-
ಬಾಂಗ್ಲಾದೇಶದ ಹಿಂದೂ ಸಂಘಟನೆಗಳ ವಿರೋಧ
-
ಹಿಂದೂ ಕುಟುಂಬಗಳನ್ನು ಗಡಿಪಾರು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪ
ನವ ದೆಹಲಿ – ಬಾಂಗ್ಲಾದೇಶದ ಹಿಂದೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಇದರಿಂದ ಹಿಂದೂಗಳ ಒಂದು ಗುಂಪು ಚಿಂತೆಯಲ್ಲಿದೆ. ಅವರ ಪ್ರಕಾರ ಈ ಅರ್ಜಿಯ ಉದ್ದೇಶ ಹಿಂದೂ ಕುಟುಂಬಗಳನ್ನು ಬೇರ್ಪಡಿಸುವ ಮತ್ತು ಹಿಂದೂಗಳನ್ನು ಬಾಂಗ್ಲಾದೇಶದಿಂದ ಹೊರದಬ್ಬುವುದಾಗಿದೆ.
1. 3 ಹಿಂದೂ ವ್ಯಕ್ತಿಗಳು ಮತ್ತು 6 ಮಾನವ ಹಕ್ಕುಗಳ ಸಂಘಟನೆಗಳು ಈ ಅರ್ಜಿಯನ್ನು ದಾಖಲಿಸಿವೆ. ಇದರಲ್ಲಿ `ಐನ್ ಓ ಸಲಿಶ್ ಕೇಂದ್ರ’ ಈ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಝೆಡ.ಐ. ಖಾನ ಪನ್ನಾ ಇವರು, ನಾವು ಅರ್ಜಿಯಲ್ಲಿ ಕೇವಲ ಮೂಲಭೂತ ಮಾನವ ಹಕ್ಕುಗಳನ್ನು ಕೋರುತ್ತಿದ್ದೇವೆ. (ಹಿಂದೂ ಮಹಿಳೆಯರಿಗೆ ಏನು ಬೇಕು ಮತ್ತು ಬೇಡ ? ಎಂದು ನೋಡಲು ಹಿಂದೂಗಳು ಸಕ್ಷಮರಾಗಿದ್ದಾರೆ. ಅದರಲ್ಲಿ ಇತರೆ ಧರ್ಮದವರು ಮೂಗು ತೂರಿಸಬಾರದು. ಬದಲು ಮುಸಲ್ಮಾನ ಮಹಿಳೆಯರಿಗೆ ಅಧಿಕಾರ ನೀಡುವ ಕಡೆಗೆ ಗಮನ ಹರಿಸಬೇಕು ! – ಸಂಪಾದಕರು)
2. ಅರ್ಜಿಯಲ್ಲಿ, ಹಿಂದೂ ಮಹಿಳೆಯರು ಇಂದಿಗೂ ಪಾರಂಪರಿಕ ಕಾನೂನಿನ ಅನುಸಾರ ನಡೆದುಕೊಳ್ಳುತ್ತಿದ್ದಾರೆ ಅವರಿಗೆ ‘ಸಮಾಜದ ಹೊರೆ’ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಸಮಾನವಾಗಿ ನಡೆಸಿಕೊಳ್ಳುವುದಾಗಿ ಆಶ್ವಾಸನೆಯನ್ನು ನೀಡಲಾಗಿದೆ. ಈ ಆಶ್ವಾಸನೆ ಹಿಂದೂ ಮಹಿಳೆಯ ಸಂದರ್ಭದಲ್ಲಿ ಪೂರ್ಣವಾಗುತ್ತಿರುವುದು ಕಂಡು ಬರುತ್ತಿಲ್ಲ. ಪಕ್ಕದ ಹಿಂದೂ ಬಹುಸಂಖ್ಯಾತ ಭಾರತ ಸಹಿತ ಸಂಪೂರ್ಣ ಜಗತ್ತಿನ ಮಹಿಳೆಯರ ಜೀವನ ಕಾನೂನಿನ ಅನುಸಾರ ನಡೆಯುತ್ತದೆ. ಇದರಿಂದ ಬಾಂಗ್ಲಾದೇಶದಲ್ಲಿಯೂ ಹಾಗೆ ನಡೆಯುವುದು ಆವಶ್ಯಕವಾಗಿದೆ. ಇದಕ್ಕಾಗಿ ಸಮರ್ಪಕ ಹೆಜ್ಜೆಗಳನ್ನು ಮುಂದಿಡಬೇಕು.
