮಿತಿಯನ್ನು ಸ್ಥಾಪಿಸಿದ್ದಾರೆ. ಈ ಸಮಿತಿಯಲ್ಲಿ ಉಸ್ತುವಾರಿ ತಹಶೀಲ್ದಾರ, ಮುಜರಾಯಿ ಆಯುಕ್ತರ ಪ್ರತಿನಿಧಿ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಲೆಕ್ಕಾಧಿಕಾರಿಗಳು, ಭೋಪೆ ಪೂಜಾರಿ ಮಂಡಳದ ಅಧ್ಯಕ್ಷ ಅಮರರಾಜೆ ಕದಮ, ಪಾಳಿಕರ ಪೂಜಾರಿ ಮಂಡಳದ ಅಧ್ಯಕ್ಷ ಸಜ್ಜನರಾವ ಸಾಳುಂಕೆ, ಪೂಜಾರಿ ಮಂಡಳದ ಉಪಾಧ್ಯೆ ಅನಂತ ಕೊಂಡೊ, ಮಹಂತ ಚಿಲೋಜಿಬುವಾ, ಮಹಂತ ತುಕೋಜಿಬುವಾ, `ಬ್ಯಾಂಕ ಆಫ್ ಇಂಡಿಯಾ’ದ ಸೋನಾರ ಧನಂಜಯ ವೇದಪಾಠಕ ಮತ್ತು ರವಿ ಮಹಾಮುನಿಯವರು ಇದ್ದಾರೆ.