ಜಪಾನ್ ನಲ್ಲಿ ದೇವಸ್ಥಾನದ ಮೇಲೆ ನಡೆದ ದಾಳಿಯ ಬಳಿಕ ಮುಸಲ್ಮಾನರಿಗೆ ವಿರೋಧ ವ್ಯಕ್ತ !

20 ವರ್ಷದಲ್ಲಿ ಜಪಾನ್ ನಲ್ಲಿ ಮುಸಲ್ಮಾನರ ಜನಸಂಖ್ಯೆ 20 ಸಾವಿರದಿಂದ 2 ಲಕ್ಷಕ್ಕೆ ತಲುಪಿತು !

ಟೊಕಿಯೋ (ಜಪಾನ) – ಜಪಾನ್ ನ ಕೊಬೆ ನಗರದ ಶಿಂಟೊ ದೇವಸ್ಥಾನದ ಪರಿಸರದಲ್ಲಿ ಹಳದಿ ವಸ್ತ್ರವನ್ನು ಧರಿಸಿದ್ದ ಮುಸಲ್ಮಾನ ವ್ಯಕ್ತಿಯು ಕೆಲವು ದಿನಗಳ ಹಿಂದೆ ದೇವಸ್ಥಾನದ ಅಪಘಣೆ ಪೆಟ್ಟಿಗೆಯನ್ನು ಕಾಲಿನಿಂದ ಒದ್ದಿದ್ದನು. ಅರ್ಪಣೆ ಪೆಟ್ಟಿಗೆಯನ್ನು ಧ್ವಂಸಗೊಳಿಸಿದ ಬಳಿಕ ಅವನು `ಅಲ್ಲಾ ಒಬ್ಬನೇ ಈಶ್ವರನಾಗಿದ್ದಾನೆ’, ಎಂದು ಹೇಳುತ್ತಾ ದೇವಸ್ಥಾನದಲ್ಲಿ ಪ್ರಾರ್ಥಿಸುತ್ತಿದ್ದ ಮಹಿಳೆಯರಿಗೆ ಬೆದರಿಕೆ ಹಾಕಿದ್ದನು. ಜಪಾನ್ ನಲ್ಲಿ ಕಳೆದ 1-2 ವರ್ಷಗಳಲ್ಲಿ ಧಾರ್ಮಿಕ ಸದ್ಭಾವನೆಯ ಮೇಲೆ ಆಘಾತವನ್ನುಂಟು ಮಾಡುವಂತಹ ಅನೇಕ ಘಟನೆಗಳು ಕಂಡು ಬಂದಿದೆ. ಇದರ ಮೂಲ ಕಾರಣ ಜಪಾನ್ ನಲ್ಲಿ ಹೆಚ್ಚುತ್ತಿರುವ ಮುಸಲ್ಮಾನ ಜನಸಂಖ್ಯೆ ಎಂದು ಹೇಳಲಾಗುತ್ತಿದೆ. ಈಗ ಜಪಾನ್ ನಲ್ಲಿ ಮುಸಲ್ಮಾನರನ್ನು ವಿರೋಧಿಸಲಾಗುತ್ತಿದೆ.

1. ಕಳೆದ 20 ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದೆ. 2000 ರಲ್ಲಿ 20 ಸಾವಿರದಷ್ಟು ಇದ್ದ ಮುಸಲ್ಮಾನರು ಈಗ 2 ಲಕ್ಷಕ್ಕಿಂತಲೂ ಅಧಿಕವಾಗಿದ್ದಾರೆ. ಮಸೀದಿಯ ಸಂಖ್ಯೆ 7 ಪಟ್ಟು ಹೆಚ್ಚಾಗಿದೆ. ಈ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಈಗ ಧಾರ್ಮಿಕ ಘರ್ಷಣೆಗಳು ನಡೆಯುತ್ತಿದೆಯೆನ್ನುವುದು ಕೊಬೊದಲ್ಲಿ ನಡೆದ ಘಟನೆಯಿಂದ ಕಂಡು ಬರುತ್ತಿದೆ.

2. ಓರ್ವ ಧರ್ಮೋಪದೇಶಕನು, ಜಪಾನ್ ನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸೇರಿದೆ. `ಯಾವುದೇ ವ್ಯಕ್ತಿ ಇತರೆ ಧರ್ಮದ ಜನರ ಶ್ರದ್ಧೆಯನ್ನು ನೋವುಂಟು ಮಾಡಬಾರದು’, ಎನ್ನುವುದು ಮೂಲ ವಿಚಾರವಾಗಿದೆ. ಜನರ ಶ್ರದ್ಧೆಗೆ ನೋವಾದರೆ, ಎರಡೂ ಧರ್ಮದ ಜನರು ಒಟ್ಟಿಗೆ ಬಾಳಲು ಸಾಧ್ಯವಿಲ್ಲ. ಹಾಗೆ ಮಾಡುವ ಮುಸಲ್ಮಾನ ಇತರೆ ಮುಸಲ್ಮಾನರ ವಾಸ್ತವ್ಯಕ್ಕೂ ಅಪಾಯವನ್ನು ನಿರ್ಮಾಣ ಮಾಡುತ್ತಾನೆ ಎಂದು ಹೇಳಿದರು.

3. ಒಬ್ಬ ವ್ಯಕ್ತಿಯು, ಇಸ್ಲಾಮಿನ ಉದ್ದೇಶ ಜಗತ್ತಿನಲ್ಲಿ ಪ್ರಭಾವವನ್ನು ನಿರ್ಮಾಣ ಮಾಡುವುದಾಗಿದೆ. ಇಂತಹ ವಿಚಾರ ಜಪಾನ್ ನಲ್ಲಿರುವ ಯಾವುದೇ ಧರ್ಮದಲ್ಲಿ ಇಲ್ಲವೆಂದು ಹೇಳಿದರು.

ಸಂಪಾದಕರ ನಿಲುವು

ಜಪಾನನಂತಹ ಶಾಂತಿಪ್ರಿಯ ದೇಶದಲ್ಲಿಯೂ ಮುಸಲ್ಮಾನರ ಜನಸಂಖ್ಯೆ ಹೆಚ್ಚಳವಾದರೆ ಏನಾಗುತ್ತದೆ ?, ಎನ್ನುವುದು ಜಗತ್ತಿಗೆ ಮತ್ತೊಮ್ಮೆ ನೋಡಲು ಸಿಗುತ್ತಿದೆ. ಇಸ್ಲಾಮಿನಲ್ಲಿ `ಶಾಂತಿ’ಎಂದು ಹೇಳಲಾಗುತ್ತಿದ್ದರೂ, ಸಂಪೂರ್ಣ ಜಗತ್ತಿನ ಸ್ಥಿತಿಯನ್ನು ನೋಡಿದರೆ ಇದು ವಾಸ್ತವವಲ್ಲ ಎನ್ನುವುದು ಗಮನಕ್ಕೆ ಬರುತ್ತದೆ !