3. ಬಾಂಗ್ಲಾದೇಶದಲ್ಲಿ 2012 ರಲ್ಲಿ `ಹಿಂದೂ ವಿವಾಹ ನೊಂದಣಿ ಅಧಿನಿಯಮ 2012’ ಅನುಮೋದಿಸಲಾಗಿದೆ. ಇದರಲ್ಲಿ ಹಿಂದೂಗಳಿಗೆ ವಿವಾಹದ ನೊಂದಣಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿಲ್ಲ.
4. ಅರ್ಜಿಯಲ್ಲಿ, ಹಿಂದೂ ಮಹಿಳೆಯರ ವಿವಾಹ ವಿಚ್ಛೇದನ, ಜೀವನಾಂಶ, ಮಕ್ಕಳನ್ನು ದತತ್ಉ ಪಡೆಯುವುದು ಇತ್ಯಾದಿ ಅಧಿಕಾರ ಸಿಗಬೇಕು. ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಪಾಲಿರಬೇಕು. ಹಿಂದೂ ಮಹಿಳೆಯರ ಜೀವನ ಆಧುನಿಕ ಕಾನೂನಿನ ಅನುಸಾರ ನಡೆಯಬೇಕು.
5. ಹಿಂದೂ ಸಂಘಟನೆ ‘ಬಾಂಗ್ಲಾದೇಶ ಹಿಂದೂ ಗ್ರ್ಯಾಂಡ ಅಲಾಯನ್ಸ’ ಈ ಅರ್ಜಿಯನ್ನು ವಿರೋಧಿಸಿದೆ. ಹಾಗೆಯೇ ಈ ಸಂಘಟನೆಯು ಇದನ್ನು ವಿರೋಧಿಸಿ ಅನೇಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಿದೆ. ಈ ಸಂಘನಟೆಯ ಕಾರ್ಯದರ್ಶಿ ಗೋವಿಂದ ಚಂದ್ರ ಪ್ರಾಮಾಣಿಕ ಇವರು, ಅರ್ಜಿದಾರಿಗೆ ಶಾಂತಿ ಬೇಡವಾಗಿದೆ. ಅವರು ನಮ್ಮ ಕುಟುಂಬಗಳನ್ನು ಬೇರ್ಪಡಿಸಲು ಇಚ್ಛಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶದಿಂದ ನಮ್ಮನ್ನು ಹೊರದಬ್ಬಲು ನೋಡುತ್ತಿದ್ದಾರೆ. ಕೆಲವು ಸರಕಾರೇತರ ಸಂಸ್ಥೆಗಳು ತಮ್ಮ ಸ್ವಾರ್ಥಕ್ಕಾಗಿ ಈ ಅರ್ಜಿಯನ್ನು ದಾಖಲಿಸಿದ್ದಾರೆ.
6. ‘ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಏಕತಾ ಪರಿಷತ್ತು’ ಹೆಸರಿನ ಸಂಘಟನೆಯ ಕಾರ್ಯದರ್ಶಿ ರಾಣಾ ದಾಸಗುಪ್ತಾ ಇವರು, ನಮ್ಮ ಸಂಘಟನೆ ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನನಗೆ ವೈಯಕ್ತಿಕವಾಗಿ ಅನಿಸುವುದೇನೆಂದರೆ, ಮಹಿಳೆಯರು ಅಧಿಕಾರದಿಂದ ವಂಚಿತರಾಗಿದ್ದು ಅವರ ಸ್ಥಿತಿ ಬದಲಾಗಬೇಕಾಗಿದೆ ಎಂದು ಹೇಳಿದ್ದಾರೆ.
ಸಂಪಾದಕರ ನಿಲುವುಬಾಂಗ್ಲಾದೇಶದ ಹಿಂದೂಗಳ ಒಟ್ಟಾರೆ ಸ್ಥಿತಿ ಹದಗೆಟ್ಟಿದ್ದೂ, ಅವರ ಅಸ್ತಿತ್ವವನ್ನೇ ನಷ್ಟಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಏಕೆ ಅರ್ಜಿ ದಾಖಲಿಸಲಾಗುತ್ತಿಲ್ಲ ? |