ನ್ಯಾಯವಾದಿ ಶ್ರೀ. ಅಶ್ವಿನಿಕುಮಾರ್ ಉಪಾಧ್ಯಾಯರವರ ದಾವೆ !
ನವ ದೆಹಲಿ – ೨ ಸಾವಿರ ರೂಪಾಯಿ ನೋಟುಗಳ ಕುರಿತ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತಕ್ಷಣವೇ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
#SupremeCourt refuses to entertain urgent plea against ₹2,000 note withdrawalhttps://t.co/lQdAwDwxEB pic.twitter.com/cNdR2bzsQh
— Business Insider India🇮🇳 (@BiIndia) June 1, 2023
ಈ ಅರ್ಜಿಯ ಮೂಲಕ ೨ ಸಾವಿರ ರೂಪಾಯಿಯ ನೋಟುಗಳನ್ನು ಬದಲಾಯಿಸುವಾಗ ಗುರುತಿನ ಚೀಟಿಯನ್ನು ಪರಿಶೀಲಿಸುವಂತೆ ಒತ್ತಾಯಿಸಲಾಗಿತ್ತು. ಅದನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಭಾಜಪದ ಮುಖಂಡ ಹಾಗೂ ನ್ಯಾಯವಾದಿ ಶ್ರೀ. ಅಶ್ವಿನಿಕುಮಾರ್ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದರು. ದರೋಡೆಕೋರರು ಮತ್ತು ಕಳ್ಳಸಾಗಾಣಿಕೆದಾರರು ಕಳೆದ ವಾರದಲ್ಲಿ ೫೦೦೦೦ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ ಎಂದು ವಕೀಲ ಉಪಾಧ್ಯಾಯರು ಹೇಳಿದ್ದಾರೆ. ಈ ಮೂಲಕ ಎಲ್ಲಾ ಕಪ್ಪುಹಣವನ್ನು ಬಿಳುಪು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
. @RBI गवर्नर @DasShaktikanta जी,
23 मई से अब तक 2000 की कुल कितनी नोट बदली गई, कुल कितनी नोट खाते में जमा हुई और कुल कितनी नोट खाते के बाहर बदली गई?@PMOIndia @narendramodi pic.twitter.com/8NyrkQcdHD
— Ashwini Upadhyay (@AshwiniUpadhyay) June 1, 2023